ಮತ ಎಣಿಕೆ ಕೇಂದ್ರದೊಳಗೆ ಮೊಬೈಲ್‌ ತರುವಂತಿಲ್ಲ: ಜಿಲ್ಲಾಧಿಕಾರಿ ರವಿಕುಮಾರ್‌

ಮಂಗಳೂರು: ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳ‌ ಮತ ಎಣಿಕೆ ಮೇ 13ರಂದು ನಡೆಯಲಿದೆ ಎಂದು ದ.ಕ ಜಿಲ್ಲಾಧಿಕಾರಿ ರವಿಕುಮಾರ್ ಹೇಳಿದರು.

ಮತ ಎಣಿಕಾ ಕೇಂದ್ರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪ್ರತೀ ವಿಧಾನಸಭಾ ಕ್ಷೇತ್ರಕ್ಕೆ 14 ಟೇಬಲ್ ಗಳನ್ನು ಹಾಕಲಾಗಿದೆ. ಪೋಸ್ಟಲ್ ಬ್ಯಾಲೆಟ್ ಗಾಗಿ 5 ಟೇಬಲ್ ಗಳನ್ನ ಮಾಡಲಾಗಿದೆ. ಎಂಟು ಕ್ಷೇತ್ರಗಳ ಇವಿಎಂಗೆ ಒಟ್ಟು 112 ಹಾಗೂ ಪೋಸ್ಟಲ್ ಬ್ಯಾಲೆಟ್ ಗೆ 40 ಟೇಬಲ್ ಹಾಕಲಾಗಿದೆ. ರಿಟರ್ನಿಂಗ್ ಆಫೀಸರ್ ಟೇಬಲ್ ಪಕ್ಕದಲ್ಲಿ ಅಭ್ಯರ್ಥಿ ಅಥವಾ ಏಜೆಂಟ್ ಕೂರಬಹುದು.

ಬೆಳಗ್ಗೆ 8 ಗಂಟೆಗೆ ಮೊದಲು ಪೋಸ್ಟಲ್ ಬ್ಯಾಲೆಟ್ ಎಣಿಕೆ ಆಗಲಿದೆ. 8.30ರಿಂದ ಇವಿಎಂ ಮತ ಎಣಿಕಾ ಕಾರ್ಯ ಆರಂಭ ಆಗಲಿದೆ. ಪ್ರತೀ ಕ್ಷೇತ್ರದ 19 ಟೇಬಲ್ ಗೂ ಸಿಸಿಟಿವಿ ಅಳವಡಿಸಲಾಗಿದೆ. ಇದರ ಚಿತ್ರಣವನ್ನು ಮುಖ್ಯ ಚುನಾವಣಾ ಆಯುಕ್ತರ ಕಚೇರಿಯಲ್ಲಿ ವೀಕ್ಷಿಸಲಾಗುತ್ತದೆ. ಎಣಿಕಾ ಕೇಂದ್ರಕ್ಕೆ ಮೊಬೈಲ್ ಅಥವಾ ಯಾವುದೇ ಇಲೆಕ್ಟ್ರಾನಿಕ್ ಗ್ಯಾಜೆಟ್ಸ್ ತರಲು ಅವಕಾಶ ಇಲ್ಲ ಎಂದು ತಿಳಿಸಿದರು. ಏಜೆಂಟ್ ಗಳು ಅಥವಾ ಅಭ್ಯರ್ಥಿಗಳು ಏಳು ಗಂಟೆಯ ಒಳಗಡೆ ಕೌಂಟಿಂಗ್ ಹಾಲ್ ಒಳಗೆ ಇರಬೇಕು. ಎಣಿಕಾ ಸಿಬ್ಬಂದಿ ಕೂಡ 7 ಗಂಟೆ ಒಳಗೆ ಕೇಂದ್ರದ ಒಳಗೆ ಬರಬೇಕು. ಎಣಿಕಾ ಸಿಬ್ಬಂದಿ ಕೂಡ ಮೊಬೈಲ್ ತರಲು ಅವಕಾಶ ಇಲ್ಲ ಎಂದರು. ಇಡೀ ಎಣಿಕಾ ಕೇಂದ್ರವನ್ನ ಕೇಂದ್ರೀಯ ಭದ್ರತಾ ಪಡೆ ಮತ್ತು ಸ್ಥಳೀಯ ಪೊಲೀಸ್ ಭದ್ರತೆಗೆ ಒಳಪಡಿಸಲಾಗಿದೆ. ಶುಕ್ರವಾರ ರಾತ್ರಿ 12 ಗಂಟೆಯಿಂದ ಶನಿವಾರ 12 ಗಂಟೆಯವರೆಗೆ ಎಣಿಕಾ ಕೇಂದ್ರದೊಳಗೆ ವಿದ್ಯುತ್ ಕಡಿತವಾಗುವುದಿಲ್ಲ ಎಂದರು. ಈ ಬಗ್ಗೆ ಮೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಈ ಬಾರಿ ಪೋಸ್ಟಲ್ ಬ್ಯಾಲೆಟ್ ಮತ್ತು ಇವಿಎಂ ಮತ ಎಣಿಕೆ ಒಟ್ಟಿಗೆ ನಡೆಯಲಿದೆ. ಇವಿಎಂ ಕೌಂಟ್ ಮುಗಿದರೂ ಪೋಸ್ಟಲ್ ಬ್ಯಾಲೆಟ್ ಕೌಂಟ್ ಮುಂದುವರೆಯಲಿದೆ. ಇವಿಎಂ ಸಮಸ್ಯೆ ಇದ್ದರೆ ವಿವಿಪ್ಯಾಟ್ ಮೂಲಕ ಎಣಿಕಾ ಕಾರ್ಯ ನಡೆಯಲಿದೆ. ಅಂಥಹ ತೊಂದರೆ ಬಂದಲ್ಲಿ ಕೊನೆಯ ಸುತ್ತಿನಲ್ಲಿ ನಡೆಸಲಾಗುತ್ತದೆ. 20,150 ಪೋಸ್ಟಲ್ ಬ್ಯಾಲೆಟ್ ದ.ಕ ಜಿಲ್ಲೆಯಲ್ಲಿ ಇದೆ ಎಂದರು. ಇದು ಇಡೀ ರಾಜ್ಯದಲ್ಲೇ ಅತೀ ಹೆಚ್ಚಿನ ಪೋಸ್ಟಲ್ ಬ್ಯಾಲೆಟ್ ಆಗಿದೆ. ಒಟ್ಟು 16 ರಿಂದ 18 ಸುತ್ತುಗಳಲ್ಲಿ ಎಣಿಕಾ ಕಾರ್ಯ ಮುಕ್ತಾಯವಾಗಲಿದೆ ಎಂದು ವಿವರಿಸಿದರು. 544 ಸಿಬ್ಬಂದಿ ಇಡೀ ಎಣಿಕಾ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ. ಒಟ್ಟು 40 ಪೋಸ್ಟಲ್ ಬ್ಯಾಲೆಟ್ ಟೇಬಲ್ ಗೆ 40 ಎಆರ್ ಓ ನೇಮಕ ಮಾಡಲಾಗಿದೆ. ಮಧ್ಯಾಹ್ನ 1 ಗಂಟೆ ಸುಮಾರಿಗೆ ಎಣಿಕಾ ಕಾರ್ಯ ಮುಗಿಸಲು ಯೋಜಿಸಲಾಗಿದೆ.

ಏಜೆಂಟ್, ಅಭ್ಯರ್ಥಿ, ಎಣಿಕಾ ಸಿಬ್ಬಂದಿ ಹಾಗೂ ಮಾಧ್ಯಮದವರಿಗೆ ಮಾತ್ರ ಪ್ರವೇಶವಿರಲಿದೆ. 304 ಹೆಡ್ ಕಾನ್ಸ್‌ಟೇಬಲ್, 39 ಎಎಸ್ಸೈ, 35 ಪಿಎಸ್ಸೈ, 14 ಇನ್ಸ್ಪೆಕ್ಟರ್, 06 ಎಸಿಪಿ, 2 ಡಿಸಿಪಿ, 400 ಸಿವಿಲ್ ಪೊಲೀಸ್, 200 ಹೋಂ ಗಾರ್ಡ್, 4 ಸಿಎಆರ್ ತುಕಡಿ, 2 ಕೆಎಸ್ಸಾರ್ಪಿ ತುಕಡಿ ಹಾಗೂ ಸಿಆರ್ಪಿಎಫ್, ಸಿಐಎಸ್ಎಫ್ ಭದ್ರತೆ ಇರಲಿದೆ ಎಂದರು. ಪ್ರತೀ ಸುತ್ತಿ‌ನ ಬಳಿಕ ಎಣಿಕೆಯ ಫಲಿತಾಂಶ ಲಭ್ಯವಾಗಲಿದೆ ಎಂದರು.

