ಕರಾವಳಿ

‘ನಸೀಬ್ ಏರೆಗುಂಡು ಏರೆಗಿಜ್ಜಿ’ ತುಳು ಸಿನಿಮಾ ಬಿಡುಗಡೆ

ಮಂಗಳೂರು : ಕ್ಯಾಮ್ ಫಿಟ್ ಅರ್ಪಿಸುವ ಬೆಸ್ಟನ್ ಎಂಟರ್ ಪ್ರೈಸಸ್ ಲಾಂಛನದಲ್ಲಿ ತಯಾರಾದ ಹ ಡಿ ಸಿಲ್ವ ನಿರ್ಮಿಸಿದ ಹ್ಯಾರಿ ಫೆರ್ನಾಂಡಿಸ್‌ ನಿರ್ದೇಶಿಸಿದ ನಶೀಬಾಟೊ ಬೆಳೆ ಕೊಂಕಣಿ ಚಲನಚಿತ್ರವು ಈಗ ನಸೀಬ್ ವರೆಗುಂಡು ಬರೆಗಿದ್ದ ಹೆಸರಿನಲ್ಲಿ ತುಳು ಸಿನಿಮಾ ಆಗಿ ಡಬ್ಬಿಂಗ್ ಆಗಿದೆ. ಈ ತುಳು ಸಿನಿಮಾ ಸೆಪ್ಟೆಂಬರ್ 8 ರಂದು VA ಸ್ಟೀಮ್‌ನಲ್ಲಿ ಬಿಡುಗಡೆಗೊಳ್ಳಲಿದೆ. ಕೊಂಕಣಿ ಭಾಷೆಯಲ್ಲಿ ತಯಾರಾದ ಸಿನಿಮಾವೊಂದು ತುಳು ಭಾಷೆಗೆ ಡಬ್ಬಿಂಗ್ ಮಾಡಲಾದ ಪ್ರಪ್ರಥಮ

ಸುಮಾರು 35 ವರ್ಷಗಳ ಹಿಂದೆ ಹೆನ್ರಿ ಡಿ’ ಸಿಲ್ವರವರು ರಚಿಸಿದ ‘ಕಾಜಾರಾಚೆ ಉತಾರ್’ ಎಂಬ ನಾಟಕದ ಮೂಲ ಕಥೆಯನ್ನಾಧರಿಸಿ ಮತ್ತು ಇದನ್ನು ಆಧುನಿಕತೆಗನುಗುಣವಾಗಿ ಚಲನಚಿತ್ರವಾಗಿ ತೆರೆಗೆ ಬಂದಿದೆ. ದೇವರು ಪ್ರತಿಯೊಬ್ಬನಿಗೂ ಅವನ ಬದುಕಿಗಾಗಿ ವಿವಿಧ ಕಲೆಗಳನ್ನು ನೀಡಿರುತ್ತಾನೆ, ಆದರೆ ಅದನ್ನು ಕಾರ್ಯರೂಪಕ್ಕೆ ತರುವುದು ನಮ್ಮೆಲ್ಲರ ಹೊಣೆಯಾಗಿದೆ.

ಒಂದು ಬಡ ಕುಟುಂಬದಲ್ಲಿ ಜನಿಸಿದ ಹುಡುಗ ಕಷ್ಟಪಟ್ಟು ಕಲಿತು ಉನ್ನತ ಹುದ್ದೆಯಲ್ಲಿದ್ದು ಶ್ರೀಮಂತರ ಮನೆಯ ಹುಡುಗಿಯನ್ನು ಮದುವೆಯಾಗುತ್ತಾನೋ ಅಥವಾ ತನ್ನ ತಾಯಿ ಸಾಕಿದ ಮಗಳನ್ನೇ ಮದುವೆಯಾಗುತ್ತಾನೋ ಎನ್ನುವುದು ಇದರಲ್ಲಿರುವ ಕಥೆಯಾದರೆ ಇದರ ಒಳಗಿನ ಗುಟ್ಟು ಬೇರೆಯೇ ಇರುತ್ತದೆ. ಹ್ಯಾರಿ ಫೆರ್ನಾಂಡಿಸ್‌ ನಿರ್ದೇಶಿಸಿದ ಈ ಚಲನ ಚಿತ್ರಕ್ಕೆ ಶಕ್ತಿ ನಗರದ ಕಲಾಂಗಣ, ಬಲ್ಮಠ, ಬೊಂದೇಲ್, ಉಡುಪಿ ಜಿಲ್ಲೆಯ ಬಾರ್ಕೂರ್, ಸಾಸ್ತಾನ ದಲ್ಲಿ ಚಿತ್ರೀಕರಣಗೊಂಡಿದೆ.

ಉತ್ತಮ ಹಾಸ್ಯ ಮತ್ತು ಉತ್ತಮ ಕಥಾ ಹಂದರವನ್ನು ಒಳಗೊಂಡಿರುವ ಈ ಸಿನಿಮಾದಲ್ಲಿ ಎಲ್ಲೆನ್ ಮಸ್ಕರೇನಸ್ , ಎಸ್ತೇರ್ ನೊರೊನ್ಹಾ, ರಂಜಿತ ಊವಿಸ್ ಸಾಸ್ತಾನ, ಪ್ರಿನ್ಸ್ ಜಾಕೋಬ್ ಗೋವಾ, ಸ್ಟೇನಿ ಅಲ್ದಾಂಸ್, ಸುಜಾತ ಅಂದ್ರಾದ, ಗ್ಯಾಲ್ವಿನ್ ಫೆರ್ನಾಂಡಿಸ್ ಮೊದಲಾದವರಿದ್ದಾರೆ. ಈ ಸಿನಿಮಾ ಕೊಂಕಣಿಯಲ್ಲಿ 2016 ರಲ್ಲಿ ನಶೀಬಾಚೊ ಖೆಳ್’ ಎಂಬುದಾಗಿ ಕೊಂಕಣಿಯಲ್ಲಿ ತೆರೆ ಕಂಡಿದೆ. ಸುಮಾರು 2 ಲಕ್ಷ ಕೊಂಕಣಿಗರು ಈ ಸಿನಿಮಾವನ್ನು ವೀಕ್ಷಿಸಿದ್ದಾರೆ. ಕೆನಡಾ, ಅಮೇರಿಕಾ, ಆಸ್ಟ್ರೇಲಿಯಾ, ಲಂಡನ್, ಇಸ್ರೇಲ್ ಮೊದಲಾದ ದೇಶಗಳಲ್ಲಿ ಸಿನಿಮಾ ತೆರೆ ಕಂಡಿದೆ. ಈಗ ತುಳುವಿಗೆ ಈ ಸಿನಿಮಾ ಡಬ್ ಆಗಿ ನಸೀಬ್ ಎರೆಗುಂಡು ಏರೆಗಿಜ್ಜಿ’ ಹೆಸರಿನಲ್ಲಿ ತೆರೆಕಾಣುತ್ತಿದೆ.

Sneha Gowda

Recent Posts

ಜೂ.14 ರಿಂದ ಎಸ್ಎಸ್ಎಲ್ ಸಿ ಪರೀಕ್ಷೆ-2 ಪ್ರಾರಂಭ

ಮೇ.15 ರಿಂದ ಆರಂಭವಾಗಿದ್ದ ಎಸ್​ಎಸ್​ಎಲ್​ಸಿ ವಿಶೇಷ ಪರಿಹಾರ ಬೋಧನೆ ತರಗತಿಗಳನ್ನು ಮುಂದೂಡಿ, ಮೇ 29 ರಿಂದ ಜೂ.13ರವರೆಗೆ ನಡೆಸಲು‌ ರಾಜ್ಯ…

31 mins ago

ಟ್ರ್ಯಾಕ್ಟರ್ ಗೆ ಖಾಸಗಿ ಬಸ್ ಡಿಕ್ಕಿ: ಮೂವರ ದುರ್ಮರಣ

ಹುಲಿಗೆಮ್ಮ ದೇವಿ ದರ್ಶನ ಮುಗಿಸಿ ಟ್ರ್ಯಾಕ್ಟರ್​ನಲ್ಲಿ ಮನೆಗೆ ಹೋಗುವಾಗ ​ಹಿಂದಿನಿಂದ ಬಂದ ಖಾಸಗಿ ಬಸ್ ಡಿಕ್ಕಿ ಹೊಡೆದ ಘಟನೆ ಈಗ…

49 mins ago

ಬೀದರ್: ನರೇಗಾ ಕಾಮಗಾರಿ ಪರಿಶೀಲಿಸಿದ ಉಪ ಕಾರ್ಯದರ್ಶಿ

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಬಿ.ಎಂ.ಸವಿತಾ ಅವರು ಬುಧವಾರ ತಾಲ್ಲೂಕಿನ ವಿವಿಧೆಡೆ ನಡೆಯುತ್ತಿರುವ ಮಹಾತ್ಮ ಗಾಂಧಿ ಉದ್ಯೋಗ ಖಾತರಿ (ನರೇಗಾ)…

1 hour ago

ಮನಿ ಲಾಂಡರಿಂಗ್ ಪ್ರಕರಣ: ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಆಲಂಗೀರ್ ಆಲಂ

ಮನಿ ಲಾಂಡರಿಂಗ್ ಕೇಸಿನಲ್ಲಿ ಬಂಧನಕ್ಕೊಳಗಾಗಿರುವ ಜಾರ್ಖಂಡ್​ನ ಕಾಂಗ್ರೆಸ್ ನಾಯಕ ಮತ್ತು ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವ ಆಲಂಗೀರ್ ಆಲಂ ಇಂದು ತಮ್ಮ…

1 hour ago

ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸಕಾಲಕ್ಕೆ ಸಿಗದ ಔಷಧ: ಸಾರ್ವಜನಿಕರ ಆಕ್ರೋಶ

ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಬಡಜನರಿಗೆ ಸಕಾಲಕ್ಕೆ ಸಿಗಬೇಕಾದ ಸೇವೆಯು ಮರೀಚಿಕೆಯಾಗಿ ಹೋಗಿದೆ. ಚಿಕಿತ್ಸೆಗೆ ಆಸ್ಪತ್ರೆಗೆ ಬಂದ ರೋಗಿಗಳು ವೈದ್ಯರಿಗಾಗಿ…

2 hours ago

ಪದವೀಧರರ ಸಮಸ್ಯೆಗೆ ಸ್ಪಂದಿಸಿದ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿ: ಡಾ. ಶಿಂಧೆ

ಪದವೀಧರರ ಸಮಸ್ಯೆಗೆ ಸ್ಪಂದಿಸುವ ಹಾಗೂ ಸದಾ ಸಂಪರ್ಕಕ್ಕೆ ಸಿಗುವಂಥ ಸೂಕ್ತ ಮತ್ತು ಸಮರ್ಥ ಕಾಂಗ್ರೆಸ್ ಅಭ್ಯರ್ಥಿಯಾದ ಡಾ. ಚಂದ್ರಶೇಖರ್ ಪಾಟೀಲ್…

2 hours ago