News Karnataka Kannada
Sunday, April 21 2024
Cricket
ಕರಾವಳಿ

ಸಮಾಜಕ್ಕಾಗಿ ದುಡಿದರೆ ಪಕ್ಷ ಬಲಗೊಳ್ಳುವುದು: ಪ್ರತಾಪ್ ಸಿಂಹ ನಾಯಕ್

Photo Credit :

ಸಮಾಜಕ್ಕಾಗಿ ದುಡಿದರೆ ಪಕ್ಷ ಬಲಗೊಳ್ಳುವುದು: ಪ್ರತಾಪ್ ಸಿಂಹ ನಾಯಕ್

ಬೆಳ್ತಂಗಡಿ: ವಿಚಾರಧಾರೆ, ತತ್ವ – ಸಿದ್ಧಾಂತವನ್ನು ನಿಷ್ಠೆ, ಶ್ರದ್ಧೆಯಿಂದ ಪಾಲಿಸಿದರೆ ಅವಕಾಶ ತಾನಾಗಿಯೇ ಹುಡುಕಿಕೊಂಡು ಬರುತ್ತದೆ. ಕೆಲಸ ಮಾಡಿದ ಕಾರ್ಯಕರ್ತರನ್ನು ಬಿಜೆಪಿ ಯಾವಾಗಲೂ ಗುರುತಿಸುತ್ತದೆ ಎಂಬುದಕ್ಕೆ ನನಗೆ ಸಿಕ್ಕಿರುವ ವಿಧಾನ ಪರಿಷತ್ ಸದಸ್ಯ ಸ್ಥಾನವೇ ಉತ್ತಮ ಉದಾಹರಣೆ ಎಂದು ಪ್ರತಾಪ್‍ಸಿಂಹ ನಾಯಕ್ ಹೇಳಿದ್ದಾರೆ.

ಅರಸಿನಮಕ್ಕಿಯ ಬೂಡುಮುಗೇರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ಹತ್ಯಡ್ಕ ಗ್ರಾಮದ ಬಿಜೆಪಿಯ ಕಾರ್ಯಕರ್ತರು ಹಮ್ಮಿಕೊಂಡ ಸನ್ಮಾನ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

ಕಾರ್ಯಕರ್ತರು ಸ್ವಂತಕ್ಕಿಂತ ಹೆಚ್ಚು ಸಮಾಜಕ್ಕಾಗಿ ದುಡಿದರೆ ಪಕ್ಷ ಬಲಗೊಳ್ಳುತ್ತದೆ, ಕಾರ್ಯಕರ್ತರು ವೈಚಾರಿಕವಾಗಿ ಗಟ್ಟಿಯಾಗುತ್ತಾರೆ. ಜನಸಂಘದ ಕಾಲದಲ್ಲಿ ‘ನಿಮ್ಮ ಪಕ್ಷ ಅಧಿಕಾರಕ್ಕೆ ಬರುವುದೆಲ್ಲ ಕನಸಿನ ಮಾತು’ ಎಂದು ಅನೇಕರು ಗೇಲಿ ಮಾಡುತ್ತಿದ್ದರು. ಆದರೆ ಇಂದು ದೇಶದಲ್ಲಿ ರಾಮಮಂದಿರ ನಿರ್ಮಾಣ, ಕಾಶ್ಮೀರದಲ್ಲಿ 370ನೇ ವಿಧಿ ರದ್ದತಿ, ಹತ್ತಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಗಮನಿಸಿದಾಗ ನಾವು ಬಿಜೆಪಿಯ ಕಾರ್ಯಕರ್ತರು ಪಟ್ಟ ಶ್ರಮ ವ್ಯರ್ಥವಾಗಿಲ್ಲ ಎಂಬುದು ಜಗಜ್ಜಾಹೀರಾಗುತ್ತಿದೆ. ವ್ಯಕ್ತಿಗಳು ಶಾಶ್ವತವಲ್ಲ. ಪಕ್ಷ ಬಲಿಷ್ಠಗೊಳ್ಳಲು ಹಿರಿಯ ಮತ್ತು ಕಿರಿಯ ಕಾರ್ಯಕರ್ತರು ಜೊತೆಯಾಗಿ ಸಾಗಬೇಕು. ವ್ಯಕ್ತಿ ನಿಷ್ಠೆಗಿಂತ ಪಕ್ಷ ನಿಷ್ಠೆ ಕಾರ್ಯಕರ್ತರಲ್ಲಿ ಸದಾ ಇರಬೇಕು. ಮುಂದಿನ ಪೀಳಿಗೆಯ ಕಾರ್ಯಕರ್ತರನ್ನು ಬೆಳೆಸುವುದೇ ನಿಜವಾದ ನಾಯಕತ್ವ ಎಂದು ಪ್ರತಾಪ್‍ಸಿಂಹ ನಾಯಕ್ ಹೇಳಿದರು.

ರಂಗನಾಥ ಮರಾಠೆ, ನಾರಾಯಣ ಅಭ್ಯಂಕರ್ ಮೊದಲಾದವರು ಅನಿಸಿಕೆ ಹಂಚಿಕೊಂಡರು. ಮುಖ್ಯ ಅತಿಥಿಗಳಾಗಿ ಧರ್ಮಸ್ಥಳ ಜಿ.ಪಂ. ಕ್ಷೇತ್ರದ ಸದಸ್ಯರಾದ ಕೊರಗಪ್ಪ ನಾಯ್ಕ್, ಹಿರಿಯ ಕಾರ್ಯಕರ್ತರಾದ ಸೋಮಯ್ಯ ಆಚಾರ್ಯ, ಹತ್ಯಡ್ಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ರಾಜು ಕೆ. ಸಾಲಿಯಾನ್, ತಾ.ಪಂ. ಮಾಜಿ ಸದಸ್ಯೆ ಮಂಜುಳಾ ಆರ್. ಕಾರಂತ್, ಬಿಜೆಪಿ ತಾಲೂಕು ಕೋಶಾಧಿಕಾರಿ ರತ್ನವರ್ಮ ಜೈನ್, ಬಿಜೆಪಿ ಧರ್ಮಸ್ಥಳ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಯೋಗೀಶ್ ಆಲಂಬಿಲ ಉಪಸ್ಥಿತರಿದ್ದರು. ಹತ್ಯಡ್ಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಘವೇಂದ್ರ ನಾಯಕ್ ಅಧ್ಯಕ್ಷತೆ ವಹಿಸಿದ್ದರು.

ವಿಶ್ವ ಹಿಂದು ಪರಿಷತ್ ಹತ್ಯಡ್ಕ ಗ್ರಾಮ ಸಮಿತಿ ಅಧ್ಯಕ್ಷ, ಉದ್ಯಮಿ ಸುಧೀರ್ ಕುಮಾರ್ ಎಂ.ಎಸ್. ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಕೇಶವ ರಾವ್ ನೆಕ್ಕಿಲು ವಂದಿಸಿದರು. ವೃಷಾಂಕ್ ಖಾಡಿಲ್ಕರ್ ಕಾರ್ಯಕ್ರಮ ನಿರೂಪಿಸಿದರು. ಹತ್ಯಡ್ಕ ಗ್ರಾಮದ ಶಕ್ತಿಕೇಂದ್ರ ಪ್ರಮುಖ್ ಗಣೇಶ್ ಹೊಸ್ತೋಟ, ಬೂತ್ ಸಮಿತಿಯ ಮುಖಂಡರಾದ ಜಯಪ್ರಸಾದ್ ಶೆಟ್ಟಿಗಾರ್, ಶ್ರೀಕಾಂತ್ ಕಾಂತ್ರೇಲು, ಪ್ರೇಮಚಂದ್ರ ರಾಣೆಯಾರ್, ಲಕ್ಷ್ಮಣ ಗೌಡ, ನವೀನ್ ರೈ ಗೋಳಿತ್ತಡಿ ಮೊದಲಾದವರು ಸಹಕರಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು