Categories: ಕರಾವಳಿ

ನಾವೂರು ಪ್ರಾ.ಹಿ.ಶಾಲೆಯಲ್ಲಿ ಆಂಗ್ಲ ಮಾಧ್ಯಮ ಆರಂಭ

ಬೆಳ್ತಂಗಡಿ: ನಾವೂರು ದ.ಜಿ. ಪಂ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಒಂದನೇ ತರಗತಿ ಆಂಗ್ಲ ಮಾಧ್ಯಮವನ್ನು ಶಾಸಕ ಹರೀಶ್ ಪೂಂಜ ಉದ್ಘಾಟಿಸಿದರು.

ಬಳಿಕ ಮಾತನಾಡಿ, ಸರಕಾರದಿಂದ ಸಿಗುವ ಸವಲತ್ತನ್ನು ಒದಗಿಸುವಲ್ಲಿ ಶಾಸಕನಾಗಿ ಸಂಪೂರ್ಣ ಸಹಕಾರ ನೀಡುತ್ತೇನೆ. ಈ ನಿಟ್ಟಿನಲ್ಲಿ ಸರಕಾರಿ ಶಾಲೆಯನ್ನು ಖಾಸಗಿ ಶಾಲೆಗೆ ಸರಿಸಾಟಿಯಾಗಿ ಅಭಿವೃದ್ಧಿ ಪಡಿಸಬೇಕು ಎಂದರು.

ಮುಂದಿನ ದಿನಗಳಲ್ಲಿ ಶಾಲೆಯ ಕಟ್ಟಡ ರಿಪೇರಿಗೆ 3 ಲಕ್ಷ ರೂ. ಅನುದಾನದಲ್ಲಿ ಕಾಮಗಾರಿ ನಡೆಸಲು ಸೂಚಿಸಲಾಗಿದೆ. ಎಂಆರ್‍ಪಿಎಲ್ ಸಿಎಸ್‍ಆರ್ ಅನುದಾನದಲ್ಲಿ ಸುಸಜ್ಜಿತ ಶೌಚಾಲಯ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.

ಜಿ.ಪಂ. ಸದಸ್ಯೆ ಸೌಮ್ಯಲತಾ ಜಯಂತ ಗೌಡ ಮಾತನಾಡಿ, ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಹಾಗೂ ಸಂಸ್ಕಾರಯುತ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಮಕ್ಕಳು ಸವಲತ್ತನ್ನು ಸದುಪಯೋಗಿಸುವಂತೆ ಸಲಹೆ ನೀಡಿದರು.

ಮಾಜಿ ಸೈನಿಕರಾದ ವಿಠಲ್ ಕ್ರಾಸ್ತಾ ನೀಡಿದ ಪೆÇ್ರೀತ್ಸಾಹ ಧನವನ್ನು 7ನೇ ತರಗತಿಯ ಪವಿತ್ರಾ ಹಾಗೂ 5ನೇ ತರಗತಿಯ ಕೌಶಿಕ್‍ಗೆ, ಜೋಸೆಫ್ ಮೈಕಲ್ ಡಿಸೋಜ ನೀಡಿದ ಪಠ್ಯ ಪರಿಕರವನ್ನು 8ನೇ ತರಗತಿಯ ವಿಘ್ನೇಶ್‍ಗೆ ಶಾಸಕರು ಹಸ್ತಾಂತರಿಸಿದರು. ನಾವೂರು ಯುವಕ ಮಂಡಲ ವತಿಯಿಂದ ಒಂದನೇ ತರಗತಿ ಆಂಗ್ಲ ಮಾಧ್ಯಮಕ್ಕೆ ಸೇರ್ಪಡೆಗೊಂಡ 30 ಮಕ್ಕಳಿಗೆ ಪಠ್ಯ ಪುಸ್ತಕ ವಿತರಿಸಲಾಯಿತು.

ನಾವೂರು ಗ್ರಾ.ಪಂ. ಅಧ್ಯಕ್ಷೆ ಲಲಿತಾ ಅಧ್ಯಕ್ಷತೆ ವಹಿಸಿದ್ದರು.

ಕ್ಷೇತ್ರ ಶಿಕ್ಷಣಾ„ಕಾರಿ ಸತೀಶ್ ಪಿ., ಶಿಕ್ಷಣ ಸಂಯೋಜಕ ಸುಭಾಷ್ ಜಾದವ್, ಕ್ಷೇತ್ರ ಸಮನ್ವಯಾ„ಕಾರಿ ಗಣೇಶ್ ಐತಾಳ್, ತಾ.ಪಂ. ಉಪಾಧ್ಯಕ್ಷೆ ವೇದಾವತಿ, ನಾವೂರು ಗ್ರಾ.ಪಂ. ಉಪಾಧ್ಯಕ್ಷ ಗಣೇಶ್ ಗೌಡ, ಎಸ್.ಡಿ.ಎಂ.ಸಿ. ಅಧ್ಯಕ್ಷ ಸುರೇಶ್, ಸಮೂಹ ಸಂಪನ್ಮೂಲ ವ್ಯಕ್ತಿ ರಮೇಶ್ ಪೈಲಾರ್, ಸದಸ್ಯರಾದ ಹಸೈನಾರ್, ಶೋಭಾ, ಡೀಕಮ್ಮ, ಹರೀಶ್ ಸಾಲ್ಯಾನ್ ಮತ್ತಿತರರಿದ್ದರು.

ಮುಖ್ಯೋಪಾಧ್ಯಾಯ ಪುಟ್ಟಣ್ಣ ಸ್ವಾಗತಿಸಿದರು. ಪ್ರಮೀಳಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಶುಭಾ ವಂದಿಸಿದರು.

ಫೆÇೀಟೋ: ನಾವೂರು ದ.ಜಿ. ಪಂ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದನೇ ತರಗತಿ ಆಂಗ್ಲ ಮಾಧ್ಯಮ ತರಗತಿ ಕೊಠಡಿಯನ್ನು ಶಾಸಕ ಹರೀಶ್ ಪೂಂಜ ಉದ್ಘಾಟಿಸಿದರು.

ಫೆÇೀಟೋ: ನಾವೂರು ದ.ಜಿ. ಪಂ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಿಡ ನೆಡಲಾಯಿತು.

Desk

Recent Posts

ಕಾಂಗ್ರೆಸ್ ಸರ್ಕಾರದ ಒಂದು ವರ್ಷ, ಕೊಲೆಗಡುಕರಿಗೆ ಹರ್ಷ: ಲೇವಡಿ ಮಾಡಿದ ಆರ್.‌ ಅಶೋಕ್‌

ಒಂದು ವರ್ಷ ಅಧಿಕಾರ ಪೂರೈಸುವ ಹೊತ್ತಿಗೆ ನೂರೊಂದು ಸಮಸ್ಯೆಗಳನ್ನು ತಂದುಕೊಂಡಿದೆ ಎಂದು ಪ್ರತಿಪಕ್ಷ ನಾಯಕ ಆರ್.‌ ಅಶೋಕ್‌ ರಾಜ್ಯ ಸರ್ಕಾರದ…

5 mins ago

ಚಿಕ್ಕಮಗಳೂರು: ಫಲಾನುಭವಿಗಳಿಗೆ ಯಶಸ್ವಿನಿ ಕಾರ್ಡ್ ವಿತರಣೆ

ಆಕಸ್ಮಿಕವಾಗಿ ಸಂಭವಿಸುವ ಕಾಯಿಲೆಗಳಿಗೆ ಸೂಕ್ತ ಚಿಕಿತ್ಸೆ ಪಡೆದುಕೊ ಳ್ಳುವ ಸಲುವಾಗಿ ಸರ್ಕಾರ ಜಾರಿಗೊಳಿಸಿರುವ ಯಶಸ್ವಿನಿ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಳ್ಳ ಬೇಕು…

26 mins ago

ರೈತರಿಗೆ ಪರಿಹಾರ ನೀಡುವಲ್ಲಿ ತಾರತಮ್ಯ ನಿಲ್ಲಿಸಿ ಪರಿಹಾರ ನೀಡಿ: ರಮೇಶ ಹೂಗಾರ ಮನವಿ

ರಾಜ್ಯದಲ್ಲಿ ಭೀಕರ ಬರಗಾಲದಿಂದ ಕಂಗೆಟ್ಟಿರುವ ರೈತರಿಗೆ ರಾಜ್ಯ ಸರಕಾರ ಅಲ್ಪ ಮಟ್ಟಿಗೆ ಪರಿಹಾರ ನೀಡಿ ನಿಟ್ಟುಸಿರು ಬಿಡುವಂತೆ ಮಾಡಿದೆ.ಆದರೆ ಅಫಜಲಪುರ…

47 mins ago

ಅಂಜಲಿ ಕೊಲೆ ಪ್ರಕರಣ ಸಿಐಡಿಗೆ, ನೇಹಾ ಕೇಸ್​ ಸಿಬಿಐಗೆ ಕೊಡಲ್ಲ: ಗೃಹ ಸಚಿವ

ಹುಬ್ಬಳ್ಳಿಯ ನೇಹಾ ಹಿರೇಮಠ್ ಹತ್ಯೆ ಪ್ರಕರಣ ಬೆನ್ನಲ್ಲೇ ಇದೀಗ ಅಂಜಲಿ ಅಂಬಿಗೇರ ಕೊಲೆ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ. ಈ ಬಗ್ಗೆ…

54 mins ago

ಡ್ರಾಪ್​ ಕೊಡುವ ನೆಪದಲ್ಲಿ ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರಕ್ಕೆ ಯತ್ನ

ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರ ಠಾಣಾ ವ್ಯಾಪ್ತಿಯಲ್ಲಿ ಯುವಕನೋರ್ವ ಡ್ರಾಪ್​ ಕೊಡುವ ನೆಪದಲ್ಲಿ  ತಡರಾತ್ರಿ ಇಬ್ಬರು ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ…

1 hour ago

ಇಬ್ರಾಹಿಂ ರೈಸಿ ನಿಧನ: ನಾಳೆ ಭಾರತದಲ್ಲಿ ಒಂದು ದಿನದ ‘ಶೋಕಾಚರಣೆ’

ಹೆಲಿಕಾಪ್ಟರ್ ದುರಂತದಲ್ಲಿ ನಿಧನರಾದ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ನಿಧನಕ್ಕೆ ನಾಳೆ (ಮೇ 21) ಭಾರತದಲ್ಲಿ ಒಂದು ದಿನದ ರಾಜ್ಯ…

1 hour ago