News Karnataka Kannada
Thursday, April 25 2024
Cricket
ಕರಾವಳಿ

ರಾಮಮಂದಿರ ನಿರ್ವಿಘ್ನವಾಗಿ ಸಾಗಲು ವೀರೇಂದ್ರ ಹೆಗ್ಗಡೆ ಪ್ರಾರ್ಥನೆ

Photo Credit :

ರಾಮಮಂದಿರ ನಿರ್ವಿಘ್ನವಾಗಿ ಸಾಗಲು ವೀರೇಂದ್ರ ಹೆಗ್ಗಡೆ ಪ್ರಾರ್ಥನೆ

ಬೆಳ್ತಂಗಡಿ: ರಾಮರಾಜ್ಯದ ಕಲ್ಪನೆಗೆ ಕೇಂದ್ರವಾಗಿರುವ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುವುದು ಅತೀ ಅಗತ್ಯ. ಈ ಶಿಲಾನ್ಯಾಸದ ಶುಭ ಮುಹೂರ್ತದಲ್ಲಿ ಪ್ರಾರಂಭವಾಗಿರುವ ಮಂದಿರ ನಿರ್ಮಾಣ ನಿರ್ವಿಘ್ನವಾಗಿ ನೆರವೇರಲೆಂದು ಶ್ರೀ ಮಂಜುನಾಥ ಸ್ವಾಮಿಯಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಪ್ರಾರ್ಥಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಮಂದಿರದ ಶಿಲಾನ್ಯಾಸ ಕಾರ್ಯಕ್ರಮ ಇಂದು ನೆರವೇರಲಿರುವುದು ಭಾರತೀಯರೆಲ್ಲರಿಗೂ ಶುಭ ಸುದ್ದಿ. ಶ್ರೀರಾಮ ಭಗವಂತನ ಅವತಾರವೆಂದು ಭಾರತೀಯರ ನಂಬಿಕೆ, ಶ್ರದ್ಧೆ. ಆತ ಭೂಮಿಯಲ್ಲಿ ಅವತರಿಸಿದ ಬಳಿಕ ತನ್ನ ಸದ್ಗುಣಗಳಿಂದ ಆದರ್ಶಮೂರ್ತಿ ಎನಿಸಿದ. ಸಹಸ್ರಾರು ವರ್ಷಗಳಿಂದ ಮರ್ಯಾದಾ ಪುರುಷೋತ್ತಮನೆನಿಸಿ ತನ್ನ ವ್ಯಕ್ತಿತ್ವ, ದೃಢ ನಿರ್ಧಾರಗಳಿಂದಾಗಿ ಜನಮಾನಸದಲ್ಲಿ ನೆಲೆಯಾದ. ತನ್ನ ಆದರ್ಶಗಳಿಂದ ವಿಶ್ವವ್ಯಾಪಿಯಾದ.

ಆಧುನಿಕ ಜಗತ್ತಿನ ಭೌತಿಕ ಪ್ರಗತಿಯ ಮಧ್ಯೆಯೂ ರಮಾನಂದಸಾಗರರ ‘ರಾಮಾಯಣ’ ದೂರದರ್ಶನದಲ್ಲಿ ಪ್ರಸಾರವಾದಾಗ ಜನರು ಈ ರಾಮಕತೆಯಿಂದ, ರಾಮನ ಆದರ್ಶಗಳಿಂದ ಆಕರ್ಷಿತವಾಗಿರುವುದನ್ನು ಕಂಡರೆ ಶ್ರೀರಾಮ ಸ್ಮರಣೆ ಇನ್ನೂ ಸಹಸ್ರ ವರ್ಷಗಳವರೆಗೆ ಈ ನೆಲದಲ್ಲಿ ಉಳಿಯುತ್ತದೆ ಮತ್ತು ಬೆಳೆಯುತ್ತದೆ ಎಂಬುದು ಸತ್ಯ.

ಕೆಲವೇ ತಿಂಗಳ ಹಿಂದೆ ಅಯೋಧ್ಯೆಗೆ ಹೋಗಿ ಪವಿತ್ರ ಭೂ ಸ್ಪರ್ಶ ಮಾಡಿ ಹಿರಿಯ ಸಂತರಿಗೆ ಗೌರವ ಸಲ್ಲಿಸಿ ಬಂದಿದ್ದೇನೆ. ಈ ಸಾಧನೆಗೆ ಸಂಕಲ್ಪ ಮಾಡಿದ ತ್ಯಾಗ ಮತ್ತು ಬಲಿದಾನ ಮಾಡಿದ ಎಲ್ಲಾ ಶ್ರದ್ಧಾಳುಗಳಿಗೂ ಅಭಿನಂದನೆಗಳು ಎಂದು ಅವರು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು