News Karnataka Kannada
Tuesday, April 23 2024
Cricket
ಕರಾವಳಿ

ವಸಂತ ಬಂಗೇರ ಹಳೇ ಚಾಲಿಯನ್ನು ಬಿಡಲಿ: ಪ್ರತಾಪಸಿಂಹ ನಾಯಕ್ ಎಚ್ಚರಿಕೆ

Photo Credit :

ವಸಂತ ಬಂಗೇರ ಹಳೇ ಚಾಲಿಯನ್ನು ಬಿಡಲಿ: ಪ್ರತಾಪಸಿಂಹ ನಾಯಕ್ ಎಚ್ಚರಿಕೆ

ಬೆಳ್ತಂಗಡಿ: ವಾಸ್ತವವನ್ನು ತಿಳಿದುಕೊಳ್ಳದೆ, ಯಾರೋ ಹೇಳಿದ್ದನ್ನು ಕೇಳಿ ವೃಥಾ ಆರೋಪಗಳನ್ನು ಮಾಡುವುದು ಅನುಭವಿ ರಾಜಕಾರಣಿಗೆ ಶೋಭೆ ತರುವಂತಹದಲ್ಲ. ತಮ್ಮ ಹಳೇ ಚಾಳಿಯನ್ನು ಈಗಲೂ ಮುಂದುವರಿಸುತ್ತಿರುವುದು ವ್ಯಕ್ತಿತ್ವಕ್ಕೆ ಗೌರವ ತರದು ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಮಾಜಿ ಶಾಸಕ ವಸಂತ ಬಂಗೇರ ಅವರಿಗೆ ಎಚ್ಚರಿಸಿದ್ದಾರೆ.

ಇಲ್ಲಿನ ಪ್ರವಾಸಿ ಬಂಗಲೆಯಲ್ಲಿ ಸೋಮವಾರ ಅವರು ಪತ್ರಿಕಾಗೋಷ್ಠಿ ನಡೆಸಿ ಬಂಗೇರ ಅವರ ನಡವಳಿಕೆಗಳನ್ನು ಉಗ್ರವಾಗಿ ಖಂಡಿಸಿದರು.

ಕಾಳಜಿ ರಿಲೀಫ್ ಫಂಡ್ ನಲ್ಲಿನ ಹಣವನ್ನು ಶಾಸಕ ಹರೀಶ ಪೂಂಜಾ ಅವರು ದುರ್ವಿನಿಯೋಗ ಮಾಡಿದ್ದಾರೆ, ಹೀಗಾಗಿ ಲೆಕ್ಕ ಕೊಡಿ ಎಂದು ಮಾಜಿ ಶಾಸಕರು ಆರೋಪಿಸುತ್ತಾ ಪ್ರತಿಭಟಿಸಿದ್ದರು. ಈ ಹಿನ್ನಲೆಯಲ್ಲಿ ಪ್ರತಾಪ್ ಅವರು ಬಂಗೇರ ಅವರನ್ನು ಗೋಷ್ಠಿಯಲ್ಲಿ‌ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಹೊಸ ಶಾಸಕರು ತಾಲೂಕಿನ ಅಭಿವೃದ್ಧಿ ವಿಚಾರದಲ್ಲಿ ಅಭೂತಪೂರ್ವ ಸಾಧನೆ ಮಾಡಿದ್ದಾರೆ. ಸುಮಾರು 458 ಕೋಟಿ ರೂ.ಗಳ ಕಾಮಗಾರಿಗಳು ನಡೆದಿವೆ. ಹಿಂದಿನ ಶಾಸಕರ ಸಾಧನೆಗೆ ತುಲನೆ ಮಾಡಿದರೆ ಇದು ಅತ್ಯಪೂರ್ವವಾದದ್ದು ಎಂದು ಜನತೆಯೇ ಹೇಳುತ್ತಿದ್ದಾರೆ.ಇವರ ಕತೃತ್ವವನ್ನು ಪ್ರೋತ್ಸಾಹಿಸುವ ಬದಲು ಕುರುಬುವುದು ಹಿರಿಯ ರಾಜಕಾರಣಿಗೆ ಹೇಳಿದ್ದಲ್ಲಾ. ತಮ್ಮ ಸ್ವಾರ್ಥ ಸಾಧನೆಗೆ ಕಿವಿ ಊದುತ್ತಾರೆಯೇ ಹೊರತು ನಿಮ್ಮ ಅಥವಾ ಪಕ್ಷದ ಹಿತ ಅವರಲ್ಲಿ ಇರುವುದಿಲ್ಲಾ. ಅಂಥವರಿಂದ ದೂರ ಇದ್ದಷ್ಟೂ ಕ್ಷೇಮ. ಜೀವನದ ಸಂಧ್ಯಾ ಕಾಲದಲ್ಲಿ ಇರುವ ಮಾಜಿ ಶಾಸಕರಿಗೆ ಇದು ಇನ್ನೂ ಅರ್ಥವಾಗದೇ ಇರುವುದು ದುರಂತ ಎಂದರು.

ಲೆಕ್ಕ ಕೇಳಿದುದರಲ್ಲಿ ತಪ್ಪಿಲ್ಲಾ ಮತ್ತು ಆಕ್ಷೇಪವನ್ನೂ ನಾವು ಮಾಡುವುದಿಲ್ಲಾ. ಅದು ಕೊಡುವುದು ನಮ್ಮ ಕರ್ತವ್ಯ. ಆದರೆ ಸಹಾಯಧನವನ್ನು ದುರುಪಯೋಗ ಮಾಡಿದ್ದಾರೆ ಎಂಬ ನಿರ್ಣಯಕ್ಕೆ ಬಂದು ಆರೋಪಿಸಿರುವುದು ಮತ್ತು ಅವರು ನಡೆದುಕೊಂಡ ರೀತಿ, ಶಾಸಕರ ಕಚೇರಿಗೆ ಮುತ್ತಿಗೆ ಹಾಕಿ ಅಸಮಾಧಾನದ ವಾತಾವರಣ ನಿರ್ಮಾಣ ಮಾಡಿರುವುದು ಅವರ ಹಿರಿತನಕ್ಕೆ ಹಾಗು ಅನುಭವಕ್ಕೆ ತಕ್ಕುದಾದ ನಡೆಯಲ್ಲ. ಬಂಗೇರ ಅವರು ಸಲಹೆ ನೀಡುವ ಯೋಗ್ಯ ತಂಡವನ್ನು ಇನ್ನಾದರೂ ಇಟ್ಟು ಕೊಳ್ಳಬೇಕು. ಕಿವಿ ಊದುವವರಿಂದ ದೂರ ಇರಬೇಕು ಎಂದು ಸಲಹೆಯನ್ನು ಪ್ರತಾಪ್ ನೀಡಿದರು.

ಪಕ್ಷದ ಬದ್ಧತೆಯಲ್ಲಿ ಅವರು ಕಾಂಗ್ರೇಸ್ ಅಲ್ಲಾ. ಅವರು ಶಾಸಕತ್ವವನ್ನು ಪ್ರಾರಂಭಿಸಿರುವುದೇ ಬಿಜೆಪಿಯಿಂದ. ಪ್ರತೀ ಬಾರಿ ಕೊನೆಯ ಚುನಾವಣೆ ಎಂದು ಎಷ್ಟು ಸಲ ಹೇಳಿದ್ದಾರೆ ಎಂಬುದುರ ಲೆಕ್ಕ ಕೊಡಲಿ. ಇನ್ನು ಕೊನೆಯ ಬಾರಿಗೆ ಚುನಾವಣೆಗೆ ನಿಲ್ಲುವುದಕ್ಕೆ ಈ ರೀತಿಯ ನಾಟಕವಾಡುತ್ತಿದ್ದಾರೆ‌. ತಾನು ಮಾತ್ರ ತಾಲೂಕಿನ ನಾಯಕ ಎಂಬ ಅಹಂಕಾರಿತನ, ಮಾನಸಿಕತೆ ಕೊನೆಯ ಕ್ಷಣದವರೆಗೂ ಬಿಡಲಾರರು ಎಂಬುದು ಸಾಬೀತಾಗಿದೆ. ಹೀಗಾಗಿ ತಾಲೂಕಿನಲ್ಲಿ ಕಾಂಗ್ರೇಸ್ ಪಕ್ಷದಲ್ಲಿ ಇನ್ನೊಬ್ಬ ನಾಯಕ ಮೇಲೆಬರಲು ಸಾಧ್ಯವಾಗಿಲ್ಲ. ಎಂದಿನ ಚಾರಿತ್ರ್ಯಹನನದ ಚಾಳಿಯನ್ನು ಇನ್ನೂ ಮುಂದುವರಿಸುತ್ತಾ ಬಂದಲ್ಲಿ ಪಾಳೆಗಾರಿಕೆಯನ್ನು ಇನ್ನೂ ತೋರಿಸಿದ್ದೇ ಆದಲ್ಲಿ ಅದಕ್ಕೆ ತಕ್ಕ ಉತ್ತರ ಕೊಡುವ ಶಕ್ತಿ ಬಿಜೆಪಿಗೆ ಸಾಕಷ್ಟಿದೆ ಎಂದು ಎಚ್ಚರಿದರು.

ಕಮಿಷನ್ ದಂಧೆ ಎಂಬುದು ಕಾಂಗ್ರೇಸ್ ಪಕ್ಷದ ಪಾಪದ ಕೂಸು. ಅವರಿಗೆ ಎಲ್ಲಾ ಕಡೆ ಅದುವೇ ಕಾಣಸಿಗುವುದು. ಯಾವುದೇ ಆರೋಪಗಳಿಗೆ ತಾರ್ಕಿಕ ಅಂತ್ಯ ಕಾಣಿಸುವ ಅಭ್ಯಾಸ ಆ ಪಕ್ಷದಲ್ಲಿ ಇಲ್ಲವೇ ಇಲ್ಲಾ. ಹಾಗೆ ನೋಡಿದರೆ ಮಿನಿವಿಧಾನ ಸೌಧದ ಕಾಮಗಾರಿಯಲ್ಲಿ ಶೇ. 15 ಎಲ್ಲಿ ಹೋಯಿತು ಎಂದು ನಾವೂ ಕೇಳಬಾರದು ಎಂದೇನಿಲ್ಲಾ ಎಂದು ಪ್ರತಾಪ್ ಕುಟುಕಿದರಲ್ಲದೆ, ಪಕ್ಷಾತೀತವಾಗಿ, ಧರ್ಮಾತೀತವಾಗಿ ಕೆಲಸ ಮಾಡುತ್ತಿರುವ ಯುವ ಶಾಸಕರಿಗೆ ತೊಂದರೆ ನೀಡುವ ಕೆಲಸ ಮಾಡಿದರೆ ಸುಮ್ಮನಿರುವ ಜಾಯಮಾನ‌ ನಮ್ಮದಲ್ಲಾ ಎಂದು ಎಚ್ಚರಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು