Categories: ಕರಾವಳಿ

ವಿಜಯೋತ್ಸವ ವೇಳೆ ಶಾಸಕರಿಂದ ತಲವಾರು ಪ್ರದರ್ಶನ: ಕ್ರಮಕ್ಕೆ ಇನಾಯತ್‌ ಅಲಿ ಆಗ್ರಹ

ಮಂಗಳೂರು: ಶಾಸಕ ಭರತ್ ಶೆಟ್ಟಿ ಅವರು ವಿಜಯೋತ್ಸವದ ವೇಳೆ ತಲವಾರು ಝಳಪಿಸುವ ಮೂಲಕ ಹಿಂಸೆಗೆ ಪ್ರಚೋದನೆ ಮಾಡಿದ್ದಾರೆ. ಓರ್ವ ವೈದ್ಯ ಮತ್ತು ಶಾಸಕರಾಗಿ ಕ್ಷೇತ್ರದ ಅಭಿವೃದ್ಧಿ ಹಾಗೂ ಸಾಮರಸ್ಯಕ್ಕೆ ಒತ್ತು ನೀಡಬೇಕಾದವರು ತಲವಾರು ಪ್ರದರ್ಶನ ಮಾಡುವ ಮೂಲಕ ಯುವ ಜನರಿಗೆ ಯಾವ ಸಂದೇಶ ನೀಡಲು ಹೊರಟಿದ್ದಾರೆ ಎಂದು ಕೆಪಿಸಿಸಿ ಕಾರ್ಯದರ್ಶಿ ಇನಾಯತ್ ಅಲಿ ಪ್ರಶ್ನಿಸಿದ್ದಾರೆ.

ಸೌಹಾರ್ದದ ಹಾಗೂ ಸಹಿಷ್ಣುತೆಯ ಸಂದೇಶ ನೀಡುವ ಮೂಲಕ ಯುವ ಜನರಿಗೆ ಮಾದರಿಯಾಗಬೇಕಾಗಿದ್ದ ಶಾಸಕ ಭರತ್ ಶೆಟ್ಟಿ ಅವರು ಯುವಕರನ್ನು ತಪ್ಪು ದಾರಿಗೆ ಪ್ರಚೋದಿಸುತ್ತಿದ್ದಾರೆ. ಈ ನಡೆ ಖಂಡನೀಯ.

ಮಾರಕ ಶಸ್ತ್ರ ಪ್ರದರ್ಶನವನ್ನು ಸಾರ್ವಜನಿಕವಾಗಿ ಮಾಡಿದರೆ ಯಾವ ರೀತಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆಯೋ, ಅದೇ ರೀತಿ ಈ ಪ್ರಕರಣದಲ್ಲೂ ಕೂಡಾ ಭರತ್ ಶೆಟ್ಟಿ ಮೇಲೆ ಪೊಲೀಸ್ ಇಲಾಖೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸುವಂತೆ ಇನಾಯತ್ ಅಲಿ ಆಗ್ರಹಿಸಿದ್ದಾರೆ.

Umesha HS

Recent Posts

ನ್ಯೂಸ್‌ ಕರ್ನಾಟಕದ ಸಾರಥ್ಯದಲ್ಲಿ‌ ಏ.28 ರಂದು “ಆಟಿಸಂ ಜಾಗೃತಿ”ಕುರಿತು ಎಕ್ಷಪ್ಸನಲ್ ಕಾರ್ಯಕ್ರಮ

ನ್ಯೂಸ್‌ ಕರ್ನಾಟಕದ ಸಾರಥ್ಯದಲ್ಲಿ ಪಾಥ್ವೆ ಎಂಟರ್‌ ಪ್ರೈಸಸ್‌ ಹಾಗೂ ಸ್ಪೇಷಲ್‌ ಪೇರೆಂಟ್ಸ್‌ ಸಪೋರ್ಟ್‌ ಗ್ರೂಪ್‌ ಅವರ ಸಹಯೋಗದೊಂದಿಗೆ Aibha association…

22 mins ago

ಪ್ರಜ್ವಲ್‌ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ : ಎಸ್‌ಐಟಿ ತನಿಖೆ

ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪ ಕುರಿತು ತನಿಖೆ ನಡೆಸಲು ವಿಶೇಷ ತನಿಖಾ…

49 mins ago

ಒಂದೇ ದಿನ ಬಾಗಲಕೋಟೆ ಕ್ಷೇತ್ರದಲ್ಲಿ ಪ್ರಧಾನಿ ಮೋದಿ, ಪ್ರಿಯಾಂಕ ಅಬ್ಬರ

ಮೇ 7ರಂದು ರಾಜ್ಯದಲ್ಲಿ ಎರಡನೇ ಹಂತದ ಲೋಕಸಭಾ ಚುನಾವಣೆ ಮತದಾನ ಹಿನ್ನೆಲೆ ಇಂದು ಬೆಳಗಾವಿಗೆ ಆಗಮಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ…

1 hour ago

ಮೆಂಟಲ್ ಸೂರಿ ಹತ್ಯೆ ಕೇಸ್‌ : ಮೃತನ ಮಗನೂ ಸೇರಿ ಮೂವರ ಬಂಧನ

ಜಿಲ್ಲೆಯಲ್ಲಿ ಮನೆ ಕಳ್ಳತನ, ದರೋಡೆ ಕಿಂಗ್‌ ಎನಿಸಿಕೊಂಡಿದ್ದ ಸುರೇಶ್ ಅಲಿಯಾಸ್ ಮೆಂಟಲ್ ಸೂರಿ(45)ಯನ್ನ ಶಿವಮೊಗ್ಗ ಬಾಪೂಜಿನಗರದ 7ನೇ ಕ್ರಾಸ್ ನಲ್ಲಿರುವ…

2 hours ago

ಹಿಂದು ಹುಡುಗಿಗೆ ಅಶ್ಲೀಲ ಮೆಸೇಜ್‌ ರವಾನೆ : ಮುಸ್ಲಿಂ ಯುವಕನಿಗೆ ಬಿತ್ತು ಧರ್ಮದೇಟು

17 ವರ್ಷದ ಅಪ್ರಾಪ್ತೆಗೆ ಮುಸ್ಲಿಂ ಯುವಕನೋರ್ವ ಅಶ್ಲೀಲ ಮೆಸೇಜ್‌ ಕಳುಹಿಸುತ್ತಿದ್ದನ್ನು ರೆಡ್‌ ಹ್ಯಾಂಡ್‌ ಹಿಡಿದ ಸ್ಥಳೀಯರು ಆತನಿಗೆ ತಕ್ಕ ಶಾಸ್ತಿ…

2 hours ago

ಅಕ್ರಮ ಜಾನುವಾರು ಸಾಗಾಟ: 9 ಆರೋಪಿಗಳು ಪೊಲೀಸರ ವಶಕ್ಕೆ

ಕೊಪ್ಪಳ ಜಿಲ್ಲೆಯ ಗಿಣಿಗೇರಾದಿಂದ 16 ಎತ್ತುಗಳನ್ನು ಆರೋಪಿಗಳು ಖರೀದಿಸಿ. ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದರು. ಈ ವೇಳೆ ಖಚಿತ ಮಾಹಿತಿ ಮೇರೆಗೆ ಗಂಗಾವತಿ…

2 hours ago