Categories: ಕರಾವಳಿ

ಹಣ, ಹೆಂಡ ಹಂಚಿ ಜಯಗಳಿಸಿದವರು ನೀತಿ ಪಾಠ ಹೇಳುವುದು ಬೇಡ: ಪೂಂಜಾಗೆ ವಸಂತ ಬಂಗೇರ ಟಾಂಗ್

ಬೆಳ್ತಂಗಡಿ: ಕರ್ನಾಟಕದ ಮುಖ್ಯಮಂತ್ರಿಯಾಗಿ 2ನೇ ಬಾರಿ ಅಧಿಕಾರ ವಹಿಸಿಕೊಂಡ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಬೆಳ್ತಂಗಡಿಯ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಮಾಜಿ ಶಾಸಕ ವಸಂತ ಬಂಗೇರ ಹೇಳಿದರು.

ಕಾಂಗ್ರೆಸ್ ಪಕ್ಷ ನೀಡಿರುವ ಐದು ಗ್ಯಾರಂಟಿ ಅನುಷ್ಠಾನಕ್ಕೆ ಈಗಾಗಲೇ ಮುಖ್ಯ ಮಂತ್ರಿಗಳು ಆದೇಶ ನೀಡಿದ್ದಾರೆ. ಹಾಗಾಗಿ ಈ ಬಗ್ಗೆ ಯಾರು ಆತಂಕ ಪಡುವ ಅಗತ್ಯವಿಲ್ಲ ಎಂದು ನಾನು ಈ ಮೂಲಕ ಸ್ಪಷ್ಟಪಡಿಸುತ್ತೇನೆ. ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಮುಖ್ಯ ಮಂತ್ರಿ ಸಿದ್ದರಾಮಯ್ಯ 24 ಜನ ಹಿಂದೂ ಕಾರ್ಯಕರ್ತರನ್ನು ಕೊಂದಿದ್ದಾರೆ ಎಂದು ಹೇಳಿರುವುದನ್ನು ಖಂಡಿಸುತ್ತೇನೆ.

ಈ ಬಗ್ಗೆ ನಮ್ಮ ಕಾರ್ಯಕರ್ತರು ಪೋಲೀಸರಿಗೆ ದೂರು ನೀಡಿದ್ದು, ಶಾಸಕ ಹರೀಶ್ ಪೂಂಜಾ ಮತ್ತು ಬಿ.ಜೆ.ಪಿ ಮಂಡಲಾಧ್ಯಕ್ಷ ಜಯಂತ್ ಕೋಟ್ಯಾನ್ ವಿರುದ್ದ ಬೆಳ್ತಂಗಡಿ ಠಾಣಾಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ. ಕಳೆದ ವಿಧಾನಸಬಾ ಚುನಾವಣೆಯಲ್ಲಿ ಬಿ.ಜೆ.ಪಿ ಅಭ್ಯರ್ಥಿ ಹರೀಶ್ ಪೂಂಜಾಮತದಾರರಿಗೆ ಹೇರಳವಾಗಿ ಹಣ, ಹೆಂಡ ಹಂಚಿ ವಿಜೇತರಾಗಿದ್ದು ಚುನಾವಣಾಧಿಕಾರಿಗಳು, ಕೆಲ ಕಂದಾಯ ಅಧಿಕಾರಿಗಳು ಮತ್ತು ಮುಖ್ಯವಾಗಿ ಪೊಲೀಸ್ ಇಲಾಖಾಧಿಕಾರಿಗಳು ಹರೀಶ್ ಪೂಂಜಾ ಜೊತೆ ಶಾಮಿಲಾಗಿ ಈ ಅಕ್ರಮವನ್ನು ತಡೆಯುವಲ್ಲಿ ವಿಫಲರಾಗಿದ್ದಾರೆ. ಬೆಳ್ತಂಗಡಿಯ ಕೆಲ್ಲಗುತ್ತುವಿನಲ್ಲಿ ಹಣ ಹಂಚುವಾಗ ನಗರ ಪಂಚಾಯತ್ ಉಪಾಧ್ಯಕ್ಷ ಜಯಾನಂದ ಗೌಡ, ಸದಸ್ಯ ಶರತ್ ಶೆಟ್ಟಿ ಮತ್ತು ಸಂಕೇತ್ ಶೆಟ್ಟಿ ಎಂಬವರು ನಮ್ಮ ಕಾರ್ಯಕರ್ತರ ಕೈಗೆ ಸಿಕ್ಕಿ ಬಿದ್ದಿದ್ದು ನಂತರ ನಾನು ಅಲ್ಲಿಗೆ ತೆರಳಿದ ನಂತರ ನಮ್ಮ ಒತ್ತಾಯಕ್ಕೆ ಮಣಿದು ತಪಾಸಣೆ ನಡೆಸಿ 61,500 ರೂ. ಜಪ್ತಿ ಮಾಡಿರುತ್ತಾರೆ. ಆ ಬಗ್ಗೆ ನಗರ ಪಂಚಾಯತ್ ಉಪಾಧ್ಯಕ್ಷ ಜಯಾನಂದ ಗೌಡ, ಸದಸ್ಯ ಶರತ್ ಶೆಟ್ಟಿ ಮತ್ತು ಸಂಕೇತ್ ಶೆಟ್ಟಿ ಎಂಬುವರ ವಿರುದ್ದ ಎಫ್.ಆರ್.ಐ ದಾಖಲಾಗಿದ್ದು ತನಿಖೆ ನಡೆಯುತ್ತಿದೆ. ‘ಬಿ’ ರಿಪೋರ್ಟ್ ಹಾಕಲು ಶಾಸಕ ಹರೀಶ್ ಪೂಂಜಾ ಒತ್ತಡ ಹೇರುತ್ತಿದ್ದು ಅಂತಹ ದುಸ್ಸಾಹಸಕ್ಕೆ ಪೋಲೀಸರು ಕೈ ಹಾಕದಂತೆ ಈ ಮೂಲಕ ಎಚ್ಚರಿಕೆ ನೀಡುತ್ತಿದ್ದೇನೆ ಎಂದರು.

