Categories: ಕರಾವಳಿ

ವಿಟ್ಲ: ದ.ಕ, ಉಡುಪಿ ಕಾಸರಗೋಡು 400ಕೆವಿ ವಿದ್ಯುತ್ ಪ್ರಸರಣ ಮಾರ್ಗ ವಿರೋಧಿಸಿ ಜನಜಾಗೃತಿ ಆಂದೋಲನ

ಬಂಟ್ವಾಳ: ಹೊರ ರಾಜ್ಯ, ದೇಶಗಳಿಗೆ ವಿದ್ಯುತ್ ವಿತರಣೆ ಮಾಡಲು ಹೋಗಿ ಕರ್ನಾಟಕದ ಕೃಷಿಕರ ಕೃಷಿ ಭೂಮಿಯನ್ನು ಹಾಳು ಮಾಡಲಾಗುತ್ತಿದೆ. ಜನರು ಈ ಬಗ್ಗೆ ಜಾಗೃತಿಯಾಗಿ ವಿರೋಧ ವ್ಯಕ್ತಪಡಿಸುವ ಅನಿವಾರ್ಯತೆಯಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು ಹೇಳಿದರು.

ಅವರು ವಿಟ್ಲ ಸಮೀಪದ ಕೊಲ್ಲಪದವಿನಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಉಡುಪಿ ಕಾಸರಗೋಡು 400ಕೆವಿ ವಿದ್ಯುತ್ ಪ್ರಸರಣ ಮಾರ್ಗ ವಿರೋಧಿ ಹೋರಾಟ ಸಮಿತಿ ವಿಟ್ಲದ ನೇತೃತ್ವದಲ್ಲಿ ನಡೆದ ಜನಜಾಗೃತಿ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದರು.

ಉಡುಪಿ ಕಾಸರಗೋಡು 400ಕೆವಿ ವಿದ್ಯುತ್ ಪ್ರಸರಣ ಮಾರ್ಗ ವಿರೋಧಿ ಹೋರಾಟ ಸಮಿತಿ ವಿಟ್ಲದ ಅಧ್ಯಕ್ಷ ರಾಜೀವ ಗೌಡ ಮಾತನಾಡಿ ವಿದ್ಯುತ್ ಮಾರ್ಗ ವಿರೋಧಿಸಿ ಕಳೆದ ಹದಿನೈದು ತಿಂಗಳಿಂದ ವಿವಿಧ ಹೋರಾಟಗಳನ್ನು ನಡೆಸಲಾಗಿದೆ. ಬದುಕುವ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನ ಮಾಡಲಾಗುತ್ತಿರುವುದು ಸರಿಯಲ್ಲ. ಬಲಾತ್ಕಾರವಾಗಿ ರೈತರ ಭೂಮಿ ಕಸಿಯಲು ಮುಂದಾಗುತ್ತಿರುವವರಿಗೆ ಚುನಾವಣೆಯಲ್ಲಿ ತಕ್ಕ ಉತ್ತರ ನೀಡುವ ಕಾರ್ಯ ಪ್ರತಿಯೋಬ್ಬ ರೈತನೂ ಮಾಡಬೇಕಾಗಿದೆ ಎಂದರು.

ರಾಜ್ಯ ರೈತ ಸಂಘ ರಾಜ್ಯ ಕಾರ್ಯದರ್ಶಿ ಮನೋಹರ ಶೆಟ್ಟಿ ಶೆಟ್ಟಿ, ಸಂತ್ರಸ್ತ ರೈತರಾದ ಲಕ್ಷ್ಮಣ ನೆಕ್ಕಿಲಾರು, ಚಿತ್ತರಂಜನ್ ಎನ್.ಎಸ್.ಡಿ., ಸುಂದರ ಗೌಡ, ಭಾಸ್ಕರ ಮಂಜಲಾಡಿ, ಶ್ರೀಧರ ಬೋಳಿಗಡೆ, ಶಿವರಾಮ ಬೋಳಿಗಡೆ, ರೋಹಿತಾಶ್ವ ಬಂಗ, ಲಕ್ಷ್ಮೀನಾರಾಯಣ ಮಂಜನಾಡಿ, ಸ್ಟ್ಯಾನಿ ಮಂಜಲಾಡಿ, ರೋಬೋರ್ಟ್ ಬೇಜಾತಿಮಾರು, ಪದ್ಮನಾಭ ಕೊಚೋಡಿ, ವಾಸು ಕೊಚೋಡಿ, ಅನಿಲ್ ರೇಗೊ ಕಲ್ಲಕಟ್ಟ, ಹರೀಶ್ ಕೇಪು, ವಿಷು ಮಂಜಲಾಡಿ, ಸಂಜೀವ ಮಂಜಲಾಡಿ, ರಾಮಣ್ಣ ಬಸವನಗುಡಿ, ಭಾಸ್ಕರ ಉಪಾಧ್ಯಾಯ, ಮೋಹನ್ ಭಂಡಾರಿ, ಮೋಹನ್ ಶೆಟ್ಟಿ, ಪ್ರದೀಪ್ ಭಂಡಾರಿ, ಬಂಟಪ್ಪ ಶೆಟ್ಟಿ, ನಾರಾಯಣ ಭಂಡಾರಿ, ಮಹಾಬಲ ಶೆಟ್ಟಿ ಮೂಡಂಬೈಲು, ಮೊಹಮ್ಮದ್ ಅಲಿ ಮಾದುಮೂಲೆ ಮತ್ತಿತರರು ಹಾಜರಿದ್ದರು.

ವಿವಿಧ ಕಡೆ ಅಭಿಯಾನ:
ಕೊಲ್ಲಪದವು, ಕೇಪು, ವಿಟ್ಲ, ಮಂಗಿಲಪದವು, ಬಾಳ್ತಿಲ ಭಾಗದಲ್ಲಿ ಜನರ ಬೇಟಿ ಕಾರ್ಯ ಮಾಡಿ ವಿದ್ಯುತ್ ಮಾರ್ಗದಿಂದಾಗುವ ಸಮಸ್ಯೆಯ ಬಗ್ಗೆ ಮಾಹಿತಿಯನ್ನು ನೀಡಲಾಯಿತು. ನಿಡ್ಡೋಡಿಯಲ್ಲಿ ಇತ್ತೀಚೆಗೆ ಸರ್ವೇ ಕಾರ್ಯಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ವಿಟ್ಲ ಹೋರಾಟ ಸಮಿತಿಯ ತಂಡ ಅಲ್ಲಿಗೆ ಬೇಟಿ ನೀಡಿತು. ಅಲ್ಲಿನ ಸಂತ್ರಸ್ತ ರೈತ ಬೇಟಿ ಮಾಡಿ ಮಾಹಿತಿಯನ್ನು ಪಡೆದುಕೊಳ್ಳುವ ಕಾರ್ಯ ಮಾಡಲಾಯಿತು.

Sneha Gowda

Recent Posts

ವೀಕ್ಷಕರ ಗಮನ ಸೆಳೆದ ನಾಣ್ಯ ಮತ್ತು ನೋಟುಗಳ ಪ್ರದರ್ಶನ

ನಗರದ ದಸರಾ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿರುವ ಪುರಾತತ್ವ ಸಂಗ್ರಹಾಲಯಗಳು ಮತ್ತು  ಪರಂಪರೆ ಇಲಾಖೆಯಲ್ಲಿ  ಆಯೋಜಿಸಿರುವ ಅಪೂರ್ವ ನಾಣ್ಯ ಮತ್ತು ನೋಟುಗಳ ಪ್ರದರ್ಶನ ನೋಡುಗರ ಗಮನ ಸೆಳೆಯಿತು.

2 mins ago

ಬೀದಿಗಳಲ್ಲಿ ಹಸುಗಳ ಕಾದಾಟ: ಬಾಲಕಿಯರ ಮೇಲೆ ಬಿದ್ದ ಹಸು, ವಿಡಿಯೋ ವೈರಲ್

ಸಿಸಿಟಿವಿಯಲ್ಲಿ ಆಘಾತಕಾರಿ ಘಟನೆಯೊಂದು ಸೆರೆಯಾಗಿದ್ದು ಬೀದಿಯಲ್ಲಿ ಬಾಲಕಿಯರ ಗುಂಪಿನ ಮೇಲೆ ಎರಡು ಹಸುಗಳು ಬಿದ್ದು ಉರುಳಾಡುವುದು ವೀಕ್ಷಕರನ್ನು ಬೆಚ್ಚಿ ಬೀಳಿಸಿದೆ,…

3 mins ago

ಅಂಜಲಿ ಹತ್ಯೆ ಪ್ರಕರಣ : ಆತ್ಮಹತ್ಯೆಗೆ ಯತ್ನಿಸಿದ ಸಹೋದರಿ ಚೇತರಿಕೆ

ಅಂಜಲಿ ಅಂಬಿಗೇರ ಹತ್ಯೆ ಪ್ರಕರಣ ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿದೆ. ಈ ಮಧ್ಯೆ ಸಹೋದರಿಯ ಹತ್ಯೆಯಿಂದ ಮಾನಸಿಕವಾಗಿ ಕುಗ್ಗಿ ಹೋಗಿರುವ ಯಶೋದಾ…

26 mins ago

ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿ : ಬಿಜೆಪಿ ಮಾಜಿ ಸರಪಂಚ್ ಸಾವು

ಜಮ್ಮು-ಕಾಶ್ಮೀರದಲ್ಲಿ ಇನ್ನು ಎರಡು ದಿನಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದ್ದು, ಅದಕ್ಕೂ ಮುನ್ನ ನಿನ್ನೆ ಶನಿವಾರ ತಡರಾತ್ರಿ ಜಮ್ಮು ಮತ್ತು ಕಾಶ್ಮೀರದ…

37 mins ago

ವಿಮಾನ ಇಂಜಿನ್‌ನಲ್ಲಿ ಬೆಂಕಿ : ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶ

ಬೆಂಗಳೂರಿನಿಂದ ಕೊಚ್ಚಿಗೆ ಪ್ರಯಾಣಿಸುತ್ತಿದ್ದ ಏರ್‌ ಇಂಡಿಯಾ ಎಕ್ಸಪ್ರೆಸ್‌ ವಿಮಾನವು ಶನಿವಾರ ತಡರಾತ್ರಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್‌ ಮಾಡಿದೆ.…

45 mins ago

ಸಿಂಗಾಪುರದಲ್ಲಿ ಹೆಚ್ಚುತ್ತಿರುವ ಕೊರೊನಾ ಅಲೆ ಭೀತಿ : ಮಾಸ್ಕ್‌ ಧರಿಸುವಂತೆ ಆದೇಶ

ಸಿಂಗಾಪುರದಲ್ಲಿ ಕೊರೊನಾ ಸೋಂಕಿನ ಹೊಸ ಅಲೆ ಭೀತಿ ಎದುರಾಗಿದ್ದು, ದಿನದಿಂದ ದಿನಕ್ಕೆ ಕೊರೊನಾ ಸೋಂಕಿತ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಜನರಿಗೆ ಮಾಸ್ಕ್‌…

47 mins ago