News Karnataka Kannada
Sunday, April 14 2024
Cricket
ಕರಾವಳಿ

ವಿಚಾರ, ಸಂಘಟನೆಗೆ ಬದ್ಧರಾದವರನ್ನು ಪಕ್ಷ ಗುರುತಿಸುತ್ತದೆ: ಪ್ರತಾಪಸಿಂಹ ನಾಯಕ್

Photo Credit :

ವಿಚಾರ, ಸಂಘಟನೆಗೆ ಬದ್ಧರಾದವರನ್ನು ಪಕ್ಷ ಗುರುತಿಸುತ್ತದೆ: ಪ್ರತಾಪಸಿಂಹ ನಾಯಕ್

ಸುಳ್ಯ: ಪಡೆಯುವ ಯೋಗವಿದ್ದರೆ ಅಧಿಕಾರ ನಮ್ಮನ್ನು ಅರಸಿ ಬರುತ್ತದೆ. ವಿಚಾರ ಮತ್ತು ಸಂಘಟನೆಗೆ ಬದ್ಧರಾಗಿ ಕೆಲಸ ಮಾಡಿದರೆ ಪಕ್ಷ ನಮ್ಮನ್ನು ಗುರುತಿಸಿ ಸ್ಥಾನ ಮಾನವನ್ನು ನೀಡುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಹೇಳೀದ್ದಾರೆ.

ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಬಳಿಕ ಪ್ರಥಮ ಬಾರಿಗೆ ಸುಳ್ಯಕ್ಕೆ ಆಗಮಿಸಿದ ಅವರು  ಸುಳ್ಯ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರು ನೀಡಿದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.

ಅಧಿಕಾರ ಶಾಶ್ವತವಲ್ಲ, ಅಧಿಕಾರ ಇಲ್ಲದೇ ಇದ್ದರೂ ಜನರು ಗೌರವಿಸುವುದಿದ್ದರೆ ನಾವು ಸರಿಯಾಗಿ ಇದ್ದೇವೆ ಎಂದರ್ಥ. ಆ ಗೌರವವೇ ಶಾಶ್ವತ. ಹಿರಿಯರ ತಪಸ್ಸಿನ ಫಲದಿಂದ ಇಂದು ಪಕ್ಷ ಬೆಳೆದಿದೆ, ನಾವು ಅಧಿಕಾರವನ್ನು ಅನುಭವಿಸುತ್ತಿದ್ದೇವೆ.  ವ್ಯಕ್ತಿ ಸರಿಯಾದರೆ ದೇಶ ಸರಿಯಾಗುತ್ತದೆ ಎಂಬ ಕಲ್ಪನೆಯಲ್ಲಿ ಆರ್‍ಎಸ್‍ಎಸ್ ವ್ಯಕ್ತಿ ನಿರ್ಮಾಣ ಕಾರ್ಯ ಮಾಡಿದ ಕಾರಣ ಇಂದು ದೇಶ ಸುದೃಢವಾಗಿ ಬೆಳೆದಿದೆ ಎಂದು ಅವರು ಹೇಳಿದರು.

ಪ್ರತಾಪಸಿಂಹ ನಾಯಕ್ ಅವರನ್ನು ಸನ್ಮಾನಿಸಿ ಮಾತನಾಡಿದ ಶಾಸಕ ಎಸ್.ಅಂಗಾರ ಅಧಿಕಾರದ ಅಪೇಕ್ಷೆ ಇಲ್ಲದೆ ಪ್ರಾಮಾಣಿಕವಾಗಿ ನಿಷ್ಠೆ ಮತ್ತು ಬದ್ಧತೆಯಿಂದ ಪಕ್ಷ ಸಂಘಟನೆ ಮಾಡಿದಾದ ಅಧಿಕಾರ ಹುಡುಕಿಕೊಂಡು ಬರುತ್ತದೆ. ಲಾಬಿ ಮಾಡಿ ಪಡೆಯುವ ಅಧಿಕಾರ ಶಾಶ್ವತ ಅಲ್ಲ, ಅರ್ಹತೆಯಿಂದ ಹುಡುಕಿಕೊಂಡು ಬರುವ ಅಧಿಕಾರ ಶಾಶ್ವತ ಎಂದು ಹೇಳಿದರು.

ಸುಳ್ಯ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಸಭೆಯ ಅಧ್ಯಕ್ಷತೆ ಸುವಹಿಸಿದ್ದರು.  ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವೆಂಕಟ್ ವಳಲಂಬೆ, ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಗುರುದತ್ ನಾಯಕ್, ತಾ.ಪಂ ಅಧ್ಯಕ್ಷ ಚನಿಯ ಕಲ್ತಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಿಜೆಪಿ ಮುಖಂಡ ಎ.ವಿ.ತೀರ್ಥರಾಮ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿನಯ್‍ಕುಮಾರ್ ಕಂದಡ್ಕ ಕಾರ್ಯಕ್ರಮ ನಿರೂಪಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
180

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು