News Karnataka Kannada
Friday, April 12 2024
Cricket
ಕರಾವಳಿ

ರಾಜ್ಯ ಪ್ರಶಸ್ತಿ ಗೆದ್ದ ಶಿಕ್ಷಕಿಗೆ ಹಳೆ ವಿದ್ಯಾರ್ಥಿಗಳಿಂದ ಸನ್ಮಾನ

Photo Credit :

ರಾಜ್ಯ ಪ್ರಶಸ್ತಿ ಗೆದ್ದ ಶಿಕ್ಷಕಿಗೆ ಹಳೆ ವಿದ್ಯಾರ್ಥಿಗಳಿಂದ ಸನ್ಮಾನ

ಬಂಟ್ವಾಳ: ವಿದ್ಯಾರ್ಥಿಗಳ ಜೀವನದಲ್ಲಿ ಶಿಕ್ಷಕರ ಪಾತ್ರ ಬಹಳ. ಆದರೆ ಶಿಕ್ಷಣ ನೀಡಿ, ಬದುಕಿಗೆ ದಾರಿ ತೋರಿದ ಶಿಕ್ಷಕರನ್ನು ಜೀವನದುದ್ದಕ್ಕೂ ನೆನೆಪಿಟ್ಟುಕೊಳ್ಳುವ ವಿದ್ಯಾರ್ಥಿಗಳಿರುವುದು ಬಲು ವಿರಳ.   ಸುಮಾರು 25 ವರ್ಷಗಳ ಹಿಂದೆ ತಮಗೆ ವಿದ್ಯೆ ನೀಡಿದ ಶಿಕ್ಷಕಿಗೆ ಇತ್ತೀಚೆಗೆ ರಾಜ್ಯ ಪ್ರಶಸ್ತಿ ಬಂದ ಹಿನ್ನೆಲೆಯಲ್ಲಿ  ಹಿರಿಯ ವಿದ್ಯಾರ್ಥಿಗಳೆಲ್ಲಾ ಸೇರಿ ಶಿಕ್ಷಕಿಯ ಮನೆಗೆ ತೆರಳಿ ಸನ್ಮಾನಿಸಿದ ಅಪರೂಪದ ವಿದ್ಯಮಾನಕ್ಕೆ  ಬಿ.ಸಿ.ರೋಡಿನ ಪರ್ಲಿಯಾದ  ಆ ಶಿಕ್ಷಕಿಯ ಮನೆ ಸಾಕ್ಷಿಯಾಯಿತು.

ಪುತ್ತೂರು ತಾಲೂಕಿನ ಇರ್ದಿ ಉಪ್ಪಳಿಗೆಯ ಸರಕಾರಿ ಪ್ರೌಢಶಾಲೆಯಲ್ಲಿ ಹಿಂದಿ ಶಿಕ್ಷಕಿಯಾಗಿರುವ ಗೀತಾ ಕುಮಾರಿ ಎನ್.ವಿ.‌ಅವರಿಗೆ ಈ ಸಾಲಿನ ಹಿಂದಿ ಶಿಕ್ಷಕ ರತ್ನ ರಾಜ್ಯ ಪ್ರಶಸ್ತಿ ಲಭಿಸಿದೆ.‌ ಅವರು ಈ ಹಿಂದೆ ಅಂದರೆ ಸುಮಾರು 25 ವರ್ಷಗಳ ಹಿಂದೆ ಬಂಟ್ವಾಳ ತಾಲೂಕಿನ ಮೊಡಂಕಾಪುವಿನಲ್ಲಿರುವ ದೀಪಿಕಾ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದರು. ತಮ್ಮ ಮೆಚ್ಚಿನ ಶಿಕ್ಷಕಿಗೆ ರಾಜ್ಯ ಪ್ರಶಸ್ತಿ ಬಂದಿರುವ ಸುದ್ದಿ ತಿಳಿದ ದೀಪಿಕಾ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿ, ಬೂಡಾ ಮಾಜಿ ಅಧ್ಯಕ್ಷ ಸದಾಶಿವ ಬಂಗೇರಾ ಅವರ ನೇತೃತ್ವದಲ್ಲಿ ಶಾಲಾ ಮಿತ್ರರೆಲ್ಲಾ ಜೊತೆಗೂಡಿ ಶಿಕ್ಷಕಿಯ ಮನೆಗೆ ತೆರಳಿ ಅಭಿನಂದಿಸಿದರು. ತನ್ನ ಹಳೆಯ ವಿದ್ಯಾರ್ಥಿಗಳನ್ನು ಕಂಡು ಸಂಭ್ರಮಿಸಿದ ಗೀತಾ ಟೀಚರ್ ವಿದ್ಯಾರ್ಥಿಗಳೊಂದಿಗೆ ಹಳೆಯ ನೆನೆಪುಗಳನ್ನು ಮೆಲುಕು ಹಾಕಿದರು. 25 ವರ್ಷದ ಬಳಿಕವೂ ತನ್ನ ಮೆಚ್ಚಿನ ವಿದ್ಯಾರ್ಥಿಗಳನ್ನು “ಪುಟಾಣಿಗಳೇ…” ಎಂದು ಸಂಭೋದಿಸಿದ ಗೀತಾ ಟೀಚರ್ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ತನಗೆ ಪ್ರಶಸ್ತಿ ಬಂದಿರುವುದಕ್ಕಿಂತಲೂ ನನ್ನನ್ನು ಹಳೆಯ ವಿದ್ಯಾರ್ಥಿಗಳು ಇನ್ನೂ ನೆನೆಪಿಟ್ಟುಕೊಂಡು ಮನೆಗೆ ಬಂದು ಅಭಿನಂದಿಸಿರುವುದು ತುಂಬಾ ಸಂತೋಷಕೊಟ್ಟಿದೆ ಎಂದರು.

ಈ ಸಂದರ್ಭ ದೀಪಿಕಾ ಪ್ರೌಢಶಾಲೆಯ ಹಳೆ ವಿದ್ಯಾರ್ಥಿಗಳಾದ ಸದಾಶಿವ ಬಂಗೇರ, ಮನೋಜ್ ಕುಮಾರ್ ಕನಪಾಡಿ, ಸದಾನಂದ ಬಂಗೇರ, ಹರೀಶ್ ಸಾಲ್ಯಾನ್, ಕಿಶೋರ್ ಆಚಾರ್ಯ, ಗಣೇಶ್ ಕುಲಾಲ್ ಬೆದ್ರಗುಡ್ಡೆ, ಅನಿಲ್, ಸುನೀಲ್, ಶಿಕ್ಷಕಿಯ ಪತಿ ಸೂರ್ಯನಾರಯಣ ಪಿ ಹಾಗೂ ಮನೆಮಂದಿ ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು