Categories: ಕರಾವಳಿ

ಸಾಲ ಪಡೆಯಲು ದಾಖಲೆ ನೀಡಿದ್ದ ವಿದ್ಯಾರ್ಥಿಗೆ ₹ 4.52 ಲಕ್ಷ ವಂಚನೆ

ಕಾರವಾರ: ಸಾಲ ಕೇಳಲು ವೈಯಕ್ತಿಕ ಮಾಹಿತಿ ಕೊಟ್ಟು ₹ 4.52 ಲಕ್ಷ ಕಳೆದುಕೊಂಡ ವಿದ್ಯಾರ್ಥಿ ಇಲ್ಲಿನ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.

ಹೊನ್ನಾವರದ ಕ್ರಿಜೊಸ್ಟಮ್ ಬಾಲು ಪುಟಾಡೋ ಎಂಬ 20 ವರ್ಷದ ಯುವಕ ಮೋಸ ಹೋದ ಯುವಕ. ಇನ್‌ಸ್ಟಾಗ್ರಾಂನಲ್ಲಿ ಆದಿತ್ಯ ಬಿರ್ಲಾ ಕ್ಯಾಪಿಟಲ್ ಹೆಸರಲ್ಲಿ ಸಾಲ ನೀಡಲಾಗುವುದು ಎಂದು ಜಾಹೀರಾತು ಇತ್ತು. ಇದನ್ನು ಕಂಡ ವಿದ್ಯಾರ್ಥಿ ಕ್ರಿಜೊಸ್ಟಮ್ ತನ್ನ ಮಾಹಿತಿಯನ್ನು ಆದಿತ್ಯ ಬಿರ್ಲಾಕ್ಯಾಪಿಟಲ್ ವಿಳಾಸಕ್ಕೆ ನೀಡಿದ.

ಮೊಬೈಲ್ ಪೋನ್ ನಂಬರ್ ಸಹ ಹಾಕಿದ. ಸಾಲ ವಂಚಕರಿಗೆ ಮಂಜೂರಾಗಿದೆ. ರಿಜಿಸ್ಟ್ರೇಶನ್ ಫೀ 1500 ತುಂಬಲು ಹೇಳಿದರು. ನಂತರ ಜಿಎಸ್‍ಟಿ ಇನ್ನಿತರ ಶುಲ್ಕ ಎಂದು 2,08,047 ತುಂಬಲು ಹೇಳಿದರು. ನಂತರ ಮತ್ತೆ ಅಷ್ಟೇ ಹಣ ತುಂಬಿಸಿಕೊಂಡರು.

ಅಷ್ಟೊತ್ತಿಗೆ ವಿದ್ಯಾರ್ಥಿ ₹ 4,52,940 ಅನಾಮಧೇಯರು ಸೂಚಿಸಿದ ಆಕೌಂಟ್‍ಗೆ ಹಾಕಿದ್ದ. ಕೊನೆಗೆ ಅನಾಮಧೇಯರು ಕೈ ಎತ್ತಿದ್ದರು. ₹ 2 ಲಕ್ಷ ಸಾಲ ಪಡೆಯಲು ಹೋಗಿ ₹ 4.52 ಲಕ್ಷ ಕಳೆದು ಕೊಂಡ ವಿದ್ಯಾರ್ಥಿ ಕೊನೆಗೆ ಸೈಬರ್ ಕ್ರೈಮ್ ಅಪರಾಧ ಠಾಣೆಗೆ ಬಂದು ದೂರು ನೀಡಿದ್ದಾನೆ. ತನಿಖೆ ಆರಂಭವಾಗಿದೆ ಎಂದು ಸೈಬರ್ ಕ್ರೈಮ್ ವಿಭಾಗದ ಸುದರ್ಶನ ತಿಳಿಸಿದ್ದಾರೆ.

Desk

Recent Posts

ಅಂಜಲಿ ಹಂತಕ ಗಿರೀಶನ ಮೇಲೆ ಮತ್ತೊಂದು ಪ್ರಕರಣ ದಾಖಲು

ಇಲ್ಲಿನ ವೀರಾಪುರ ಓಣಿಯಲ್ಲಿ ಅಂಜಲಿ ಅಂಬಿಗೇರ ಹಂತಕ ಗಿರೀಶ ಉರುಫ್‌ ವಿಶ್ವ ಸಾವಂತ ವಿರುದ್ಧ ಬೆಂಡಿಗೇರಿ ಠಾಣೆಯಲ್ಲಿ ಮತ್ತೊಂದು ಪ್ರಕರನ…

28 mins ago

ʼರಾಹುಲ್ ಮತ್ತು ನಾನು ಒಟ್ಟಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರೆ ಬಿಜೆಪಿ ಲಾಭವಾಗುತ್ತಿತ್ತುʼ

ದೇಶದ್ಯಾಂತ ಕಾಂಗ್ರೆಸ್‌ ಪಕ್ಷದ ಪರವಾಗಿ ಪ್ರಚಾರ ನಡೆಸಬೇಕೆಂಬ ಉದ್ದೇಶದಿಂದ ನಾನು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲ, ರಾಹುಲ್ ಗಾಂಧಿ…

30 mins ago

ಪೊಲೀಸ್‌ ಕಸ್ಟಡಿಯಲ್ಲಿಯೇ ದಂಪತಿ ಆತ್ಮಹತ್ಯೆ: ರೊಚ್ಚಿಗೆದ್ದು ಠಾಣೆಗೆ ಬೆಂಕಿ ಹಚ್ಚಿದ ಗ್ರಾಮಸ್ಥರು

ಪೊಲೀಸ್‌ ಕಸ್ಟಡಿಯಲ್ಲಿಯೇ ಗಂಡ ಹಾಗೂ ಹೆಂಡತಿ ಮೃತಪಟ್ಟಿರುವ ಘಟನೆ ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ ನಡೆದಿದೆ.

54 mins ago

ಆತ್ಮಹತ್ಯೆಗೆ ಮುನ್ನ ನಟ ಚಂದು ಲಾಸ್ಟ್​ ಮೆಸೇಜ್​ ಇದು

ಇದು ತೆಲುಗು ಕಿರುತೆರೆ ನಟ ಚಂದು ಆತ್ಮಹತ್ಯೆಗೂ ಮುನ್ನ ಬರೆದ ಸಂದೇಶ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಚಂದುವಿನ ಕೊನೆಯ ಮೆಸೇಜ್​…

1 hour ago

ಕರ್ನಾಟಕದ ಹಲವೆಡೆ ಮೇ 19ರಿಂದ 21 ರವರೆಗೆ ಭಾರೀ ಮಳೆ ಸಾಧ್ಯತೆ

ಕರ್ನಾಟಕದ ಹಲವೆಡೆ ಮೇ 19ರಿಂದ 21 ರವರೆಗೆ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

1 hour ago

ಜೀವ -ಜಲ ಉಳಿಸಲು ಸ್ವಯಂ ಪ್ರೇರಣೆಯ ಪಾಲ್ಗೊಳ್ಳುವಿಕೆ ಮುಖ್ಯ: ಪ್ರಭಾಕರ ಶರ್ಮಾ

ನೀರಿನ ಮಿತ ಬಳಕೆ, ಪರಿಸರ ಸಂರಕ್ಷಣೆಯಲ್ಲಿ ಸಾರ್ವಜನಿಕರು  ಸ್ವಯಂ ಪ್ರೇರಿತರಾಗಿ ತಮ್ಮ ಇತಿ ಮಿತಿಯಲ್ಲಿ ಸಣ್ಣ ಕೊಡುಗೆಗಳನ್ನು ನೀಡುವ ಮೂಲಕ…

1 hour ago