News Karnataka Kannada
Thursday, April 25 2024
ಕರಾವಳಿ

`ಮೈ ಫ್ರೆಂಡ್ ಗಣೇಶ’ ಗಣಪತಿ ಮೂರ್ತಿ ರಚಿಸುವ ವರ್ಚುವಲ್ ಸ್ಪರ್ಧೆ

Photo Credit :

`ಮೈ ಫ್ರೆಂಡ್ ಗಣೇಶ’ ಗಣಪತಿ ಮೂರ್ತಿ ರಚಿಸುವ ವರ್ಚುವಲ್ ಸ್ಪರ್ಧೆ

ನಾಳೆ ಗಣೇಶ ಚತುದರ್ಶಿ, ಈ ಶುಭ ಸಂದರ್ಭದಲ್ಲಿ ಗಣಪತಿ ದೇವರು ಪ್ರತಿಯೊಬ್ಬರ ಮನೆಗೂ ಭೇಟಿ ನೀಡಿ, ಅವರ ಬೇಡಿಕೆಗಳನ್ನು ಈಡೇರಿಸುತ್ತಾನೆ ಎಂದು ನಂಬಲಾಗಿದೆ. ಗಣೇಶನೆಂದರೆ ಅದು ಸಂತೋಷ ಹಾಗೂ ಸ್ವತಂತ್ರದ ಸಂಕೇತ. ನಮ್ಮ ಜೀವನದಲ್ಲಿನ ಪ್ರತಿಯೊಂದು ಸಂಭ್ರಮ ಹಾಗೂ ನಗುವಿನಲ್ಲಿ ಗಣೇಶನ ಆಶೀರ್ವಾದವಿದೆ.

ಕೈಲಾಸ ಪವರ್ತದಲ್ಲಿ ಪಾವರ್ತಿಯು ಗಣೇಶನಿಗೆ ಜನ್ಮ ನೀಡಿದಂತಹ ದಿನವನ್ನು ಗಣೇಶ ಚತುದರ್ಶಿಯಾಗಿ ಆಚರಿಸಲಾಗುತ್ತದೆ. ಗಣೇಶ ಚತುದರ್ಶಿಯನ್ನು ದೇಶದೆಲ್ಲೆಡೆ ತುಂಬಾ ಸಂಭ್ರಮ ಹಾಗೂ ಭಕ್ತಿಭಾವದಿಂದ ಆಚರಿಸಲಾಗುತ್ತದೆ. ನಮ್ಮೆಲ್ಲಾ ಪ್ರಾರ್ಥನೆಗಳಿಗೆ ಗಣಪತಿಯು ಉತ್ತರಿಸುವನು ಮತ್ತು ಬರುವಂತಹ ಯಾವುದೇ ವಿಘ್ನಗಳನ್ನು ದೂರ ಮಾಡುವನು.

ಡೊಳ್ಳು ಹೊಟ್ಟೆ, ಗಜಮುಖ, ಲಾಡು ಪ್ರಿಯನಾಗಿರುವ ಗಣಪತಿಯು ತನ್ನ ಉತ್ತಮ ಸ್ನೇಹಿತನಾಗಿ ಮೂಶಿಕನ ಬದಿಯಲ್ಲಿ ಕೂರಿಸಿಕೊಂಡಿರುವನು. ಗಣೇಶ ಚತುದರ್ಶಿ ಸಂದರ್ಭದಲ್ಲಿ ವಿವಿಧ ರೀತಿಯ ಮೂರ್ತಿಗಳನ್ನು ತಯಾರಿಸಿಕೊಂಡು ಅದನ್ನು ದೇಶದೆಲ್ಲಡೆಯಲ್ಲೆಡೆ ಆಚರಿಸುವರು. ಬಾಲ ಗಂಗಾಧರ ತಿಲಕ್ ಅವರು ಸಾರ್ವಜನಿಕವಾಗಿ ಗಣೇಶೋತ್ಸವಕ್ಕೆ ಚಾಲನೆ ನೀಡಿದವರು. ಆದರೆ ಈಗ ಕೊರೊನಾ ಕಾಲಘಟ್ಟದಲ್ಲಿ ಗಣೇಶನ ಹುಟ್ಟುಹಬ್ಬವನ್ನು ಆಚರಿಸಲು ಅಡ್ಡಿಯಾಗುತ್ತಲಿದೆ.

ಆದರೆ ಇದರ ಬಗ್ಗೆ ನೀವೆಲ್ಲರೂ ಚಿಂತೆ ಮಾಡಬೇಕಾಗಿಲ್ಲ. ಯಾಕೆಂದರೆ ವರ್ಚುವಲ್ ಆಗಿ ಗಣೇಶ ಚತುದರ್ಶಿಯನ್ನು ಆಚರಿಸುವಂತಹ ಅವಕಾಶವು ನಿಮಗೆ ಒದಗಿಬಂದಿದೆ. ಇದನ್ನು ಮಾಜಿ ಸೌಂದರ್ಯ ಸ್ಪರ್ಧಿ ಸೌಜನ್ಯ ಹೆಗ್ಡೆ ಅವರು ಲೆಟ್ಸ್ ಪಾರ್ಟಿ ಜತೆಗೆ ಸೇರಿಕೊಂಡು ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದಾರೆ.

