News Karnataka Kannada
Friday, April 19 2024
Cricket
ಕರಾವಳಿ

ವಿಟ್ಲದಲ್ಲಿ ಭಾರೀ ಮಳೆಗೆ ಗುಡ್ಡ ಕುಸಿತ: ಮನೆ ನೆಲಸಮ, 6 ಮಂದಿಗೆ ಗಾಯ

Photo Credit :

ವಿಟ್ಲದಲ್ಲಿ ಭಾರೀ ಮಳೆಗೆ ಗುಡ್ಡ ಕುಸಿತ: ಮನೆ ನೆಲಸಮ, 6 ಮಂದಿಗೆ ಗಾಯ

ವಿಟ್ಲ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಮಳೆಯಾಗುತ್ತಿದ್ದು, ಅದರಲ್ಲೂ ಕಳೆದ 48 ಗಂಟೆಗಳಿಂದ ನಿರಂತರ ಮಳೆಯಾಗುತ್ತಿರುವ ಕಾರಣದಿಂದ ಸಣ್ಣ ಪುಟ್ಟ ವಿಪತ್ತುಗಳು ಉಂಟಾಗುತ್ತಿವೆ. ವಿಟ್ಲದ ಮಂಗಳಪದವ್-ಕೊಡಪದವ್ ಮಾರ್ಗ ಮಧ್ಯದ ಬಬೌಟ ಎಂಬ ಪ್ರದೇಶದಲ್ಲಿ ಗುಡ್ಡ ಕುಸಿತದಿಂದಾಗಿ ಒಂದು ಮನೆಯು ಸಂಪೂರ್ಣವಾಗಿ ನೆಲಸಮವಾಗಿದೆ.

ಈ ಘಟನೆಯು ಶನಿವಾರ ರಾತ್ರಿ ಸುಮಾರು 10.30ರ ಸಮಯಕ್ಕೆ ಸಂಭವಿಸಿದ್ದು, ಮನೆಯಲ್ಲಿ ಒಟ್ಟು ಆರು ಜನ ಇದ್ದು, ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಬೆಟ್ಟವು ಮೊದಲು ಅಡುಗೆ ಮನೆಯ ಮೇಲೆ ಕುಸಿದಿದೆ, ಇದರ ಶಬ್ಧ ಕೇಳಿ ಮನೆಯವರು ಹೊರ ಓಡಿದ್ದಾರೆ. ನಂತರ ಬೆಟ್ಟವು ಸಂಪೂರ್ಣವಾಗಿ ಮನೆಯ ಮೇಲೆ ಕುಸಿದಿದೆ. ಮನೆಯು ಸಂಪೂರ್ಣವಾಗಿ ನೆಲಸಮವಾಗಿದ್ದು ಗುರುತಿಸಲು ಅಸಾಧ್ಯವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಘಟನೆ ನಡೆದ ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಸ್ಥಳೀಯರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದ ಮನೆಯವರನ್ನು ರಕ್ಷಣೆ ಮಾಡಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಇಬ್ಬರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಉಳಿದ ನಾಲ್ವರು ವಿಟ್ಲದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸ್ಥಳೀಯರ ಪ್ರಕಾರ ಈ ಸ್ಥಳದಲ್ಲಿ ಇನ್ನೂ ಮೂರು ಮನೆಗಳು ಇಂತಹದ್ದೆ ಅಪಾಯದಲ್ಲಿದೆ ಎಂದು ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
196
Keerthana Bhat

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು