News Karnataka Kannada
Thursday, April 18 2024
Cricket
ಕರಾವಳಿ

ಸರ್ಕಾರದಲ್ಲಿ ವ್ಯತ್ಯಾಸಗಳಾದಾಗ ಟೀಕೆಯ ಬದಲು ಸಲಹೆ ನೀಡಿ: ನಳೀನ್ ಕುಮಾರ್ ಕಟೀಲ್

Photo Credit :

ಸರ್ಕಾರದಲ್ಲಿ ವ್ಯತ್ಯಾಸಗಳಾದಾಗ ಟೀಕೆಯ ಬದಲು ಸಲಹೆ ನೀಡಿ: ನಳೀನ್ ಕುಮಾರ್ ಕಟೀಲ್

ಮಂಗಳೂರು : ಇದು ರಾಜಕೀಯ ಮಾಡುವ ಕಾಲವಲ್ಲ, ಒಟ್ಟಾಗಿ ಕೆಲಸ ಮಾಡುವ ಸಮಯ. ಇವತ್ತು ಟೀಕೆ ಮಾಡುವವರು ಮೊದಲು ಯೋಚನೆ ಮಾಡಬೇಕು. ದೇಶದಲ್ಲಿ ಕೋವಿಡ್ ಲಸಿಕೆ ಕೊಡಲು ಎರಡು ಘಟಕಗಳು ಕೆಲಸ ಮಾಡುತ್ತಿವೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.

 

ಮಂಗಳೂರಿನಲ್ಲಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಕಟೀಲ್, ಈಗಾಗಲೇ ಹತ್ತೊಂಬತ್ತು ಕೋಟಿ ಲಸಿಕೆ ಕೊಡುವ ಕೆಲಸ ಆಗಿದೆ. ಆದರೆ ಆರಂಭದಲ್ಲಿ ಬಹಳಷ್ಟು ಜನರು ಇದು ಬಿಜೆಪಿಯ ಲಸಿಕೆ ಎಂದು ಟೀಕೆ ಮಾಡಿದವರೇ ಈಗ ಲಸಿಕೆ ಸಿಗುತ್ತಿಲ್ಲ ಎಂದು ಕಣ್ಣೀರು ಹಾಕ್ತಿದಾರೆ ಎಂದು ಹೇಳಿದ್ದಾರೆ.

 

ಜನರ ದಾರಿ ತಪ್ಪಿಸುವ ಕೆಲಸ ಮಾಡಿ ಜನರ ಪ್ರಾಣದ ಜೊತೆ ಚೆಲ್ಲಾಟವಾಡಿದರು. ಕೋವಿಡ್ ಲಸಿಕೆ ಬಗ್ಗೆ ಅನುಮಾನ ಪಡುವ ಕೆಲಸ ಮಾಡಿ ಜನರ ದಾರಿ ತಪ್ಪಿಸಿದರು. ಅಂದು ನಂಬಿಕೆ ಇರಲಿಲ್ಲ, ಆದರೆ ಇಂದು ಲಸಿಕೆ ಇಲ್ಲ ಅಂತಿದ್ದಾರೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ಪಕ್ಷವನ್ನು ದೂರಿದ್ದಾರೆ.

 

ಇನ್ನು, ಜನರ ದಾರಿ ತಪ್ಪಿಸಿದ ಕಾರಣಕ್ಕೆ ಜನರು ಲಸಿಕೆ ತೆಗೆದುಕೊಂಡಿಲ್ಲ. ರಾತ್ರಿ ಹಗಲು ಎಷ್ಟೋ ಜನರು ಕೆಲಸ ಮಾಡುತ್ತಿದ್ದಾರೆ. ಆದರೂ ಸರ್ಕಾರ ಮಾಡುವ ಕೆಲಸಗಳನ್ನು ವಿರೋಧ ಪಕ್ಷಗಳು ದಾರಿ ತಪ್ಪಿಸುತ್ತಿವೆ. ರಾಜಕಾರಣ ಮಾಡುವ ಬದಲು ಜನರಿಗೆ ಆತ್ಮವಿಶ್ವಾಸ ತುಂಬಿ. ರಾಜಕಾರಣ ಬಿಟ್ಟು ಕರ್ತವ್ಯ ಮಾಡುವ ಕಾಲಘಟ್ಟ ಮತ್ತು ಅನಿವಾರ್ಯತೆಯಲ್ಲಿ ನಾವಿದ್ದೇವೆ. ಸರ್ಕಾರದಲ್ಲಿ ವ್ಯತ್ಯಾಸಗಳಾದಾಗ ಟೀಕೆಯ ಬದಲು ಸಲಹೆ ನೀಡಿ ಎಂದು ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು