Categories: ಕರಾವಳಿ

ಸುಳ್ಯ: ವೈವಿಧ್ಯತೆಯ ತಿಂಡಿ-ತಿನಿಸುಗಳ ಉಣ ಬಡಿಸಿದ ತಿಂಡಿಮೇಳ

ಸುಳ್ಯ: ರುಚಿಯ ವೈವಿಧ್ಯತೆಯನ್ನು ಉಣಬಡಿಸಿದ ಬಿಸಿ ಬಿಸಿ ತಿಂಡಿ ತಿನಿಸುಗಳು ನೆರೆದ ನೂರಾರು ಮಂದಿಯ ಬಾಯಿಯನ್ನು ಸಿಹಿಯಾಗಿಸಿತು.

ಸುಳ್ಯ ತಾಲೂಕು ಶಿವಳ್ಳಿ ಸಂಪನ್ನದ ವತಿಯಿಂದ ಹಮ್ಮಿಕೊಂಡ ತಿಂಡಿ ಮೇಳವು ಸುಳ್ಯದ ಜನತೆಗೆ ವೈವಿಧ್ಯಮಯ ಖಾದ್ಯಗಳ ರುಚಿಯ ವಿನೂತನ ಅನುಭವವನ್ನು ಕೊಡ ಮಾಡಿತ್ತು. ಮನೆ ಮನೆಗಳಲ್ಲಿ ಮಾಡುವ ವೈವಿಧ್ಯಮಯ ತಿಂಡಿಗಳ ರುಚಿಗಳು ಎಲ್ಲರ ಬಾಯನ್ನೂ ಸಿಹಿಯಾಗಿಸಿ ತಮ್ಮ ಅಡುಗೆಯ ನೈಪುಣ್ಯವನ್ನು ಎಲ್ಲರಿಗೂ ತಿಳಿಸಿಕೊಡಬೇಕು ಮತ್ತು ಕಲಿಸಿಕೊಡಬೇಕು ಎಂಬ ಉದ್ದೇಶದಿಂದ ತಿಂಡಿ ಮೇಳವನ್ನು ಏರ್ಪಡಿಸಲಾಗಿತ್ತು. ಶಿವಳ್ಳಿ ಸಂಪನ್ನವು ಪ್ರತಿ ವರ್ಷ ತಿಂಡಿ ಮೇಳವನ್ನು ಏರ್ಪಡಿಸುವುದರ ಮೂಲಕ ಸಾರ್ವಜನಿಕರ ಬಾಯಿಗೆ ರುಚಿಯ ವೈವಿಧ್ಯತೆಯನ್ನು ಉಣ ಬಡಿಸುತ್ತಾರೆ.

ಸುಳ್ಯದ ಪಯಸ್ವಿನಿ ತೀರದ ರಾಘವೇಂದ್ರ ಮಠದ ಸಭಾಂಗಣದಲ್ಲಿ ಏರ್ಪಡಿಸಿದ ತಿಂಡಿ ಮೇಳದಲ್ಲಿ 25 ಕ್ಕೂ ಅಧಿಕ ಕೌಂಟರ್‍ಗಳ ಮೂಲಕ 36 ವಿಧದ ತಿಂಡಿಗಳನ್ನು ಪ್ರದರ್ಶಿಸಿ ವಿತರಿಸಲಾಯಿತು. ಒಂದೊಂದು ಕೌಂಟರ್‍ನಲ್ಲಿಯೂ ಒಂದೊಂದು ಕುಟುಂಬದವರು ತಮ್ಮದೇ ಆದ ವಿಶೇಷ ತಿಂಡಿಗಳನ್ನು ಮಾಡಿ ಪ್ರದರ್ಶಿಸಿ ಉಣ ಬಡಿಸಿದರು. ಅದರ ತಯಾರಿಗೆ ಬಳಸುವ ವಸ್ತುಗಳು ಮತ್ತು ವಿಧಾನವನ್ನು ವಿವರಿಸಿ ಹೇಳುತ್ತಿದ್ದರು. ಪ್ರಾಕೃತಿಕವಾಗಿ ಸಿಗುವ ಫಲವಸ್ತುಗಗಳಿಂದ ತಯಾರಿಸಿದ ವಿವಿಧ ಖಾದ್ಯಗಳು ಮೇಳದ ಹೈಲೈಟ್ಸ್ ಆಗಿತ್ತು.

ಪಾನಿ ಪೂರಿ, ಬಾಳೆ ಹಣ್ಣು ಪಕೋಡ, ಬ್ರೆಡ್ ಪಕೋಡ, ಮಿನಿ ಚಿರೋಟಿ, ಪೂಂಬೆ ಡ್ರೈ ಮಂಚೂರಿ, ಮಲಾಯಿ ಸ್ಯಾಂಡ್‍ವಿಚ್, ಹಾಲುಬಾಯಿ, ಬೇಸನ್ ಲಾಡು, ವೆಜಿಟೇಬಲ್ ನುಗ್ಗೆಟ್ಸ್, ಸಕ್ಕರೆ ಉಪ್ಪೇರಿ, ದೂದ್‍ಪೇಡ, ಬಾಳೆ ಕಾಯಿ ಚಿಪ್ಸ್, ಪನೀರ್ ಪುಳಿಕಜಿಪು, ಮಿನಿ ಪುಂಡಿ, ಸೇಮಿಗೆ ಸಾಂಬಾರ್, ಉಪ್ಪು ಸೋಳೆ ವಡೆ, ಖಾರ ಅವಲಕ್ಕಿ ಪೊಂಗಲ್, ಡಾರ್‍ವಾಡ್ ಪೇಡ, ಪತ್ರೋಡೆ, ಉಂಡ್ಲುಕ, ತುಕುಡಿ, ಅಮೃತ ಫಲ, ಹುರಿ ಅಕ್ಕಿ ಫ್ರೈ, ಚಟ್ಟಂಬಡೆ, ವಿವಿಧ ಬಗೆಯ ಪೋಡಿ ಮತ್ತಿತರರ ತಿಂಡಿ ತಿನಿಸುಗಳು ಜನರ ಬಾಯಿಯನ್ನು ಚಪ್ಪರಿಸುವಂತೆ ಮಾಡಿತ್ತು. ಕೆಲವು ಕೌಂಟರ್‍ಗಳಲ್ಲಿ ಸ್ಥಳದಲ್ಲಿಯೇ ತಯಾರಿಸಿದ ಬಿಸಿ ಬಿಸಿ ತಿಂಡಿಗಳನ್ನು ವಿತರಿಸಲಾಯಿತು. ಒಂದೊಂದು ಕುಟುಂಬದವರೂ ಒಂದೊಂದು ಕೌಂಟರ್‍ನಲ್ಲಿ ಬೇರೆ ಬೇರೆ ತರಹದ ತಿಂಡಿಗಳನ್ನು ಮಾಡಿ ತಮ್ಮ ರುಚಿಯ ವೈವಿಧ್ಯತೆಯನ್ನು ಸಾರಿದರು. ತಿಂಡಿಯ ಹೆಸರನ್ನು ಮತ್ತು ತಯಾರಿಸಲು ಬಳಸುವ ವಸ್ತುಗಳ ಹೆಸರನ್ನು ಪ್ರದರ್ಶಿಸಲಾಗಿತ್ತು. ತಿಂಡಿ ಮೇಳದಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರಶಸ್ತಿ ಪತ್ರವನ್ನು ನೀಡಿ ಪುರಸ್ಕರಿಸಲಾಯಿತು. ಶಿವಳ್ಳಿ ಸಂಪನ್ನದ ವತಿಯಿಂದ ಪ್ರತಿ ವರ್ಷವೂ ವೈವಿಧ್ಯಮಯ ತಿಂಡಿಮೇಳಗಳನ್ನು ಸಂಘಟಿಸುವ ಮೂಲಕ ಶಿವಳ್ಳಿ ಸಂಪನ್ನದ ಎಲ್ಲಾ ಕುಟುಂಬಗಳು ಒಟ್ಟು ಸೇರಿ ಸಂಭ್ರಮಿಸುತ್ತಾರೆ. ಶಿವಳ್ಳಿ ಸ್ಪಂದನ ಮಂಗಳೂರು ಇದರ ಕಾರ್ಯದರ್ಶಿ ಗಣೇಶ್ ಹೆಬ್ಬಾರ್ ತಿಂಡಿ ಮೇಳವನ್ನು ಉದ್ಘಾಟಿಸಿದರು. ಸುಳ್ಯ ಶಿವಳ್ಳಿ ಸಂಪನ್ನದ ಅಧ್ಯಕ್ಷೆ ಮಮತಾ ಮೂಡಿತ್ತಾಯ, ಕಾರ್ಯದರ್ಶಿ ನವೀನ್ ಸೋಮಯಾಗಿ, ಸಂಘಟನಾ ಕಾರ್ಯದರ್ಶಿ ಪ್ರಕಾಶ್ ಮೂಡಿತ್ತಾಯ, ಬೃಂದಾವನ ಸೇವಾ ಟ್ರಸ್ಟ್‍ನ ಅಧ್ಯಕ್ಷ ಎಂ.ಎನ್.ಶ್ರೀಕೃಷ್ಣ ಉಪಸ್ಥಿತರಿದ್ದರು. ಸಾಮಾನ್ಯವಾಗಿ ಪ್ರತಿ ವರ್ಷ ಮಳೆಗಾಲದಲ್ಲಿ ಅಂದರೆ ಜುಲೈ- ಆಗಸ್ಟ್ ತಿಂಗಳಲ್ಲಿ ತಿಂಡಿ ಮೇಳವನ್ನು ಆಯೋಜಿಸಲಾಗುತ್ತದೆ. ಈ ಬಾರಿ ಕೊರೋನಾ ಮಹಾ ಮಾರಿಯ ಹಿನ್ನಲೆಯಲ್ಲಿ ಮೂರು ತಿಂಗಳು ತಡವಾಗಿ ತಿಂಡಿ ಮೇಳ ಆಯೋಜಿಸಲಾಗಿದೆ.

 

 

 

 

 

 

Desk

Recent Posts

ಭೂದೇವಿ ಸಮೇತ ಶ್ರೀಲಕ್ಷ್ಮಿವರಾಹಸ್ವಾಮಿಗೆ ಅಭಿಷೇಕ

ವರಹಾ ಜಯಂತಿಯ ಅಂಗವಾಗಿ ಕೃ?ರಾಜಪೇಟೆ ತಾಲ್ಲೂಕಿನ ಕಲ್ಲಹಳ್ಳಿಯ ಭೂದೇವಿ ಸಮೇತ ಶ್ರೀಲಕ್ಷ್ಮಿ ಭೂವರಾಹಸ್ವಾಮಿಯ ಶಿಲಾಮೂರ್ತಿಗೆ ವಿಶೇ? ಅಭಿ?ಕ ನಡೆಯಿತಲ್ಲದೆ, ಸ್ವಾಮಿಯ…

4 hours ago

ನನ್ನ ವಿರುದ್ಧ ದೇವರಾಜೇಗೌಡ ಮಾಡಿರುವ ಆಪಾದನೆಗಳು ಆಧಾರ ರಹಿತ: ಡಿಕೆ ಶಿವಕುಮಾರ್

ಹಾಸನ ವಿಡಿಯೋ ಪೆನ್​ಡ್ರೈವ್​ ಸೂತ್ರಧಾರಿ ಡಿಕೆ ಶಿವಕುಮಾರ್ ಎಂದು ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ ಗಂಭೀರ ಆರೋಪ ಮಾಡಿ ಆಡಿಯೋವೊಂದನ್ನು…

4 hours ago

ರಾಜ್ಯದ ಹಲವೆಡೆ ಮುಂದಿನ 5 ದಿನಗಳ ಕಾಲ‌ ಗುಡುಗು ಸಹಿತ ಮಳೆ ಸಾಧ್ಯತೆ

ರಾಜ್ಯದ ಹಲವೆಡೆ ಇಂದಿನಿಂದ ಮೇ 11ರವರೆಗೆ ವರುಣ ಆಗಮನ ಆಗುವ ಮುನ್ಸೂಚನೆ. ಹಾಗೂ ಮುಂದಿನ 5 ದಿನಗಳ ಕಾಲ‌ ಗುಡುಗು…

4 hours ago

ಬೀದರ್ ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದರು ಮಾವಿನ ಹಣ್ಣಿನ ದರ್ಬಾರ್‌

ಯುಗಾದಿ ಮುಗಿಯುತ್ತಿದ್ದಂತೆ ಎಲ್ಲೆಡೆ ಮಾವಿನ ಹಣ್ಣುಗಳ ದರ್ಬಾರ ಕಂಡುಬರುತ್ತಿದೆದೆ. ಮಾರುಕಟ್ಟೆಗೆ ಮಾವಿನಕಾಯಿ ಹೆಚ್ಚಾಗಿ ಬರುತ್ತಿದೆ. ಸಾಲಾಗಿ ಜೋಡಿಸಿಟ್ಟ ಮಾವಿನ ಹಣ್ಣು…

4 hours ago

ಬಾಲಕಿ ಮೇಲೆ 2 ರಾಟ್‌ವೀಲರ್ ನಾಯಿಗಳಿಂದ ದಾಳಿ: ಮಾಲೀಕ ಅರೆಸ್ಟ್

ಎರಡು ರಾಟ್‌ವೀಲರ್ ನಾಯಿಗಳು ಐದು ವರ್ಷದ ಬಾಲಕಿ ಮೇಲೆ ದಾಳಿ ಮಾಡಿದ ಘಟನೆ ಚೆನ್ನೈನ ಥೌಸಂಡ್ ಲೈಟ್ಸ್ ಪ್ರದೇಶದ ಸಾರ್ವಜನಿಕ…

5 hours ago

ಬೀದರ್: ಬಿಸಿಲಿನ ಝಳಕ್ಕೆ ಚುನಾವಣೆ ಸಿಬ್ಬಂದಿ ತತ್ತರ

ಮಂಗಳವಾರ ನಡೆಯಲಿರುವ ಲೋಕಸಭೆ ಚುನಾವಣೆಗೆ ಚುನಾವಣೆ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಸೋಮವಾರ ಮಧ್ಯಾಹ್ನದಿಂದಲೇ ಕರ್ತವ್ಯ ನಿರತ ಸಿಬ್ಬಂದಿ ಮತಗಟ್ಟೆಗೆ…

5 hours ago