ನ್ಯೂಸ್ ಕರ್ನಾಟಕ, ಮ್ಯಾಂಗಳೂರ್ ಮೆರಿ ಜಾನ್, ಫಾಕ್ಸ್ ವೆಲ್ ಪ್ರಾಡಕ್ಸನ್, ಮೈ ರೋಡ್ ರನ್ನರ್, ಜೆಸಿಐ, ಲಾಲ್ ಭಾಗ್, ಮಂಗಳೂರು ಮತ್ತು ಗಿಫ್ಟಿಫೈ ಸಹಯೋಗದೊಂದಿಗೆ ಇದನ್ನು ಆಯೋಜಿಸುತ್ತಿದೆ.

ಈ ಸ್ಪರ್ಧೆಯಲ್ಲಿ ಭಾಗಿಯಾಗುವವರು ಗಣೇಶನ ಮೂರ್ತಿಯನ್ನು ಕಾಗದ, ಮಣ್ಣು, ಬಾಟಲಿ, ಬಿಸಾಕುವ ವಸ್ತುಗಳು ಇತ್ಯಾದಿಗಳನ್ನು ಬಳಸಿಕೊಂಡು ತಯಾರಿಸಬಹುದು. ಆಗಸ್ಟ್ 25ರಂದು ಪೂರ್ವಾಹ್ನ 10 ಗಂಟೆಗೆ ಮೊದಲು ಈ ಸ್ಪರ್ಧೆಯಲ್ಲಿ ಭಾಗಿಯಾಗಲು ಹೆಸರನ್ನು ನೋಂದಾಯಿಸಬೇಕು.

ಸ್ಪರ್ಧಿಗಳು ಗಣೇಶನ ಮೂರ್ತಿಯನ್ನು ತಯಾರಿಸಿದ ಬಗ್ಗೆ ಮೂರು ಹಂತದಲ್ಲಿ ವೀಡಿಯೋ(ಗರಿಷ್ಠ 3 ನಿಮಿಷ) ಮಾಡಬೇಕು.  ಇದರಲ್ಲಿ ಆಯ್ಕೆಯಾದ ಕೆಲವು ಸ್ಪರ್ಧಿಗಳು ನ್ಯೂಸ್ ಕರ್ನಾಟಕದಲ್ಲಿ ಗಣೇಶ ಮೂರ್ತಿ ತಯಾರಿಕೆ ಬಗ್ಗೆ ಸಂದರ್ಶನ ನೀಡಬೇಕಾಗುತ್ತದೆ. ಸ್ಪರ್ಧಿಗಳು ರಚಿಸುವ ಗಣೇಶನ ವಿಗ್ರಹಕ್ಕೆ ಟ್ರೋಫಿ ಮತ್ತು ಪ್ರಮಾಣ ಪತ್ರಗಳನ್ನು ನೀಡಲಾಗುತ್ತದೆ ಎಂದು ಸೌಜನ್ಯ ಹೆಗ್ಡೆ ತಿಳಿಸಿದರು.

ಈ ಮೊದಲು ಪರಿಸರ ಸ್ನೇಹಿ ಹಾಗೂ ಸುಸ್ಥಿರ ಉತ್ಪನ್ನಗಳನ್ನು ಬಳಸಿಕೊಂಡು ಇವರು ಸ್ಪರ್ಧೆಗಳನ್ನು ಏರ್ಪಡಿಸಿದ್ದೆವು. ಕಳೆದ ಮೂರು ವರ್ಷಗಳಿಂದ ನಾವು ಸ್ಪರ್ಧೆಯನ್ನು ಆಯೋಜಿಸುತ್ತಿದ್ದೇವೆ. ಈ ವರ್ಷ ಕೊರೋನಾದಿಂದಾಗಿ ಆನ್ ಲೈನ್ ನಲ್ಲಿ ಇದನ್ನು ಮಾಡಲು ನಿರ್ಧರಿಸಿದ್ದೇವೆ. ಗಣೇಶನ ತಯಾರಿಯ ಆರಂಭದಿಂದ ಅಂತ್ಯದ ತನಕ ವಿವರವು ವೀಡಿಯೋದಲ್ಲಿ ಇರಬೇಕು. ಯಾವುದೇ ಸಾಂಕ್ರಾಮಿಕ ಅಥವಾ ವೈರಸ್ ಆದರೂ ಜೀವನವು ಸಾಗುತ್ತಲೇ ಇರಬೇಕಾಗುತ್ತದೆ ಎನ್ನುತ್ತಾರೆ ಸೌಜನ್ಯ ಹೆಗ್ಡೆ.

ಇದು ಕೇವಲ ಒಂದು ಸ್ಪರ್ಧೆ ಮಾತ್ರವಲ್ಲ, ದೇವರ ಕಡೆಗೆ ನಮಗಿರುವಂತಹ ಭಾವನೆ. ಇದು ಧಾರ್ಮಿಕವಾಗಿ ಹಾಗೂ ಪರಿಸರ ಸ್ನೇಹಿಯಾಗಿ ಮಾಡಲು ಪ್ರಾಮುಖ್ಯತೆ ನೀಡುವುದು. ಈ ವರ್ಷ ನಮಗೆಲ್ಲರಿಗೂ ಗಣೇಶನು ಶುಭವನ್ನು ಉಂಟು ಮಾಡಲಿ ಎಂದು ಅವರು ಹಾರೈಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು