News Karnataka Kannada
Wednesday, April 17 2024
Cricket
ಕರಾವಳಿ

ಸರ್ಕಾರಿ ಆಸ್ಪತ್ರೆ ಡಯಾಲಿಸಿಸ್ ಕೇಂದ್ರದ ಗುತ್ತಿಗೆ ಪ.ಬಂಗಾಳದವರಿಗೆ ನೀಡಿರುವುದು ಯಾಕೆ?

Photo Credit :

ಸರ್ಕಾರಿ ಆಸ್ಪತ್ರೆ ಡಯಾಲಿಸಿಸ್ ಕೇಂದ್ರದ ಗುತ್ತಿಗೆ ಪ.ಬಂಗಾಳದವರಿಗೆ ನೀಡಿರುವುದು ಯಾಕೆ?

ಬೆಳ್ತಂಗಡಿ: ಸಿದ್ದರಾಮಯ್ಯ ಸರಕಾರದಲ್ಲಿ ರಾಜ್ಯಕ್ಕೆ ಯಾವುದೇ ಸಂಬಂಧ ಇಲ್ಲದ ಪಶ್ವಿಮ ಬಂಗಾಲ ಸಂಸ್ಥೆಗೆ ಡಯಾಲಿಸಿಸ್ ಕೇಂದ್ರದ ಗುತ್ತಿಗೆ ನೀಡಿರುವುದು ಯಾರು ಎಂದು ಮಾಜಿ ಶಾಸಕ ವಸಂತ ಬಂಗೇರಾ ತಿಳಿಸಬೇಕು ಎಂದು ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಪ್ರಶ್ನಿಸಿದೆ.

ಪ.ಬಂಗಾಳ ರಾಜ್ಯದ ಸಂಸ್ಥೆಗೆ ಗುತ್ತಿಗೆ ನೀಡಿರುವುದರ ಹಿಂದೆ ಭ್ರಷ್ಟಾಚಾರ ಇದೆಯೋ ಎಂದು ಬಂಗೇರ ತಿಳಿಸಬೇಕು, ಕೇವಲ ಹಣ ದಂಧೆಗೆ ಮಾತ್ರ ಈ ಡಯಾಲಿಸಿಸ್ ನಡೆಯುತ್ತಾ ಇತ್ತು. ಬೆಳ್ತಂಗಡಿ ಕ್ಷೇತ್ರದ ಶಾಸಕರಾಗಿ ಹರೀಶ್ ಪೂಂಜ ಆಯ್ಕೆಯಾದ ನಂತರ ಆರೋಗ್ಯ ರಕ್ಷಾ ಸಮಿತಿ ರಚನೆಯಾಗಿ ಡಯಾಲಿಸಿಸ್ ಕೇಂದ್ರವನ್ನು ಸುವ್ಯವಸ್ಥೆಗೆ ತರುವಂತಹ ಪ್ರಾಮಾಣಿಕ ಪ್ರಯತ್ನ ವನ್ನು ಮಾಡಲಾಯಿತು ಎಂದು ಸಮಿತಿ ಹೇಳಿದೆ.

ಮೊದಲು ಎರಡು ಯಂತ್ರ ಮಾತ್ರ ಇತ್ತು. 8 ಮಂದಿ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ 2 ವರ್ಷದಿಂದ 6 ಹೊಸ ಡಯಾಲಿಸಿಸ್ ಯಂತ್ರ ಆಗಿದೆ. ಈಗ 61 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಹಿಂದೆ ಆಸ್ಪತ್ರೆಯ ಕೆಳ ಅಂತಸ್ತಿನಲ್ಲಿ ಇದ್ದ ಡಯಾಲಿಸಿಸ್‍ನ್ನು ಮೇಲಿನ ಕೊಠಡಿಗೆ ವರ್ಗಾಯಿಸಿ ರೋಗಿಗಳಿಗೆ ಅನುಕೂಲ ಮಾಡಿಸಿ ಕೊಟ್ಟಿದ್ದೇವೆ ಎಂದು ತಿಳಿಸಿದ್ದಾರೆ.

ಈ ಮೊದಲು ಏಜೆನ್ಸಿಯವರು ಕಂಪೆನಿಯವರ ಮೂಲಕ ಡಯಾಲಿಸಿಸ್ ಯಂತ್ರವನ್ನು ಸರ್ವೀಸ್ ಮಾಡುತ್ತಾ ಇರಲಿಲ್ಲ. 2 ವರ್ಷ ಅವಧಿಗೆ ಸಮಿತಿಯವರು ಸಂಗ್ರಹ ಮಾಡಿ ಹಣ ಒಟ್ಟು ಮಾಡಿ ಡಯಾಲಿಸಿಸ್ ಯಂತ್ರವನ್ನು ಸರ್ವಿಸ್ ಮಾಡುತ್ತಿದ್ದೇವೆ. ಇಷ್ಟರವರೆಗೆ ಯಾವುದೇ ರೋಗಿಗೆ ಸಮಸ್ಯೆಯಾಗಿಲ್ಲ. ಆದ್ದರಿಂದ ಸರ್ವಿಸ್ ಮಾಡದ ಏಜನ್ಸಿಯನ್ನು ಬದಲಾವಣೆ ಮಾಡುವಂತೆ ಡಿ.ಸಿ, ಡಿ.ಹೆಚ್.ಒ ಗೆ ಸಂಬಂಧಪಟ್ಟ ಅಧಿಕಾರಿಗೆ ಮಾಹಿತಿ ನೀಡಿದ್ದೇವೆ ಎಂದು ಹೇಳಿದ್ದಾರೆ.

ಪ್ರಾಮಾಣಿಕ ಮಹಿಳಾ ಸಿಬ್ಬಂದಿಯನ್ನು ಸಾರ್ವಜನಿಕವಾಗಿ ಅವಮಾನ ಮಾಡುವುದು ಮಾಜಿ ಶಾಸಕರಿಗೆ ಶೋಭೆ ತರುವುದಿಲ್ಲ. ಇದು ಖಂಡನೀಯ ಎಂದು ಆರೋಗ್ಯ ರಕ್ಷಾ ಸಮಿತಿ ಸದಸ್ಯರು ತಿಳಿಸಿದ್ದಾರೆ.

ಕೋವಿಡ್ ಸಂದರ್ಭದಲ್ಲಿ ತಮ್ಮ ಜೀವನದ ಹಂಗೂ ತೊರೆದು ಡಯಾಲಿಸಿಸ್ ಸಿಬ್ಬಂದಿ ನಡೆಸಿದ ಕೆಲಸ ಅತ್ಯಂತ ಶ್ಲಾಘನೀಯ. ಏಜೆನ್ಸಿಯವರು ಯಾವ ವ್ಯವಸ್ಥೆ ಮಾಡದಿರುವಾಗ ಆರೋಗ್ಯ ರಕ್ಷಾ ಸಮಿತಿಯ ಅಧ್ಯಕ್ಷರೂ ಹಾಗೂ ಶಾಸಕರಾದ ಹರೀಶ್ ಪೂಂಜ ತನ್ನ ಸ್ವಂತ ಕೈಯಿಂದ ಹಣ ಹಾಕಿ ಕಿಟ್, ಸ್ಯಾನಿಟೈಸರ್ ಎಲ್ಲವನ್ನು ಕೊಟ್ಟಿದ್ದಾರೆ. ಆರೋಗ್ಯ ಸಮಿತಿಯಿಂದ ದೇಣಿಗೆ ಸಂಗ್ರಹಿಸಿ ಪ್ರತಿ ತಿಂಗಳು ಕೋವಿಡ್ ಸಮಯದಲ್ಲೂ ಡಯಾಲೀಸಿಸ್‍ಗೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡಿದ್ದೇವೆ ಎಂದು ಸದಸ್ಯರಾದ ಜಯಶ್ರೀ ಅಪ್ರಮೇಯ, ಯಶವಂತ ಬೆಳಾಲ್, ರಾಜೇಶ್ ಶೆಟ್ಟಿ ಲಾಯಿಲ , ತುಕರಾಮ ಬೆಳ್ತಂಗಡಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು