Categories: ಕರಾವಳಿ

ಪಡುಮಾರ್ನಾಡು ಗ್ರಾ.ಪಂ. ಅಧ್ಯಕ್ಷರಾಗಿ ದಯಾನಂದ ಪೈ ಅವಿರೋಧ ಆಯ್ಕೆ

ಮೂಡುಬಿದಿರೆ: ಪಡುಮಾರ್ನಾಡು ಪಂಚಾಯತಿ ಅಧ್ಯಕ್ಷರಾಗಿ ದಯಾನಂದ ಪೈ ಅವಿರೋಧ ಆಯ್ಕೆಯಾಗಿದ್ದಾರೆ.

ಗ್ರಾಮ ಪಂಚಾಯಿತಿಯಲ್ಲಿ ಗುರುವಾರ ನಡೆದ ಚುನಾವಣೆಯಲ್ಲಿ ತಹಸೀಲ್ದಾರ್ ಸುದರ್ಶನ್ ಅವರು ಚುನಾವಣಾಧಿಕಾರಿಯಾಗಿ ಭಾಗವಹಿಸಿದರು. 14 ಸದಸ್ಯರ ಬೆಂಬಲದೊಂದಿಗೆ ದಯಾನಂದ ಪೈ ಅವರು ನಾಮಪತ್ರ ಸಲ್ಲಿಸಿದ್ದರು. ಬೇರೆ ಯಾವುದೇ ಸದಸ್ಯರು ನಾಮಪತ್ರ ಸಲ್ಲಿಸದ ಕಾರಣ, ದಯಾನಂದ ಪೈ ಅವರನ್ನು ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಸದಸ್ಯ ರಮೇಶ್ ಶೆಟ್ಟಿ ಸೂಚನೆ ನೀಡಿದರು.

ಉಪಾಧ್ಯಕ್ಷೆ ಅರುಣ ಹೆಗ್ಡೆ ಸಹಿತ 13 ಮಂದಿ ಸದಸ್ಯರು ಉಪಸ್ಥಿತರಿದ್ದು ಅಭಿನಂದಿಸಿದರು. ಪಿಡಿಒ ರವಿ ಚುನಾವಣೆ ಪ್ರಕ್ರಿಯೆಯಲ್ಲಿ ಸಹಕರಿಸಿದರು. ದಯಾನಂದ ಪೈ ಈ ಹಿಂದೆ ಮಂಡಲ ಪಂಚಾಯಿತಿ ಅಧ್ಯಕ್ಷರಾಗಿ, ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಹಾಗೂ 15 ವರ್ಷಗಳ ಕಾಲ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಉತ್ತಮ ಕಾರ್ಯವೈಖರಿಗಾಗಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ರಾಜ್ಯ ಪ್ರಶಸ್ತಿಯನ್ನೂ ಪಡೆದಿದ್ದಾರೆ.

Desk

Recent Posts

ಟಿ20 ವಿಶ್ವಕಪ್​ಗೆ ಭಯೋತ್ಪಾದಕರ ಬೆದರಿಕೆ !

ಜೂನ್ 2 ರಿಂದ 29 ರವರೆಗೆ ವೆಸ್ಟ್ ಇಂಡೀಸ್ ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್​ಗೆ ಭಯೋತ್ಪಾದಕರು…

3 mins ago

ಬೆಂಗಳೂರಿನಲ್ಲಿ ಬಿಯರ್ ಕೊರತೆ; ಆಫರ್​​ಗಳಿಗೆ ಬ್ರೇಕ್

ನೀರಿನ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಬೆಂಗಳೂರು ನಗರದಲ್ಲಿ ಶೀಘ್ರದ್ಲಲೇ ಬಿಯರ್​ ಬಿಕ್ಕಟ್ಟು ಕೂಡ ಸೃಷ್ಟಿಯಾಗಬಹುದು ಎಂದು ಮಾರುಕಟ್ಟೆ ಮೂಲಗಳು ಅಂದಾಜಿಸಿದೆ.

14 mins ago

ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ : ಇಬ್ಬರನ್ನು ಹೊಡೆದು ಕೊಂದ ಜನ

ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ  ಯತ್ನಿಸುತ್ತಿದ್ದ ಇಬ್ಬರನ್ನು ಜನರು ಹೊಡೆದು ಕೊಂದಿರುವ ಘಟನೆ ಮೇಘಾಲಯ ದ ಖಾಸಿ ಹಿಲ್ಸ್​ ಜಿಲ್ಲೆಯಲ್ಲಿ…

51 mins ago

ರೇವಣ್ಣ ವಿಡಿಯೋ: ಫೋಟೋ ಹರಿಯಬಿಡುವುದು ಶಿಕ್ಷಾರ್ಹ ಅಪರಾಧ : ಎಸ್ಐಟಿ

ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದ ವಿಡಿಯೋ ಹಂಚುವುದು ಶಿಕ್ಷಾರ್ಹ ಅಪರಾಧವಾಗಿದೆ ಎಸ್‌ಐಟಿ ಮುಖ್ಯಸ್ಥ…

1 hour ago

ಮದುವೆಯಲ್ಲಿ ಐಸ್ ಕ್ರೀಂ​ ಸೇವಿಸಿದ 80ಕ್ಕೂ ಹೆಚ್ಚು ಜನರು ಅಸ್ವಸ್ಥ

ಮದುವೆಯಲ್ಲಿ ಐಸ್ ಕ್ರೀಂ​ ಸೇವಿಸಿದ 80ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ನಡೆದಿದೆ.ಸಾತನೂರು ಸರ್ಕಲ್ ಬಳಿಯ…

2 hours ago

ಮಲೆನಾಡ ನಾಸ್ತುಷ್ ಪ್ರದೀಪ್ ಟಿ20 ವಿಶ್ವಕಪ್ ಪಂದ್ಯದಲ್ಲಿ ಅಮೇರಿಕಾದ ಆಟಗಾರ

ಅಮೆರಿಕ ರಾಷ್ಟ್ರೀಯ ತಂಡದದಲ್ಲಿ ಏಕದಿನ ಮತ್ತು ಟ್ವೆಂಟಿ-20 ಕ್ರಿಕೆಟ್ ಪಂದ್ಯಗಳಲ್ಲಿ ಆಡಿರುವ ಕರ್ನಾಟಕದ ಮೂಡಿಗೆರೆಯ ಪ್ರತಿಭೆ ನಾಸ್ತುಷ್ ಪ್ರದೀಪ್, ಇದೇ…

2 hours ago