ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿಗೆ ಕ್ಯೂ ಎಸ್ ಐ- ಗೇಜ್ ಶ್ರೇಯಾಂಕದ ಗೌರವ : ಕೀರ್ತಿಯ ಕಿರೀಟಕ್ಕೆ ವಜ್ರದ ಮೆರುಗು

ಮಂಗಳೂರು : ನಗರದ ಫಾದರ್ ಮುಲ್ಲರ್ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಕ್ಯೂಎಸ್ ಐ ಗೇಜ್ ತಂಡವು ಭೇಟಿ ನೀಡಿತ್ತು. ಮಹಾವಿದ್ಯಾಲಯದ ಅಭಿವೃದ್ಧಿಯನ್ನು ಕೂಲಂಕುಶವಾಗಿ ಪರಿಶೀಲಿಸಿದ ತಂಡ ಮಹಾವಿದ್ಯಾಲಯಕ್ಕೆ ವಜ್ರದ ಶ್ರೇಯಾ0ಕವನ್ನು ನೀಡಿದೆ.

ಕ್ಯೂ ಎಸ್ ಐ- ಗೇಜ್, ಇದು ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ನಿರ್ವಹಣೆಯನ್ನು ಆಧರಿಸಿ, ಶ್ರೇಯಾಂಕವನ್ನು ನೀಡುವ ಒಂದು ಸ್ವತಂತ್ರ, ವಿಶ್ವಾಸಾರ್ಹ ವ್ಯವಸ್ಥೆಯಾಗಿದೆ. ಕ್ಯೂ ಎಸ್ ಎಂಬ ಬ್ರಿಟನ್ನಿನ ಪ್ರತಿಷ್ಠಿತ ಸಂಸ್ಥೆ ಮತ್ತು ಭಾರತದ ಎರಾ ಇಂಡಿಯಾ ಎಂಬ ಸಂಸ್ಥೆಗಳ ಜಂಟಿಯಾಗಿ ನಡೆಸುವ ಕಾರ್ಯವಾಗಿದೆ. ಜಾಗತಿಕ ಪರಿಣತಿ, ಅನುಭವ ಮತ್ತು ಖ್ಯಾತಿ, ಹಾಗೂ ಭಾರತೀಯ ಶಿಕ್ಷಣ ವ್ಯವಸ್ಥೆಯ ಸಮಗ್ರ ಜ್ಞಾನ ಇವುಗಳ ಸಮ್ಮಿಲನವಾಗಿರುವ, ಎರಾ ಇಂಡಿಯಾ ಸಂಸ್ಥೆಯ ಕ್ಯೂ ಎಸ್ ಐ- ಗೇಜ್ ಶ್ರೇಯಾಂಕ ವ್ಯವಸ್ಥೆಯು ಒಂದು ಶಿಕ್ಷಣ ಸಂಸ್ಥೆಯ ಬಗ್ಗೆ ಸಮಗ್ರ ಮತ್ತು ನಿಖರ ಚಿತ್ರಣ ನೀಡಬಲ್ಲದು.

ಕ್ಯೂ ಎಸ್ ಐ- ಗೇಜ್ ಎಂಬುದು ಒಂದು ಶಿಕ್ಷಣ ಸಂಸ್ಥೆಯ ಪ್ರತಿಷ್ಠೆ ಹಾಗೂ ಉತ್ಕಷ್ಟತೆಗೆ ಅಧಿಕೃತ ಮುದ್ರೆ ಎಂದರೆ ತಪ್ಪಾಗಲಾರದು.
ಕ್ಯೂ ಎಸ್ ಐ- ಗೇಜ್ ಶ್ರೇಯಾಂಕವನ್ನು ಕಂಚು, ಬೆಳ್ಳಿ, ಚಿನ್ನ, ವಜ್ರ ಅಥವಾ ಪ್ಲಾಟಿನಂ ವರ್ಗಗಳಲ್ಲಿ ನೀಡಲಾಗುತ್ತದೆ. ಹೀಗೆ ಶ್ರೇಯಾಂಕ ನೀಡಬೇಕಾದರೆ ಶಿಕ್ಷಣ ಸಂಸ್ಥೆಯಲ್ಲಿರುವ ಸೌಲಭ್ಯಗಳು, ಆಡಳಿತ ವ್ಯವಸ್ಥೆ, ಬೋಧಕ ವರ್ಗದ ಗುಣಮಟ್ಟ,ಪರಿಣತಿ ಮತ್ತು ಅನುಭವ, ಬೋಧನೆ ಮತ್ತು ಕಲಿಯುವಿಕೆ, ವಿದ್ಯಾರ್ಥಿಗಳ ವಿವಿಧತೆ, ಸಂಶೋಧನಾ ಕಾರ್ಯ, ಸಂಸ್ಥೆಯ ಸಾಮಾಜಿಕ ಜವಾಬ್ದಾರಿ, ಉದ್ಯೋಗಾರ್ಹತೆ, ಕಲೆ ಮತ್ತು ಸಂಸ್ಕತಿ, ನಾವೀನ್ಯತೆ, ಅಂತರಾಷ್ಟಿçಯತೆ , ಸಂಪರ್ಕಶೀಲತೆ , ಶೈಕ್ಷಣಿಕ ಬೆಳವಣಿಗೆ ಈ ಹದಿಮೂರು ಅಂಶಗಳನ್ನು ವಿಶ್ಲೇಷಣೆ ಮಾಡಲಾಗುತ್ತದೆ. ವಿಶ್ಲೇಷಣೆ ಮಾಡುವಾಗ ಕೇವಲ ಶಿಕ್ಷಣ ಸಂಸ್ಥೆ ನೀಡಿದ ಮಾಹಿತಿಯಲ್ಲದೇ, ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳು, ಸಂಸ್ಥೆಯ ಬೋಧಕ ವರ್ಗದ ಅಭಿಪ್ರಾಯಗಳನ್ನು ಸಂಗ್ರಹಿಸಿ, ವಿವಿಧ ಮೂಲಗಳಿಂದ ಮಾಹಿತಿಗಳನ್ನು ಕಲೆ ಹಾಕಿ, ಖಚಿತಪಡಿಸಿಕೊಂಡೇ ಶ್ರೇಯಾಂಕವನ್ನು ನೀಡಲಾಗುತ್ತದೆ. ಅಂದರೆ, ಇದು ಎಲ್ಲ ಕೋನಗಳಿಂದ ಒಂದು ಶಿಕ್ಷಣ ಸಂಸ್ಥೆಯ ಯೋಗ್ಯತೆಯನ್ನು ಅಳತೆ ಮಾಡುವ ಮಾನದಂಡ.

ಕ್ಯೂ ಎಸ್ ಐ- ಗೇಜ್ ಶ್ರೇಯಾಂಕವು ಪೋಷಕರಿಗೆ, ಸಂಸ್ಥೆಯಲ್ಲಿ ಶಿಕ್ಷಣ ಪಡೆಯಬಯಸುವ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಸಂಸ್ಥೆಯ ಗುಣಮಟ್ಟದ ಬಗ್ಗೆ ವಿಶ್ವಾಸಾರ್ಹ ಖಾತರಿಯನ್ನು ನೀಡುತ್ತದೆ. ಅಷ್ಟೇ ಅಲ್ಲದೆ, ಸಂಸ್ಥೆಗೆ ಮುಂದೆ ಸಾಗಬೇಕಾದ ದಾರಿಯ ಬಗ್ಗೆ, ಗುಣಮಟ್ಟವನ್ನು ಹೆಚ್ಚಿಸಿಕೊಳ್ಳುವುದರ ಬಗ್ಗೆ ಮಾರ್ಗದರ್ಶನ ನೀಡುತ್ತದೆ.

ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿಗೆ ಈಗ ಇನ್ನೊಂದು ಸಂಭ್ರಮ. ಕೀರ್ತಿಯ ಕಿರೀಟಕ್ಕೆ ವಜ್ರದ ಮೆರುಗು. ಕ್ಯೂ ಎಸ್ ಐ- ಗೇಜ್ ಶ್ರೇಯಾಂಕದಲ್ಲಿ “ವಜ್ರದ ಗುರುತು” ಅಂದರೆ, ವಜ್ರ ವಿಭಾಗದಲ್ಲಿ ಗುರುತಿಸುವಿಕೆ. 1999 ರಲ್ಲಿ ಆರಂಭವಾದ ಸಂಸ್ಥೆ ಒಂದೊOದೇ ಮೆಟ್ಟಿಲು ಹತ್ತಿ ಬಂದು, ತನ್ನ ಪ್ರಯಾಣ ಮುಂದುವರಿಸಿದೆ. ಗುಣಮಟ್ಟದ ಶಿಕ್ಷಣ ಮತ್ತು ಶ್ರೇಷ್ಟತೆ ಎಂಬುದು ಆಕಸ್ಮಿಕವಲ್ಲ, ಇದು ಹಲವು ವರುಷಗಳ ತಪಸ್ಸಿನ ಫಲ. ಸಾರ್ವಜನಿಕರು, ಸರಕಾರ, ಪೋಷಕರು, ವಿದ್ಯಾರ್ಥಿಗಳು ಎಲ್ಲರಿಂದಲೂ ಗುರುತಿಸಲ್ಪಟ್ಟು ಪ್ರಶಂಸೆ ಪಡೆದಿರುವ ಸಂಸ್ಥೆಗೆ ಈಗ ಕ್ಯೂ ಎಸ್ ಐ- ಗೇಜ್ ಶ್ರೇಯಾಂಕ ಇನ್ನಷ್ಟು ಹುರುಪಿನಿಂದ ಮುಂದುವರಿಯಲು ಪ್ರೇರಣೆ ನೀಡಿದೆ. ಸಂಸ್ಥೆಯ ಆಡಳಿತಮಂಡಳಿಯ ದೂರದೃಷ್ಟಿ ಮತ್ತು ದಕ್ಷತೆ, ಹಾಗೂ ಸಿಬ್ಬಂದಿಗಳ ನಿಪುಣತೆ ಮತ್ತು ಬದ್ಧತೆಗಳಿಂದ ಇವೆಲ್ಲಾ ಸಾಧ್ಯವಾಗಿವೆ ಎಂದು ಕಾಲೇಜು ಆಡಳಿತ ಮಂಡಳಿ ತಿಳಿಸಿದೆ.

