Categories: ಕರಾವಳಿ

ವಿವಿಧ ಕ್ಷೇತ್ರಗಳ 18 ಮಂದಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ಮಂಗಳೂರು: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸುಮಾರು 18 ಮಂದಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ನವಂಬರ್ 1ರಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿತರಣೆಯು ನಡೆಯಲಿದೆ. ಜಿಲ್ಲಾಡಳಿತವು ಇದಕ್ಕೆ ಕುಮಾರ್ ಪೆರಾಜೆ(ಕೃಷಿ), ಶೇಖರ್ ಭಂಡಾರಿ(ಸಾಹಿತ್ಯ), ಬೊಂಡಾಲ ಸಚ್ಚಿದಾನಂದ ಶೆಟ್ಟಿ(ಶಿಕ್ಷಣ), ಪಿ.ಎಂ. ಹಸನಬ್ಬ ಮೂಡುಬಿದಿರಿಎ(ಸಂಗೀತ), ದಿನಾಕರ್ ಇಂದಾಜೆ(ಪತ್ರಿಕೋದ್ಯಮ), ಲಕ್ಷ್ಮಣ್ ಕುಂದರ್(ಪತ್ರಿಕೋದ್ಯಮ), ವಿದ್ವಾನ್ ಶ್ರಾವನ್ ಉಳ್ಳಾಲ್(ನೃತ್ಯ), ನಾಗೇಶ್ ಎ.(ಕ್ರೀಡೆ), ಮೊಹಮ್ಮ ಶಮಿ ಅರ್ಶದ್(ಕ್ರೀಡಾ), ಜಾನ್ ಚಂದ್ರನ್(ಕಲೆ), ಸದಾಶಿವ ಅಮೀನ್(ಚಿತ್ರಕಲೆ), ಚಂದ್ರಶೇಖರ್ ನಾನಿಲ್(ಸಮಾಜಸೇವೆ), ಡಾ. ಐ. ಶಶಿಕಾಂತ್ ಜೈನ್(ಸಮಾಜಸೇವೆ), ಶಂಕರ್ ಬಿ ಶೆಟ್ಟಿ ವಿರಾರ್(ಸಮಾಜ ಸೇವೆ), ಕುರ್ನಾಡ್ ಶಿವಣ್ಣ ಆಚಾರ್ಯ(ಜಾನಪದ), ಗೋಪಾಲ್ ಶಿಬರೂರ್(ಜಾನಪದ), ಡಾ. ದಿನೇಶ್ ಕದಂ(ವೈದ್ಯಕೀಯ) ಮತ್ತು ಡಾ. ಮನೋರಮಾ ರಾವ್(ವೈದ್ಯಕೀಯ).

ಸುಳ್ಯ ಅರಂತೋಡುನ ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಕಂಕನಾಡಿ ಗರೋಡಿಯ ಬಿಲ್ಲವ ಸೇವಾ ಸಮಾಜ, ಸುಲ್ತಾನ್ ಬತ್ತೇರಿಯ ಮಾತಾ ಅಮೃತಾನಂದಮಯಿ ಸೇವಾ ಸಮಿತಿ, ಕದ್ರಿಯ ಕದ್ರಿ ನೃತ್ಯ ವಿದ್ಯಾನಿಲಯ ಚಾರಿಟೇಬಲ್ ಟ್ರಸ್ಟ್, ತಣ್ಣೀರು ಬಾವಿ ಸ್ವಿಮ್ಮಿಂಗ್ ಎಕ್ಸ್ ಪರ್ಟ್, ಪಿಸಿಎಓಎಂ ಬಿಎಫ್ ಮತ್ತು ಪಳ್ನೀರ್ ನ ಮದರ್ ಥೆರೆಸಾ ಹೋಮ್ ಆಫ್ ಡೈಯಿಂಗ್ ಡೆಸ್ಟಿಟ್ಯೂಟ್ ಹೀಗೆ ಏಳು ಸಂಘಸಂಸ್ಥೆಗಳು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದಿವೆ.

ಗುರುವಾರ ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುತ್ತದೆ.

Desk

Recent Posts

ರೋಹಿತ್‌ ವೇಮುಲ ದಲಿತನಲ್ಲ : ಮರು ತನಿಖೆಗೆ ತೆಲಂಗಾಣ ಸಿಎಂ ಭರವಸೆ

2016 ರಲ್ಲಿ ನಡೆದ ರೋಹಿತ್‌ ವೇಮುಲ್‌ ಆತ್ಮಹತ್ಯೆ ಪ್ರಕರಣದಲ್ಲಿ ಪೊಲೀಸರು ಸಲ್ಲಿಸಿರುವ ಅಂತಿಮ ವರದಿಗೆ ವೇಮುಲ ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದು…

12 mins ago

ಗರ್ಭಿಣಿಯ ಮರ್ಯಾದೆ ಗೇಡು ಹತ್ಯೆ: ಇಬ್ಬರು ಆರೋಪಿಗಳಿಗೆ 4.19 ಲಕ್ಷ ರೂ. ದಂಡ, ಗಲ್ಲು ಶಿಕ್ಷೆ

ಗರ್ಭಿಣಿಯನ್ನು ಮರ್ಯಾದೆ ಗೇಡು ಹತ್ಯೆ ಮಾಡಿದ್ದ ಇಬ್ಬರು ಆರೋಪಿಗಳಿಗೆ ವಿಜಯಪುರ ಜಿಲ್ಲೆಯ ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ…

18 mins ago

ಆಯೋಗದ ನಿಯಮ ಉಲ್ಲಂಘಿಸಿದಲ್ಲಿ ಪ್ರಜಾಪ್ರತಿನಿಧಿ ವಿರುದ್ಧ ಕ್ರಮ ಖಚಿತ : ಡಿಸಿ

ಚುನಾವಣಾ ಆಯೋಗವು ಮೇ. 5, 2024 ರ ಸಾಯಂಕಾಲ 6 ಗಂಟೆಯಿಂದ ಮತದಾನ ದಿನವಾದ ಮೇ. 07, 2024ರಂದು ಮತದಾನ…

38 mins ago

ಜೆಡಿಎಸ್‌ ನಾಯಕರ ಕುಟುಂಬದೊಳಗಿನ ಜಗಳದಿಂದ ಪ್ರಜ್ವಲ್‌ ಪ್ರಕರಣ ಹೊರಬಿದ್ದಿದೆ: ಡಿ.ಕೆ. ಶಿವಕುಮಾರ್‌

ಜೆಡಿಎಸ್‌ ನಾಯಕರ ಕುಟುಂಬದೊಳಗಿನ ಜಗಳದಿಂದ ಪ್ರಜ್ವಲ್‌ ಪ್ರಕರಣ ಹೊರಬಿದ್ದಿದೆ: ಡಿ.ಕೆ. ಶಿವಕುಮಾರ್‌

45 mins ago

ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ನಿರಾಕರಿಸಿದ ಕಾಂಗ್ರೆಸ್‌ ಅಭ್ಯರ್ಥಿ

ಇದೀಗ ಕಾಂಗ್ರೆಸ್‌ ಪಕ್ಷಕ್ಕೆ ಮತ್ತೊಂದು ಹೊಡೆತ ಬಿದ್ದಿದೆ.   ಸೂರತ್, ಇಂದೋರ್ ಬಳಿಕ ಇದೀಗ ಒಡಿಶಾದ ಪುರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್…

48 mins ago

ಫೇಕ್‌ ನ್ಯೂಸ್‌: ಕೋವಿಶೀಲ್ಡ್​ ಪಡೆದವರು ತಂಪುಪಾನಿಯ,ಐಸ್​ ಕ್ರೀಮ್ ಸೇವಿಸಬಾರದು

ಕೊರೊನಾ ಸಂದರ್ಭದಲಲಿ ಕೋವಿಶೀಲ್ಡ್‌ ಪಡೆದವರು ತಂಪುಪಾನಿಯ,ಐಸ್​ ಕ್ರೀಮ್ ಸೇವಿಸಬಾರದು ಎಂದು ಸುಳ್ಳು ಸುದ್ದಿ ಹಬ್ಬಿಸಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ

1 hour ago