Categories: ಕರಾವಳಿ

ರಾಜ್ಯಕ್ಕೆ 2ನೇ ಸ್ಥಾನ ಗಳಿಸಿದ ಹೆಗ್ಗಳಿಕೆ ದ.ಕ ಜಿಲ್ಲೆಯ ಅಂಕಿತಾರದ್ದು

ಮಂಗಳೂರು: ಪದವಿ ಪೂರ್ವ ಶಿಕ್ಷಣ ಇಲಾಖೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದುಕೊಂಡಿದೆ. ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ಗೋವಿಂದದಾಸ್ ಕಾಲೇಜಿನ ವಿದ್ಯಾರ್ಥಿನಿ ಅಂಕಿತಾ.ಪಿ ಅವರು ವಿಜ್ಞಾನ ವಿಭಾಗದಲ್ಲಿ 600 ಕ್ಕೆ 595 ಅಂಕಗಳನ್ನು ಪಡೆದು, ರಾಜ್ಯಕ್ಕೆ ದ್ವಿತೀಯ ಸ್ಥಾನಿಯಾಗಿ ಹೊರಹೊಮ್ಮಿದ್ದು, ತಮ್ಮ ಹೆತ್ತವರಿಗೆ ಕೀರ್ತಿ ತಂದಿದ್ದಾರೆ.

ಸದ್ಯ ಇಂಜಿನಿಯರ್ ಆಗುವ ಗುರಿಯನ್ನು ಹೊಂದಿರುವ ಅಂಕಿತಾ ಅವರು ತಮಗೆ ಬೇಕಾದ ಎಲ್ಲಾ ತಯಾರಿಯನ್ನು ಈಗಿನಿಂದಲೇ ಮಾಡಲು ಶುರು ಹಚ್ಚಿಕೊಂಡಿದ್ದಾರೆ. ಭೌತಶಾಸ್ತ್ರ, ರಸಾಯನ ಶಾಸ್ತ್ರ, ಸಂಖ್ಯಾಶಾಸ್ತ್ರದಲ್ಲಿ ತಲಾ 100 ಅಂಕಗಳನ್ನು ಗಳಿಸಿರುವ ಅಂಕಿತಾ ಅವರು ಸಂಸ್ಕೃತದಲ್ಲಿ 99, ಗಣಿತದಲ್ಲಿ 99 ಹಾಗೂ ಇಂಗ್ಲಿಷ್ ಭಾಷೆಯಲ್ಲಿ 97 ಅಂಕಗಳನ್ನು ಗಳಿಸಿದ್ದಾರೆ.

‘ರ‍್ಯಾಂಕ್ ತೆಗೆಯಬೇಕು ಅನ್ನೋದು ಅಂಕಿತಾಳ ಕನಸಾಗಿತ್ತು. ಅದೀಗ ಈಡೇರಿದ್ದು, ನಮ್ಮ ಇಡೀ ಕುಟುಂಬಕ್ಕೆ ಆಕೆ ಖುಷಿ ತಂದಿದ್ದಾಳೆ. ಮುಂದೆ ಇಂಜಿನಿಯರಿಂಗ್ ಸೇರಿಕೊಳ್ಳುವ ಗುರಿ ಹೊಂದಿದ್ದಾಳೆ’ ಎಂದು ಅಂಕಿತಾ ತಂದೆ ಸಂತಸ ವ್ಯಕ್ತಪಡಿಸಿದ್ದಾರೆ.

Desk

Recent Posts

ಜೀನ್ಸ್ ಪ್ಯಾಂಟ್ , ಟೀ ಶರ್ಟ್‍ಗಳಲ್ಲಿ ಅಕ್ರಮ ಚಿನ್ನ ಸಾಗಾಟ: ನಾಲ್ವರು ವಶಕ್ಕೆ

ಕಸ್ಟಮ್ಸ್ ಅಧಿಕಾರಿಗಳು 1.96 ಕೋಟಿ ರೂ. ಮೌಲ್ಯದ ಚಿನ್ನವನ್ನು ವಶಕ್ಕೆ ಪಡೆದುಕೊಂಡಿರುವ ಘಟನೆ ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ…

2 mins ago

ಆರ್‌ಸಿಬಿ vs ಸಿಎಸ್ಕೆ: ಚಾಲೆಂಜ್ ಹಾಕಿ ಖಾಕಿ ಅತಿಥಿಯಾದ ಇನ್‌ಸ್ಟಾಗ್ರಾಮ್ ಇನ್‌ಫ್ಲುಯೆನ್ಸರ್

ಶನಿವಾರ ನಡೆದ ಹೈವೋಲ್ಟೇಜ್ ಆರ್‌ಸಿಬಿ ವರ್ಸಸ್ ಸಿಎಸ್‌ಕೆ ಪಂದ್ಯದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಅತಿಕ್ರಮ ಪ್ರವೇಶ ಮಾಡುವುದಾಗಿ ವಿಡಿಯೋ ಪೋಸ್ಟ್…

16 mins ago

ಶೂ ವ್ಯಾಪಾರಿ ಮನೆಯಿಂದ 40 ಕೋಟಿ ರೂ. ನಗದು ವಶಕ್ಕೆ

ತೆರಿಗೆ ವಂಚನೆ ಮತ್ತು ಅಕ್ರಮ ಆಸ್ತಿ ಹೊಂದಿದ್ದ ಆರೋಪದ ಮೇಲೆ ಐಟಿ ಅಧಿಕಾರಿಗಳು ಆಗ್ರಾದಲ್ಲಿ ಶೂ ವ್ಯಾಪಾರಿ ರಾಮನಾಥ್‌ ಡಂಗ್‌…

20 mins ago

ಐಪಿಎಲ್‌ ಬೆಟ್ಟಿಂಗ್‌: ಲಕ್ಷ ಲಕ್ಷ ಹಣ ಕಳೆದುಕೊಂಡು ನೇಣಿಗೆ ಶರಣು

ಐಪಿಎಲ್‌ ಬೆಟ್ಟಿಂಗ್‌ನಲ್ಲಿ ಲಕ್ಷ ಲಕ್ಷ ಹಣ ಕಳೆದುಕೊಂಡ ಯುವಕನೊಬ್ಬ ಲಾಡ್ಜ್‌ನಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಯಚೂರಿನ…

43 mins ago

ಗೀತಾಂಜಲಿ ಸಿಲ್ಕ್, ಶಾಂತಿಸಾಗರ್ ಹೊಟೇಲ್‌ ಸಂಸ್ಥಾಪಕ ನೀರೆ ಬೈಲೂರು ಗೋವಿಂದ ನಾಯಕ್ ನಿಧನ

ಉಡುಪಿಯ ಪ್ರತಿಷ್ಠಿತ ಜವಳಿ ಮಳಿಗೆ ‘ಗೀತಾಂಜಲಿ ಸಿಲ್ಕ್’ ಮತ್ತು ಶಾಂತಿಸಾಗರ್ ಹೊಟೇಲ್‌ನ ಸಂಸ್ಥಾಪಕರಾದ ನೀರೆ ಬೈಲೂರು ಗೋವಿಂದ ನಾಯಕ್ (89)…

55 mins ago

ಸ್ಥಳೀಯ ವಾಹನಗಳಿಗೆ ಟೋಲ್ ಕಡಿತ: ಸ್ಥಳೀಯರಿಂದ ಸಾಸ್ತಾನ ಟೋಲ್ ಗೇಟ್ ಗೆ ಮುತ್ತಿಗೆ

ಕಳೆದ ಹಲವು ದಿನಗಳಿಂದ ಸ್ಥಳೀಯ ವಾಹನಗಳಿಗೆ ಫಾಸ್ಟ್ ಟ್ಯಾಗ್ ನಲ್ಲಿ ಶುಲ್ಕ ಕಡಿತವಾಗುತ್ತಿರುವುದನ್ನು ವಿರೋಧಿಸಿ ಸ್ಥಳೀಯರು ಸಾಸ್ತಾನ ಟೋಲ್ ಗೇಟ್…

1 hour ago