Umesha HS

Recent Posts

ಬೃಹತ್ ಗಾತ್ರದ ಮರ ಬಿದ್ದು ಹೊಸ ಕಾರು ಜಖಂ

ನಿಂತಿದ್ದ ಹೋಂಡಾ ಎಲಿವೇಟ್ SUV ಬ್ರಾಂಡ್ ಹೊಸ ಕಾರಿನ ಮೇಲೆ ಬೃಹತ್ ಮರವೊಂದು ಬಿದ್ದ ಘಟನೆ ಲಾವೆಲ್ಲೇ ರೋಡ್​ನಲ್ಲಿ ನಡೆದಿದೆ.

19 mins ago

ಈ ನಾಯಕನ ರಾಸಲೀಲೆಗೆ ವರ್ಷಕ್ಕೆ 25 ಹುಡುಗಿಯರು ಬೇಕಂತೆ!

ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಅವರು ತನ್ನ ವಿಚಿತ್ರ ನಿರ್ಧಾರಗಳಿಂದಲೇ ಸುದ್ದಿಯಾದವರು.ಸದ್ಯ ಇವರ ಮೇಲೆ ಯೆನ್ಮಿ ಪಾರ್ಕ್…

29 mins ago

ಕಬಕದಲ್ಲಿ ಸರಣಿ ಅಪಘಾತ: ಆ್ಯಂಬುಲೆನ್ಸ್ ಗೆ ಡಿಕ್ಕಿ ಹೊಡೆದ ಕಾರು

ಮಂಗಳೂರಿಗೆ ರೋಗಿಯನ್ನು ಕರೆದೊಯ್ಯುತ್ತಿದ್ದ ಆ್ಯಂಬುಲೆನ್ಸಿಗೆ ನ್ಯಾನೋ ಕಾರು ಡಿಕ್ಕಿ ಹೊಡೆದಿದ್ದು, ನ್ಯಾನೋ ಕಾರಿಗೆ ಮಂಗಳೂರಿನಿಂದ ಬರುತ್ತಿದ್ದ ಮತ್ತೊಂದು ಕಾರು ಡಿಕ್ಕಿಯಾದ…

38 mins ago

ಸಂಸದ ಪ್ರಜ್ವಲ್‌ ಗೆ ಅಭಿಮಾನಿಯಿಂದ ಶುಭಾಶಯ ಪತ್ರ

ಸಂಸದ ಪ್ರಜ್ವಲ್‌ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವೀಡಿಯೋಗಳು ದೇಶಾದ್ಯಂತ ಭಾರೀ ಚರ್ಚೆ ಯಾಗುತ್ತಿದ್ದು, ಈ ನಡುವೆ ಅಭಿಮಾನಿಯೊಬ್ಬ ಪ್ರಜ್ವಲ್‌…

50 mins ago

ಆಕ್ಸಿಜನ್ ಕೊರತೆ ದುರಂತಕ್ಕೆ 3 ವರ್ಷ : ಸಂತ್ರಸ್ಥರಿಗೆ ಸಿಗದ ನ್ಯಾಯ

ಕೋವಿಡ್ ಆಸ್ಪತ್ರೆಯಲ್ಲಿ 2021ರ ಮೇ 2ರ ರಾತ್ರಿ ಆಮ್ಲಜನಕ ಸಕಾಲದಲ್ಲಿ ಪೂರೈಕೆಯಾಗದೆ ಮೃತಪಟ್ಟವರ ಕುಟುಂಬಗಳಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ…

1 hour ago

ಮಠದ ಆಸ್ತಿ ಹೊಡೆದವರು ಶಾಸಕರಾಗಲು ಯೋಗ್ಯರೇ?: ಸಚಿವ ಭಗವಂತ ಖೂಬಾ

ಭಾಲ್ಕಿ ಹಿರೇಮಠದ ಪೂಜ್ಯರು, ಈ ಭಾಗದ ನಡೆದಾಡುವ ದೇವರೆಂಬ ಗೌರವಕ್ಕೆ ಪಾತ್ರರಾಗಿರುವ ಚನ್ನಬಸವ ಪಟ್ಟದ್ದೇವರು ಬೆವರು ಸುರಿಸಿ ಕಟ್ಟಿದ ಶಾಂತಿವರ್ಧಕ…

1 hour ago