News Karnataka Kannada
Thursday, April 25 2024
Cricket
ಕರಾವಳಿ

ಸರಳವಾಗಿ ಗಣೇಶೋತ್ಸವ, ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಹರೀಶ್ ಪೂಂಜ ಸಲಹೆ

Photo Credit :

 ಸರಳವಾಗಿ ಗಣೇಶೋತ್ಸವ, ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಹರೀಶ್ ಪೂಂಜ ಸಲಹೆ

ಬೆಳ್ತಂಗಡಿ: ತಾಲೂಕಿನಲ್ಲಿ ಒಟ್ಟು ವ್ಯವಸ್ಥೆಗೆ ಅನುಗುಣವಾಗಿ ಕೊರೊನಾ ಮುಕ್ತ ತಾಲೂಕು ರಚನೆಯ ದೃಷ್ಟಿಯಿಂದ ಈ ಬಾರಿ ಗಣೇಶೋತ್ಸವ ಮತ್ತು ಶ್ರೀಕೃಷ್ಣ ಜನ್ಮಾಷ್ಟಮಿ ಸರಳ ರೀತಿಯಲ್ಲಿ ಆಚರಿಸುವಂತೆ ಶಾಸಕ ಹರೀಶ್ ಪೂಂಜ ಕರೆ ನೀಡಿದರು.

ತಾಲೂಕಿನ ಎಲ್ಲಾ ಗ್ರಾ.ಪಂ. ಮಟ್ಟದ ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ಗಣೇಶೋತ್ಸವ ಸಮಿತಿಯ ಅಧ್ಯಕ್ಷರು ಗ್ರಾ.ಪಂ. ಪಿಡಿಒಗಳ ಸಮ್ಮುಖದಲ್ಲಿ ಬುಧವಾರ ಬೆಳ್ತಂಡಿ ಶ್ರೀ ಮಂಜುನಾಥ ಕಲಾ‘ವನದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಧಾರ್ಮಿಕ ಆಚರಣೆಗಳು ಸಮಾಜದ ಒಗ್ಗಟ್ಟಿಗೆ ಪೂರಕವಾಗಿರುವಂತಹದು. ಆದರೆ ಪ್ರಸಕ್ತ ಕೋವಿಡ್ ಆತಂಕದಿಂದ ಉತ್ಸವಗಳು ಸಮಾಜಕ್ಕೆ ಬಾಧೆ ಆಗಬಾರದು. ಚೌಕಟ್ಟಿನೊಳಗೆ ಸಮಿತಿ ಪದಾಧಿಕಾರಿಗಳು ಆಚರಣೆಯನ್ನು ಸೀಮಿತಗೊಳಿಸುವ ಅಗತ್ಯವಿದೆ. ಇದಕ್ಕೆ ಸಮಿತಿ ಅದ್ಯಕ್ಷರು ಚಿಂತಿಸಿ ತಾಲೂಕಿನಲ್ಲಿ ಏಕರೂಪದ ಆಚರಣೆ ನಡೆಸುವಂತಾಗಬೇಕು ಎಂದು ಸಲಹೆ ನೀಡಿದರು.

ಗಣಹೋಮದೊಂದಿಗೆ ಗಣಪನ ಆರಾಧನೆ

ಈ ವೇಳೆ ತಾಲೂಕಿನ ಸಮಿತಿಯ ವತಿಯಿಂದ ಹಲವು ಸಲಹೆಗಳನ್ನು ಪಡೆದ ಬಳಿಕ ಗಣೇಶೋತ್ಸವದ ಸಂದರ್ಭದಲ್ಲಿ ಗಣಹೋಮ ನಡೆಸಿ ದೇವರ ಆರಾಧನೆಯಲ್ಲಿ ತೊಡಗೋಣ ಎಂದು ನಿರ್ಣಯಿಸಲಾಯಿತು.

ಈಗಾಗಲೆ ವಿಗ್ರಹಗಳ ಪ್ರತಿಷ್ಠಾಪನೆಗೆ ಮೂರ್ತಿ ರಚಿಸಲು ಆರಂಭಿಸಿದಲ್ಲಿ ಗ್ರಾಮಗಳ ಸಮಿತಿ ಸದಸ್ಯರು ಮತ್ತೊಮ್ಮೆ ಸೇರಿ ಒಂದೇ ದಿನದಲ್ಲಿ ಅಥವಾ ಮಧ್ಯಾಹ್ನದೊಳಗೆ ಗಣೇಶೋತ್ಸವ ಆಚರಿಸುವ ಕುರಿತಾಗಿ ತೀರ್ಮಾನಿಸುವಂತೆ ಶಾಸಕರು ಸಲಹೆ ನೀಡಿದರು.

ಭಜನೆ, ದೇವಸ್ಥಾನದಲ್ಲಿ ಪೂಜೆ

ಶ್ರೀಕೃಷ್ಣ ಜನ್ಮಾಷ್ಟಮಿಗೆ ಪ್ರತಿ ವರ್ಷ ಕ್ರೀಡಾಕೂಟಗಳನ್ನು ಆಯೋಜಿಸುವುದು ಸಾಮಾನ್ಯ, ಆದರೆ ಈ ವರ್ಷ ಸ್ಥಳೀಯ ದೇವಸ್ಥಾನಗಳಿಗೆ ತೆರಳಿ ಪೂಜೆ, ಅಥವಾ ಭಜನಾ ಮಂದಿರಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಸಮಿತಿ ಪದಾಧಿಕಾರಿಗಳ ನಿಯಮಿತಿಯೊಳಗೆ ‘ಜನಾ ಕಾರ್ಯಕ್ರಮ ನಡೆಸುವಂತೆ ಸ‘ಯಲ್ಲಿ ತೀರ್ಮಾನ ಕೈಗೊಳ್ಳಲಾಯೊತು. ಇದೇ ರೀತಿ ವರಲಕ್ಷ್ಮೀವ್ರತಾಚರಣೆ ಮನೆಯಲ್ಲೇ ಆಯೋಜಿಸುವಂತೆ ಶಾಸಕರು ವಿನಂತಿಸಿದರು.

ಸಭೆಯಲ್ಲಿ ಸಲಹೆ

ತಾಲೂಕಿನಲ್ಲಿ 24 ವರ್ಷದಿಂದ ಗಣೇಶೋತ್ಸವ ಆಚರಿಸುತ್ತಾ ಬರುತ್ತಿರುವ ಬಂದಾರು ಗ್ರಾಮದ ಮೈರೋಳ್ತಡ್ಕ ಶಿವ ಗೆಳೆಯರ ಬಳಗದಿಂದ ಗಣಹೋಮ ಮಾಡುವ ಸಂಕಲ್ಪ ಇದೆ ಎಂದರು.

ಬೆಳ್ತಂಗಡಿ ನಗರದಲ್ಲಿ ಒಂದು ದಿನದ ಗಣೇಶೋತ್ಸವ ನಡೆಸುವ ಕುರಿತು, ಉಜಿರೆ ನೇಕಾರ ಪೇಟೆಯಲ್ಲಿ ಮನೆಯಲ್ಲೇ ಕುಟುಂಬ ಮಂದಿ ಆಚರಿಸುವುದಾಗಿ ಅಭಿಪ್ರಾಯ ತಿಳಿಸಿದರು.

ಉಳಿದಂತೆ ಮರೋಡಿಯಲ್ಲಿ ಸಮಿತಿ ಸದಸ್ಯರಷ್ಟೆ ಪಾಲ್ಗೊಂಡು ಸರಕಾರದ ನಿಯಮದಂತೆ ಆಚರಿಸುವುದಾಗಿ ತಿಳಿಸಿದರು.

ಧರ್ಮಸ್ಥಳದ ಸಿದ್ಧಿವಿನಾಯಕ ಸಮಿತಿ ಅಧ್ಯಕ್ಷ ಶಶಿಧರ್ ಮಾತನಾಡಿ, ವಿಜೃಂಭಣೆ ಆಚರಣೆಗೆ ಕಡಿವಾಣ ಹಾಕಿ ದೇವರ ಆಚರಣೆಯಲ್ಲಿ ಲೋಪವೆಸಗದೆ ಪದಾಧಿಕಾರಿಗಳು ಸೇರಿ ಆಚರಿಸುವಂತೆ ಸಲಹೆ ನೀಡಿದರು.

ಶಿಶಿಲ, ಗುರಿಪಳ್ಳ, ಮದ್ದಡ್ಕ, ಹತ್ಯಡ್ಕ, ವಿವೇಕಾನಂದ ನಗರ ಸೇರಿದಂತೆ ಹಲವು ಸಮಿತಿಗಳ ಅಧ್ಯಕ್ಷರು ಗಣಹೋಮ ನಡೆಸಿ ಸರಳ ರೀತಿಯಲ್ಲಿ ಆಚರಿಸುವುದಾಗಿ ಸಭೆಗೆ ತಿಳಿಸಿದರು.

ಜಿ.ಪಂ. ಸದಸ್ಯರಾದ ಕೆ.ಕೊರಗಪ್ಪ ನಾಯ್ಕ್, ಸೌಮ್ಯಲತಾ, ತಾ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಶಶಿಧರ್ ಎಂ. ಕಲ್ಮಂಜ, ತಾ.ಪಂ. ಉಪಾಧ್ಯಕ್ಷೆ ವೇದಾವತಿ, ತಾ.ಪಂ. ಇ.ಒ. ಕೆ.ಇ.ಜಯರಾಮ್ ಉಪಸ್ಥಿತರಿದ್ದರು.

ಪ.ಪಂ. ಮುಖ್ಯಾಧಿಕಾರಿ ಸುಧಾಕರ್ ಎಂ.ಎಚ್. ವಂದಿಸಿದರು. ತಾಲೂಕು ಸಂಯೋಜಕ ಜಯಾನಂದ್ ಲಾಯಿಲ ಕಾರ್ಯಕ್ರಮ ನಿರೂಪಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು