Categories: ಕರಾವಳಿ

ಸುಳ್ಯ ನಗರ ಪಂಚಾಯಿತಿ ಮುಂಭಾಗದ ತ್ಯಾಜ್ಯ ತೆರವು ಆರಂಭ

ಸುಳ್ಯ: ಸುಳ್ಯ ನಗರ ಪಂಚಾಯಿತಿಗೆ ನೂತನ ಆಡಳಿತ ಅಧಿಕಾರ ವಹಿಸಿದ ಬೆನ್ನಲ್ಲೇ ಸುಳ್ಯ ನಗರ ಪಂಚಾಯಿತಿ ಮುಂಭಾಗದಲ್ಲಿ ಶೇಖರಿಸಿಟ್ಟು ತೀವ್ರ ವಿವಾದಕ್ಕೆ ಕಾರಣವಾಗಿದ್ದ ತ್ಯಾಜ್ಯ ರಾಶಿಯನ್ನು ತೆರವು ಮಾಡುವುದಕ್ಕೆ ಚಾಲನೆ ದೊರೆತಿದೆ.

ಕಳೆದ ಎರಡು ವರ್ಷಗಳಿಂದಲೂ ಹೆಚ್ಚು ಸಮಯದಿಂದ ಸುಳ್ಯ ನಗರದ ತ್ಯಾಜ್ಯದ ಡಂಪಿಂಗ್ ಯಾರ್ಡ್ ಆಗಿ ಪರಿವರ್ತನೆ ಆಗಿದ್ದ ನಗರ ಪಂಚಾಯಿತಿ ಪರಿಸರಕ್ಕೆ ಕೊನೆಗೂ ಮುಕ್ತಿ ದೊರೆಯುವ ಸಾಧ್ಯತೆ ಇದೆ. ನಗರ ಪಂಚಾಯಿತಿ ಮುಂಭಾಗದ ಕಟ್ಟಡ ಮತ್ತು ಕಚೇರಿಯ ಹಿಂಭಾಗದಲ್ಲಿ ತುಂಬಿಡಲಾಗಿದ್ದ ಕಸ ದುರ್ನಾತ ಬೀರಿ ಪರಿಸರವನ್ನೇ ಕೆಡಿಸಿತ್ತು. ಇದೀಗ ಈ ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವುದಕ್ಕೆ ಸಂಬಂಧಪಟ್ಟು ಪ್ರಕ್ರಿಯೆಗಳು ಆರಂಭಗೊಂಡಿದೆ. ಪ್ರಥಮ ಹಂತದಲ್ಲಿ ಪ್ರತ್ಯೇಕಿಸಲ್ಪಟ್ಟ ಪ್ಲಾಸ್ಟಿಕ್ ಕಸವನ್ನು ಕಲ್ಚರ್ಪೆಗೆ ಸಾಗಿಸಲು ಆರಂಭಿಸಿದ್ದಾರೆ.

ನಗರದಿಂದ ಸಂಗ್ರಹಿಸಲಾಗುವ ಒಣ ಕಸದಿಂದ ಮತ್ತು ನಗರ ಪಂಚಾಯತ್‍ನಲ್ಲಿ ಕೂಡಿಟ್ಟ ಕಸದಿಂದ ಪ್ಲಾಸ್ಟಿಕ್ ಪ್ರತ್ಯೇಕಿಸಲಾಗುತ್ತದೆ. ಹೀಗೆ ಪ್ರತ್ಯೇಕಿಸಿದ ಪ್ಲಾಸ್ಟಿಕ್‍ಗಳನ್ನು ಕಲ್ಚರ್ಪೆಗೆ ಕೊಂಡೊಯ್ದು ಅಲ್ಲಿನ ಶೆಡ್‍ನಲ್ಲಿ ಶೇಖರಿಸಲಾಗುತ್ತದೆ. ಶೆಡ್‍ಗೆ ನೆಟ್‍ಗಳನ್ನು ಹಾಕಿ ಭದ್ರ ಪಡಿಸಿ ಅಲ್ಲಿ ಶೇಖರಿಸಲಾಗುತ್ತದೆ. ಪ್ಲಾಸ್ಟಿಕ್ ಪ್ರೆಸ್ಸಿಂಗ್ ಮೆಷಿನ್ ತಂದು ಆ ಪ್ಲಾಸ್ಟಿಕ್‍ನ್ನು ಪ್ರೆಸ್ ಮಾಡಿ ಅದರ ಪ್ರಮಾಣವನ್ನು ಕಡಿಮೆ ಮಾಡಲಾಗುವುದು. ಬಳಿಕ ಅದನ್ನು ಮರು ಬಳಕೆಗೆ ಮಾರಾಟ ಮಾಡುವ ಯೋಚನೆ ರೂಪಿಸಲಾಗಿದೆ. ನಗರ ಪಂಚಾಯತ್ ವತಿಯಿಂದ ಬರ್ನಿಂಗ್ ಮೆಷಿನ್‍ಗಳನ್ನು ಅಳವಡಿಸಲಾಗುವುದು. ಅದಕ್ಕೆ ಅನುಮತಿ ದೊರೆಯುವ ಪ್ರಕ್ರಿಯೆಗಳು ಪೂರ್ತಿಗೊಂಡಿದೆ. ಈ ಬರ್ನಿಂಗ್ ಮೆಷಿನ್ ಮೂಲಕ ಕಲ್ಚರ್ಪೆಯ ಡಂಪಿಂಗ್ ಯಾರ್ಡ್‍ನಲ್ಲಿ ಈ ಹಿಂದೆ ತುಂಬಿರುವ ಕಸವನ್ನು ವೈಜ್ಞಾನಿಕವಾಗಿ ಉರಿಸಲಾಗುವುದು ಎಂದು ನಗರ ಪಂಚಾಯಿತಿ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ವಿವರಿಸಿದ್ದಾರೆ. ನಗರದಿಂದ ಸಂಗ್ರಹಿಸುವ ಹಸಿ ಕಸವನ್ನು ಗೊಬ್ಬರ ತಯಾರಿಕೆಗೆ ಕೊಂಡೊಯ್ಯಲಾಗುತ್ತಿದ್ದು ಸದ್ಯ ಅದೇ ರೀತಿ ಮುಂದುವರಿಸಲಿದೆ. ನಗರ ಪಂಚಾಯತ್‍ನಲ್ಲಿ ಶೇಖರಗೊಂಡಿರುವ ಕಸದಿಂದ ಪ್ಲಾಸ್ಟಿಕ್ ಬಾಟ್ಲಿ, ರಟ್ಟು ಮತ್ತಿತರ ವಸ್ತುಗಳನ್ನು ಪ್ರತ್ಯೇಕಿಸಿ ಮರು ಬಳಕೆಗೆ ಉಪಯೋಗಕ್ಕೆ ಮಾರಾಟ ಮಾಡುವ ಬಗ್ಗೆ ಯೋಚನೆ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.

 

ವಿವಾದದ ಕೇಂದ್ರ ಬಿಂದು

ನಗರ ಪಂಚಾಯತ್‍ನ ಕಸ ವಿಲೇವಾರಿ ಕೇಂದ್ರದ ಕಲ್ಚರ್ಪೆಯಲ್ಲಿ ಕಸದ ರಾಶಿ ತುಂಬಿ ಹೋದ ಕಾರಣ ಅಲ್ಲಿ ಕಸ ಹಾಕಲು ಸಾಧ್ಯವಿಲ್ಲದೇ ಪರಿಸ್ಥಿತಿ ಬಿಗಡಾಯಿಸಿತ್ತು. ಕಸ ವಿಲೇವಾರಿಗೆ ಬೇರೆ ಸ್ಥಳದ ಬೇಡಿಕೆ ಇದ್ದರೂ ಎಲ್ಲಿಯೂ ಸಮರ್ಪಕವಾದ ಸ್ಥಳ ಹುಡುಕಲು ಸಾಧ್ಯವಾಗಲಿಲ್ಲ. ಇದರಿಂದ ನಗರದಲ್ಲಿ ಸಂಗ್ರಹವಾಗುವ ಹಸಿ ಕಸವನ್ನು ಗೊಬ್ಬರ ಮಾಡಲು ಕಳಿಸಿ ಉಳಿದ ಪ್ಲಾಸ್ಟಿಕ್ ಮತ್ತಿತರ ಒಣ ಕಸವನ್ನು ನಗರ ಪಂಚಾಯತ್‍ನ ಮುಂಭಾಗದ ಕಟ್ಟದಲ್ಲಿ ಶೇಖರಿಸಿಡಲು ಆರಂಭಿಸಿದರು. ಆದರೆ ಕೆಲವು ತಿಂಗಳ ನಂತರ ನಗರ ಪಂಚಾಯತ್ ಮುಂಭಾಗದ ಕಟ್ಟಡದಲ್ಲಿ ಕಸದ ರಾಶಿಯೇ ತುಂಬಿ ದುರ್ನಾತ ಬೀರಲು ಆರಂಭಗೊಂಡಿತ್ತು. ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು.ಇದೀಗ ಹೊಸತಾಗಿ ನಗರ ಪಂಚಾಯತ್ ಆಡಳಿತ ಮಂಡಳಿ ಅಧಿಕಾರ ವಹಿಸಿದ್ದು ತ್ಯಾಜ್ಯಕ್ಕೆ ಮುಕ್ತಿ ನೀಡುವ ಬಗ್ಗೆ ಯೋಜನೆ ರೂಪಿಸಿ ಕಾರ್ಯಪ್ರವೃತ್ತವಾಗಿದೆ.

Desk

Recent Posts

ಇಂದು ವಿಶ್ವ ನಗುವಿನ ದಿನ : ನಾವು ನಗೋಣ, ಇನ್ನೊಬ್ಬರನ್ನು ನಗಿಸೋಣ

ʻನಗುʼ ಇದು ಎಲ್ಲ ಮಾನಸಿಕ ಹಾಗೂ ದೈಹಿಕ ಕಾಯಿಲೆಗಳನ್ನು ದೂರವಿರಿಸುವ ಒಂದು ಅಸ್ತ್ರ.ಹೀಗಾಗಿಯೇ ನಗುವಿನ ಪ್ರಾಮುಖ್ಯತೆಯನ್ನು ಸಾರಲು ವಿಶ್ವದಾದ್ಯಂತ ಮೇ…

7 mins ago

ಗುಜರಾತ್ ವಿರುದ್ಧ ಆರ್‌ಸಿಬಿಗೆ 4 ವಿಕೆಟ್‌ಗಳ ಭರ್ಜರಿ ಜಯ

ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಆರ್‌ಸಿಬಿ ಮತ್ತು ಗುಜರಾತ್ ಟೈಟನ್ಸ್ ಮಧ್ಯೆ ನಡೆದ ರೋಚಕ ಪಂದ್ಯದಲ್ಲಿ 152 ರನ್ ಗಳಿಸುವ ಮೂಲಕ ಆರ್‌ಸಿಬಿ…

7 hours ago

147 ರನ್​​ಗೆ ಆಲೌಟ್ ಆದ ಗುಜರಾತ್​ ಟೈಟನ್ಸ್​ : ಆರ್​ಸಿಬಿ ವೇಗಿಗಳ ದಾಖಲೆ ಪ್ರದರ್ಶನ

ಚಿನ್ನಸ್ವಾಮಿ​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರುವ ರೋಚಕ ಪಂದ್ಯದಲ್ಲಿ ಗುಜರಾತ್​ ಟೈಟನ್ಸ್​ ತಂಡವನ್ನು ರಾಯಲ್​ ಚಾಲೆಂಜರ್ಸ್​ ಬೆಂಗಳೂರು 19.3 ಓವರ್​ಗಳಲ್ಲಿ 147…

8 hours ago

ರಾಜೀನಾಮೆ ನೀಡಿದ ಪೇಟಿಎಂ ಸಿಒಒ ಭವೇಶ್ ಗುಪ್ತಾ

ಪೇಟಿಎಂನ ಮಾತೃ ಸಂಸ್ಥೆಯಾಗಿರುವ ಒನ್ 97 ಕಮ್ಯುನಿಕೇಷನ್ಸ್ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವೇಶ್ ಗುಪ್ತಾ ಅವರು ತಮ್ಮ ಹುದ್ದೆಗೆ…

8 hours ago

ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಶಾಸಕ ಎಂ.ಆರ್ ಮಂಜುನಾಥ್ ಭೇಟಿ

ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸತ್ತೇಗಾಲ ವಿವಿಧಡೆ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಶಾಸಕ ಎಂ.ಆರ್ ಮಂಜುನಾಥ್ ಭೇಟಿ ನೀಡಿ ಪರಿಶೀಲನೆ…

9 hours ago

ಬೆಂಗಾವಲು ಪಡೆಯ ವಾಹನದ ಮೇಲೆ ಭಯೋತ್ಪಾದಕರ ದಾಳಿ: ಐವರು ಅಧಿಕಾರಿಗಳಿಗೆ ಗಾಯ

ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಇಂದು (ಶನಿವಾರ) ಭಾರತೀಯ ವಾಯುಪಡೆ ಬೆಂಗಾವಲು ಪಡೆ ವಾಹನದ ಮೇಲೆ ಭಯೋತ್ಪಾದಕರು ದಾಳಿ…

9 hours ago