ಚುನಾವಣೆ ಕಳೆದ ಬಳಿಕ ಬಿ.ಜೆ.ಪಿ.ಯವರು ವಿಜಯೋತ್ಸವ ನಡೆಸುವ ಸಂದರ್ಭದಲ್ಲಿ ತಾಲೂಕಿನ ಹಲವಾರು ಕಡೆ ನಮ್ಮ ಪಕ್ಷದ ಕಾರ್ಯಕರ್ತರ ಮನೆಯ ಅಂಗಳಕ್ಕೆ ಮತ್ತು ದನದ ಹಟ್ಟಿಯೊಳಗಡೆ ಪಟಾಕಿ ಸಿಡಿಸಿದ್ದುಅಂತಹ ಎಲ್ಲಾ ಕಡೆ ನಮ್ಮ ಕಾರ್ಯಕರ್ತರು ಬಿ.ಜೆ.ಪಿಯವರ ದಬ್ಬಾಳಿಕೆಯನ್ನು ಸಮರ್ಥವಾಗಿ ಎದುರಿಸಿದ್ದು ಎಲ್ಲಾ ಕಡೆ ತಪ್ಪಿತಸ್ಥರ ವಿರುದ್ದ ಎಫ್.ಆರ್.ಐ ಆಗಿದೆ. ವಿಜಯೋತ್ಸವ ಎರಡು ಪಾರ್ಟಿಯವರು ಆಚರಿಸಿದ್ದೇವೆ. ಪ್ರಥಮವಾಗಿ ಆಚರಿಸಿದ್ದ ಬಿ.ಜೆ.ಪಿಯವರು ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರ ಮನೆಯ ಅಂಗಳಕ್ಕೆ ಹೋಗಿ ಸುಡುಮದ್ದು( ಕದೋನಿ, ಗರ್ನಲ್) ಸಿಡಿಸಿದ್ದಾರೆ ಮತ್ತು ಹೆಂಗಸರನ್ನು ಮಕ್ಕಳನ್ನು ಹೀನಾಯಾವಾಗಿ, ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ. ಕಂಠ ಪೂರ್ತಿ ಕುಡಿದು ಕೆಲವರಿಗೆ ಹೊಡೆದಿದ್ದಾರೆ. ರಾಕ್ಷಸರಂತೆ, ಮೃಗಗಳಂತೆ ವರ್ತಿಸಿದ್ದಾರೆ. ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು ಕೂಡ ವಿಜಯೋತ್ಸವನ್ನು ಆಚರಿಸಿದ್ದಾರೆ. ನಮ್ಮ ಕಾರ್ಯಕರ್ತರು ಎಲ್ಲಿಯೂ ಕೂಡ ರಾಕ್ಷಸ ಮನೋಭಾವನೆಯಿಂದ ವರ್ತಿಸಿಲ್ಲ. ಬಿ.ಜೆಪಿಯವರ ಅಂಗಳದಲ್ಲಿ ಸುಡುಮದ್ದು ಸಿಡಿಸಿಲ್ಲ. ಮೃಗೀಯ ಭಾವನೆಯಿಂದ ವರ್ತಿಸಿಲ್ಲ. ಮನುಷ್ಯತ್ವದಿಂದ ವರ್ತಿಸಿದ್ದಾರೆ ಎಂದು ತಿಳಿಸಿದರು.

ನಮ್ಮ ಅಭ್ಯರ್ಥಿ ರಕ್ಷಿತ್ ಶಿವರಾಂ ನಾಮಪತ್ರ ಸಲ್ಲಿಸುವ ಮೆರವಣಿಗೆಗೆ ಹರೀಶ್ ಪೂಂಜಾ ಬೆಂಬಲಿಗ ಆಂಬುಲೆನ್ಸ್‌ವರು ವಿನಾಕಾರಣ ಅತ್ತಿಂದಿತ್ತ ಓಡಾಡಿದ ಬಗ್ಗೆ ನಾವು ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದೆವು. ಆದರೆ ಅದನ್ನು ಮುಚ್ಚಿ ಹಾಕುವ ಕೆಲಸವನ್ನು ಮಾಡಿದ್ದಾರೆ. ಬೆಳ್ತಂಗಡಿ ಪೋಲೀಸ್ ನಿರೀಕ್ಷಕರು ಚುನಾವಣಾಧಿಕಾರಿಗಳಿಗೆ ಸಲ್ಲಿಸಿದ ವರದಿಯಲ್ಲಿ ಒಂದು ಒಳ್ಳೆಯ ಕಥೆ ಇದೆ ಅದೇನೆಂದರೆ “ಖುಷಿ ಅಂಬುಲೆನ್ಸ್ ವಾಹನದ ಮಾಲೀಕ ಅಭಿಲಾಶ್, ಎಂ ಎಂಬವರನ್ನು ವಿಚಾರಿಸಿದ್ದು, ಏ.17ರಂದು 12.30ಕ್ಕೆ ಗುರುವಾಯನಕೆರೆಯ ಆಸ್ಪತ್ರೆಯಿಂದ ಉಜಿರೆ ಆಸ್ಪತ್ರೆಯ ವೈದ್ಯರನ್ನು ಎಂಬವರನ್ನು ಕರೆದುಕೊಂಡು ಉಜಿರೆಗೆ ಬಿಟ್ಟು ನಂತರ ಉಜಿರೆಯಿಂದ ವಾಪಾಸು ಕರೆದುಕೊಂಡು ಸುಮಾರು 1.30 ಗಂಟೆಗೆ ಅಭಯಾ ಆಸ್ಪತ್ರೆಗೆ ಕರೆದುಕೊಂಡು ಬಳಿಕ ಅದೇ ಆಂಬುಲೆನ್ಸ್‌ನಲ್ಲಿಸುಮಾರು 2.30 ಗಂಟೆಗೆ ವಾಪಾಸು ಬಿಟ್ಟಿರುತ್ತೇನೆ ಎಂದು ತಿಳಿಸಿದ್ದಾರೆ ಎಂದು ಹೇಳಿದ್ದಾರೆ. ಇದು ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳವುದಕ್ಕಾಗಿ ಪೋಲೀಸ್ ಅಧಿಕಾರಿಗಳು ಬಿ.ಜೆ.ಪಿ ಅಭ್ಯರ್ಥಿ ಹರೀಶ್ ಪೂಂಜಾರ ಜೊತೆಗೂಡಿ ಮಾಡಿದಂತಹ ಕಟ್ಟು ಕಥೆ ಎಂದು ವಸಂತ ಬಂಗೇರ ಆರೋಪಿಸಿದರು.

Umesha HS

Recent Posts

ಮರುಚುನಾವಣೆಯಲ್ಲಿ ಕನಿಷ್ಠ ಮತದಾನ; ಮತಯಂತ್ರ ಧ್ವಂಸಗೊಳಿಸಿದವರು ಪರಾರಿ

ಇಂಡಿಗನತ್ತ ಗ್ರಾಮದಲ್ಲಿ ಮರುಚುನಾವಣೆ ಮುಕ್ತಾಯಗೊಂಡಿದ್ದು 528 ರಲ್ಲಿ 71 ಮಂದಿ ಮಾತ್ರ ಮತ ಚಲಾಯಿಸಿದ್ದಾರೆ ಎಂದು ತಿಳಿದುಬಂದಿದೆ.

3 mins ago

ಪ್ರಧಾನಿ ಘೋಷಣೆಗಷ್ಟೇ ಸೀಮಿತ; ಮೋದಿ ವಿರುದ್ದ ಬಿಕೆ ಹರಿಪ್ರಸಾದ ವಾಗ್ದಾಳಿ

ಪ್ರಧಾನಿ ಮೋದಿ ಒಬ್ಬ ಘೋಷಣಾ ವೀರ. ಘೋಷಣೆಗಷ್ಟೇ ಪ್ರಧಾನಿ ಸೀಮಿತವಾಗಿದ್ದು, ಘೋಷಣೆಗಳ ಮೂಲಕವೇ ಹಿರೋ ಆದವರು ಎಂದು ಪ್ರಧಾನಮಂತ್ರ ಮೋದಿ…

17 mins ago

ಅಶ್ಲೀಲ ವಿಡಿಯೋ ವೈರಲ್ ಪ್ರಕರಣ; ಜೆಡಿಎಸ್‌ನಿಂದ ಪ್ರಜ್ವಲ್ ಉಚ್ಛಾಟನೆ

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ ಕೇಸ್‌ಗೆ ದೊಡ್ಡ ತಿರುವು ಸಿಕ್ಕಿದ್ದು, ಈ ಪ್ರಕರಣ ದೊಡ್ಡ ಮಟ್ಟದಲ್ಲಿ ಬೆಂಕಿ ಹಚ್ಚಿರುವ…

42 mins ago

ಇಪ್ಪತ್ತೆಂಟು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ನಿಶ್ಚಿತ : ಯಡಿಯೂರಪ್ಪ

ಕರ್ನಾಟಕದಲ್ಲಿ ಚುನಾವಣೆ ವಾತಾವರಣ ಚೆನ್ನಾಗಿ ಇದೆ. ಈಗ ಚುನಾವಣೆ ನಡೆದಿರೋ 14 ಕ್ಷೇತ್ರಗಳಲ್ಲಿ ನಾವು 14 ಗೆಲ್ಲುತ್ತೇವೆ. ಮುಂದೆ ನಡೆಯುವ…

47 mins ago

ಲಾರಿಗೆ ಡಿಕ್ಕಿ ಹೊಡೆದ ಕಾರು : ಚಾಲಕ ಸ್ಥಳದಲ್ಲೇ ಸಾವು

ಅತಿ ವೇಗದಲ್ಲಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ, ಡಿವೈಡರ್ ದಾಟಿ ಎದುರಿಗೆ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ…

55 mins ago

ಮೋದಿ ಚುನಾವಣೆಯಲ್ಲಿ ಹತಾಶರಾಗಿದ್ದಾರೆ: ಸಿಎಂ ಸಿದ್ದರಾಮಯ್ಯ

ನರೇಂದ್ರ ಮೋದಿ ಈ ಚುನಾವಣೆಯಲ್ಲಿ ಹತಾಶರಾಗಿದ್ದಾರೆ. ಅವರಿಗೆ ಚುನಾವಣೆ ಗೆಲ್ಲುವ ವಿಶ್ವಾಸ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಳ್ಳಾರಿ-ವಿಜಯನಗರ ಲೋಕಸಭಾ…

56 mins ago