Categories: ಕರಾವಳಿ

ರಾಷ್ಟ್ರವ್ಯಾಪಿ ಮುಷ್ಕರ: ಸುಳ್ಯದಲ್ಲಿ ಪ್ರತಿಭಟನಾ ಪ್ರದರ್ಶನ

ಸುಳ್ಯ: ಕೇಂದ್ರ ಸರಕಾರ ಕಾರ್ಮಿಕ ವಿರೋಧಿ ನೀತಿ ಅನುಸರಿಸುತಿದೆ ಎಂದು ಆರೋಪಿಸಿ ಕಾರ್ಮಿಕ ಸಂಘಟನೆಗಳ ಒಕ್ಕೂಟ ನಡೆಸಿದ ರಾಷ್ಟ್ರ ವ್ಯಾಪಿ ಮುಷ್ಕರದ ಅಂಗವಾಗಿ ಸುಳ್ಯದಲ್ಲಿ ಪ್ರತಿಭಟನಾ ಪ್ರದರ್ಶನ ನಡೆಯುತು.

ಕೇಂದ್ರ ಹಾಗೂ ರಾಜ್ಯ ಸರಕಾರಗಳ  ಕಾರ್ಮಿಕ ವಿರೋಧಿ  ನೀತಿಗಳನ್ನು ಹಿಂಪಡೆಯಬೇಕು ಮತ್ತು ತಡೆ ಹಿಡಿದಿರುವ ಕಾರ್ಮಿಕರ ಸವಲತ್ತುಗಳನ್ನು ಶೀಘ್ರ ಒದಗಿಸಬೇಕು ಎಂದು ಟ್ರೇಡ್ ಯೂನಿಯನ್ ಸಂಘಟನೆಗಳ ಒಕ್ಕೂಟದ ವತಿಯಿಂದ ಸುಳ್ಯ ಬಸ್ ನಿಲ್ದಾಣದ ಬಳಿಯಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಆಗ್ರಹಿಸಲಾಯಿತು.

ಸಿಐಟಿಯು ತಾಲೂಕು ಅಧ್ಯಕ್ಷ ಕೆ.ಪಿ.ಜಾನಿ, ಸಿಪಿಐಎಂ ತಾಲೂಕು ಕಾರ್ಯದರ್ಶಿ ರಾಬರ್ಟ್ ಡಿಸೋಜಾ, ರೈತ ಸಂಘದ ಮುಖಂಡ ಅಶೋಕ್ ಎಡಮಲೆ, ರೈತ ಸಂಘದ ತಾಲೂಕು ಅಧ್ಯಕ್ಷ ಲೋಲಜಾಕ್ಷ ಭೂತಕಲ್ಲು ಮಾತನಾಡಿದರು. ಕಟ್ಟಡ ಕಾರ್ಮಿಕ ಸಂಘಟನೆಯ ಅಧ್ಯಕ್ಷ ನಾಗರಾಜ್ ಹೆಚ್.ಕೆ, ಕಾರ್ಯದರ್ಶಿ ಬಿಜು ಅಗಷ್ಟಿನ್, ಕೋಶಾಧಿಕಾರಿ ವಿಶ್ವನಾಥ ನೆಲ್ಲಿಬಂಗಾರಡ್ಕ, ಸಂಘಟನೆಗಳ ಪ್ರಮುಖರಾದ ಶಿವರಾಮ ಗೌಡ, ನಾಗರಾಜ ಕಲ್ಲುಮುಟ್ಲು, ಶ್ರೀಧರ, ದಿವಾಕರ ಪೈ, ಸೆಬಾಷ್ಟಿಯನ್ ಮಡಪ್ಪಾಡಿ, ರಿಕ್ಷಾ ಯೂನಿಯನ್‍ನ ಮಹಮ್ಮದ್, ಅಬೂಬಕ್ಕರ್  ಮತ್ತಿತರರು ಉಪಸ್ಥಿತರಿದ್ದರು. ಕಟ್ಟಡ ಕಾರ್ಮಿಕ ಸಂಘಟನೆ, ಬೀಡಿ ಕಾರ್ಮಿಕರ ಸಂಘಟನೆ, ಬಿಸಿ ಊಟ ಕಾರ್ಮಿಕರ ಸಂಘಟನೆ, ರಿಕ್ಷಾ ಯೂನಿಯನ್, ಬ್ಯಾಂಕ್ ನೌಕರರ ಯೂನಿಯನ್ ಮತ್ತಿತರ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದವು.

 

Desk

Recent Posts

ನಾಳೆ (ಏ. 29) ಬಾಗಲಕೋಟೆಗೆ ಪ್ರಧಾನಿ ಮೋದಿ ಆಗಮನ

ಲೋಕಸಭಾ ಚುನಾವಣೆ ಪ್ರಯುಕ್ತ ವಿಜಯಪುರ ಹಾಗೂ ಬಾಗಲಕೋಟೆ ಅವಳಿ ಜಿಲ್ಲೆ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರಾರ್ಥ ವಿಶ್ವನಾಯಕ, ದೇಶದ ನೆಚ್ಚಿನ…

18 mins ago

1.5 ಲಕ್ಷ ಮೌಲ್ಯದ ನಶೆ ಗುಳಿಗೆ ವಶಕ್ಕೆ ಪಡೆದ ಅಬಕಾರಿ ಇಲಾಖೆ

ಅಬಕಾರಿ ಅಧಿಕಾರಿಗಳ ಖಚಿತ ಮಾಹಿತಿ ಮೇರೆಗೆ ನಗರದ ಮಾಂಗರವಾಡಿ ಗಲ್ಲಿಯ ಮನೆಯೊಂದರ ಮೇಲೆ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆ…

35 mins ago

ಮೋದಿಯನ್ನು ಮತ್ತೊಮ್ಮೆ ಪ್ರಧಾನ ಮಂತ್ರಿ ಸ್ಥಾನಕ್ಕೇರಿಸಬೇಕು: ಅರವಿಂದ ಬೆಲ್ಲದ

ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನಗೊಳಿಸಿರುವ ನರೇಂದ್ರ ಮೋದಿ ಅವರನ್ನು ಬೆಂಬಲಿಸುವ ಮುಖಾಂತರ ಮತ್ತೊಮ್ಮೆ ಪ್ರಧಾನ ಮಂತ್ರಿ ಸ್ಥಾನಕ್ಕೇರಿಸಬೇಕು ಎಂದು ವಿಧಾನಸಭೆಯ…

53 mins ago

ವಾಕಿಂಗ್ ಗೆ ಹೋದ ಪೊಲೀಸ್‌ ಕಾನಸ್ಟೇಬಲ್‌ ನಾಪತ್ತೆ

ವಾಕಿಂಗ್ ಮಾಡಲು ಹೋಗಿದ್ದ ಪೊಲೀಸ್‌ ಕಾನಸ್ಟೇಬಲ್‌ ಒಬ್ಬರು ವಾಪಾಸ್ ಮನೆಗೆ ಬಾರದೇ ಕಾಣೆಯಾಗಿರುವ ಘಟನೆ ಏಪ್ರಿಲ್ 24 ರಂದು ನಡೆದಿದ್ದು,…

1 hour ago

ಸುನೀಲ್ ಬೋಸ್ 1 ಲಕ್ಷಕ್ಕೂ ಹೆಚ್ಚು ಮತಗಳಿಂದ ಜಯಗಳಿಸಲಿದ್ದಾರೆ : ಮಾಜಿ ಶಾಸಕ ಆರ್ ನರೇಂದ್ರ

ಮೀಸಲು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸುನೀಲ್ ಬೋಸ್ ರವರು ಒಂದು ಲಕ್ಷಕ್ಕೂ ಹೆಚ್ಚು ಮತಗಳಿಂದ ಜಯಗಳಿಸಲಿದ್ದಾರೆ ಎಂದು…

1 hour ago

ಸೈಕಲ್​ ಗೆ ಪಿಕಪ್ ಡಿಕ್ಕಿ ಹೊಡೆದು 2 ಕಿಲೋ ಮೀಟರ್​ವರೆಗೆ ಎಳೆದೊಯ್ದ ಡ್ರೈವರ್

ಸೈಕಲ್​ನಲ್ಲಿ ಹೋಗುತ್ತಿದ್ದ ವ್ಯಕ್ತಿಗೆ ಪಿಕಪ್​ ವಾಹನವೊಂದು ಡಿಕ್ಕಿ ಹೊಡೆದು 2 ಕಿಲೋ ಮೀಟರ್​ವರೆಗೆ ಎಳೆದುಕೊಂಡು ಹೋಗಿರುವ ಘಟನೆ ಹರಿಯಾಣದ ಸಿರ್ಸಾದ…

2 hours ago