Raksha Deshpande

Recent Posts

ಅಕ್ರಮ ಕಲ್ಲು ಗಣಿಗಾರಿಕೆ ಆರೋಪ ಬಿಜೆಪಿ ಮುಖಂಡನ ಬಂಧನ : ಠಾಣೆಗೆ ಹರೀಶ್ ಪೂಂಜ ಮುತ್ತಿಗೆ

ಮೇಲಂತಬೆಟ್ಟು ಅಕ್ರಮ ಕೋರೆಗೆ ತಹಶೀಲ್ದಾರ್ ನೇತೃತ್ವದಲ್ಲಿ ದಾಳಿ ನಡೆಸಿದ್ದು, ಶಾಸಕ ಹರೀಶ್ ಪೂಂಜ ಆಪ್ತ ಬಿಜೆಪಿ ಯುವ ಮೋರ್ಚಾ ಮುಖಂಡ…

6 mins ago

ರಾತ್ರಿ 1:30 ಆದರೂ ನಿಲ್ಲದ ರೆಡ್​ ಆರ್ಮಿ ಹರ್ಷ; ವಿಡಿಯೋ ಮಾಡಿ ಶೇರ್​ ಮಾಡಿದ ಕೊಹ್ಲಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ 2024ರಲ್ಲಿ ಅದ್ಭುತವನ್ನೇ ಮಾಡಿದೆ. ಸತತ ಪಂದ್ಯಗಳಲ್ಲಿ ಸೋತು ಒಂದು ಹಂತದಲ್ಲಿ ಪಾಯಿಂಟ್ ಪಟ್ಟಿಯಲ್ಲಿ ಕೊನೆಯ…

11 mins ago

ಪ್ರಜ್ವಲ್ ರೇವಣ್ಣ ವಿರುದ್ಧ ಅರೆಸ್ಟ್ ವಾರೆಂಟ್

ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ತಲೆಮರೆಸಿಕೊಂಡಿದ್ದಾರೆ. ಅವರ ವಿರುದ್ಧ ಶನಿವಾರ ಅರೆಸ್ಟ್ ವಾರಂಟ್…

24 mins ago

ಸರಣಿ ಅಪಘಾತ: ಎರ್ಟಿಗಾ ಕಾರು ಸಂಪೂರ್ಣ ‌ನಜ್ಜುಗುಜ್ಜು

ಭೀಕರ ಸರಣಿ ಅಪಘಾತವು ಬೆಳಗಿನ ಜಾವ 4 ಗಂಟೆ ಸಮಯದಲ್ಲಿ ನರಗುಂದ ತಾಲೂಕಿನ ಭೈರನಹಟ್ಟಿ ಗ್ರಾಮದ ಬಳಿ ನಡೆದಿದೆ.

27 mins ago

ಆರ್​ಸಿಬಿ ಪ್ಲೇ ಆಫ್​ಗೆ ಎಂಟ್ರಿ : ಅದೃಷ್ಟ ತಂದ ಅಶ್ವಿನಿ ಪುನೀತ್ ರಾಜ್​ಕುಮಾರ್ ಎಂಬ ಪೋಸ್ಟ್ ವೈರಲ್‌

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸತತ ಸೋಲು ಕಂಡಾಗ ಸ್ಯಾಂಡಲ್​ವುಡ್​ ನಟ ದಿವಂಗತ ಪುನೀತ್ ರಾಜ್​ಕುಮಾರ್​ ಅವರ ಪತ್ನಿ ಅಶ್ವಿನಿಯವರನ್ನು…

57 mins ago

ಮೋದಿ ಪಾತ್ರದಲ್ಲಿ ‘ಬಾಹುಬಲಿ’ ಖ್ಯಾತಿಯ ನಟ ಸತ್ಯರಾಜ್

ಸಿನಿ, ರಾಜಕೀಯ, ಕ್ರೀಡಾ ಕ್ಷೇತ್ರದ ದಿಗ್ಗಜರ ಬದುಕಿನ ಮೇಲೆ ಸಿನಿಮಾ ಮಾಡುವುದು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ. ಆದರೆ ಇತ್ತೀಚೆಗೆ…

1 hour ago