News Karnataka Kannada
Thursday, April 18 2024
Cricket
ಕಾಸರಗೋಡು

ಅನೋಡಿ ಪಳ್ಳ ಜಲ ಸಂರಕ್ಷಣಾ ಯೋಜನೆ ಉದ್ಘಾಟನೆ

Kasaragod
Photo Credit :

ಕಾಸರಗೋಡು : ಪುತ್ತಿಗೆ ಗ್ರಾಮ ಪಂಚಾಯತ್ ನ ಅನೋಡಿ  ಪಳ್ಳ  ಜಲ ಸಂರಕ್ಷಣಾ ಯೋಜನೆಯನ್ನು  ಸೋಮವಾರ ಕೇರಳ ಬಂದರು ಖಾತೆ  ಸಚಿವ  ಅಹಮ್ಮದ್ ದೇವರ್ ಕೋವಿಲ್ ಉದ್ಘಾಟಿಸಿದರು.

ಈ ಯೋಜನೆಯಿಂದ ಪ್ರದೇಶದ ಜನತೆಗೆ ಅನುಕೂಲವಾಗಲಿದ್ದು , ಇಂತಹ ನೀರು ಸಂರಕ್ಷಣಾ ಯೋಜನೆಗಳು ರಾಜ್ಯದಲ್ಲಿ ಅನುಷ್ಠಾನಕ್ಕೆ ತರಬೇಕಿದೆ ಎಂದು ಹೇಳಿದರು.

ಜಿಲ್ಲಾಡಳಿತ ಹಾಗೂ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್  ನೇತೃತ್ವದಲ್ಲಿ ಈ ಯೋಜನೆ ಜಾರಿಗೆ ತರಲಾಗಿದೆ. ಶಾಸಕ ಎ.ಕೆ.ಎಂ.ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು.

ಸಂಸದ ರಾಜಮೋಹನ್ ಉಣ್ಣಿ ತ್ತಾನ್, ಜಿಲ್ಲಾ ಪಂಚಾಯತ್  ಅಧ್ಯಕ್ಷೆ ಪಿ ಬೇಬಿ ಬಾಲಕೃಷ್ಣನ್, ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್, ಎಚ್‌ಎಎಲ್ ಎಜಿಎಂ ಎಎಸ್ ಸಾಜಿ, ಪುತ್ತಿಗೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಜಯಂತಿ, ಜಿಲ್ಲಾ ಪಂಚಾಯಿತಿ ಸದಸ್ಯ ನಾರಾಯಣ ನಾಯ್ಕ್, ಪುತ್ತಿಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಪಾಲಾಕ್ಷ ರೈ, ಮಂಜೇಶ್ವರ ಬ್ಲಾಕ್ ಪಂಚಾಯಿತಿ ಸದಸ್ಯೆ ಕೆ ಚಂದ್ರಾವತಿ ಪಂಚಾಯಿತಿ ಜಯಂತಿ, ಪುತ್ತಿಗೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ರಾಜೇಶ್ವರಿ, ಪುತ್ತಿಗೆ ಕೃಷಿ ಅಧಿಕಾರಿ ನಫೀಸತ್ ಹಂಸೀನಾ, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಪಿ.ಇಬ್ರಾಹಿಂ, ಸುಲೈಮಾನ್ ಉಜಂಪಾಡಿ, ಎಂ.ಅಬ್ದುಲ್ಲಾ, ಸುನೀಲ್ ಅನಂತಪುರ, ಮನೋಹರನ್, ಜಿಲ್ಲಾ ಮಣ್ಣು ಸಂರಕ್ಷಣಾಧಿಕಾರಿ ವಿ.ಎಂ.ಅಶೋಕ್ ಕುಮಾರ್ , ಎಚ್ ಎಎಲ್ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ ಮುರಳಿ ಕೃಷ್ಣ  ಮಾತನಾಡಿದರು.

ಪುತ್ತಿಗೆ ಗ್ರಾಮ ಪಂಚಾಯತ್ ಅಧ್ಯಕ್ಷ ಡಿ.ಸುಬ್ಬಣ್ಣ ಆಳ್ವ ಸ್ವಾಗತಿಸಿ, ಜಿಲ್ಲಾ ಹಣಕಾಸು ಅಧಿಕಾರಿ ಶಿವ ಪ್ರಕಾಶ್ ನಾಯರ್  ವಂದಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು