News Karnataka Kannada
Saturday, April 13 2024
Cricket
ಕರಾವಳಿ

ಮನೆಗೂ ತೆರಳದ ಕಾರ್ಯನಿರ್ವಹಿಸುತ್ತಿರುವ ಕೊರೋನಾ ವಾರಿಯರ್

Photo Credit :

ಮನೆಗೂ ತೆರಳದ ಕಾರ್ಯನಿರ್ವಹಿಸುತ್ತಿರುವ ಕೊರೋನಾ ವಾರಿಯರ್

ಬಂಟ್ವಾಳ: ಕೊರೋನಾ ಪ್ರತಿಯೊಬ್ಬರಿಗೂ  ಒಂದೊಂದು ರೀತಿಯ ಸಮಸ್ಯೆಯನ್ನು ಕೊಡುತ್ತಾ ಸಾಗಿದ್ದು, ಕೊರೋನಾ ನಿಗ್ರಹಕ್ಕೆ ತೊಡಗಿರುವ ಕೊರೋನಾ ವಾರಿಯರ್ಸ್ ಗಳೂ ಕೂಡ ಹಲವು ರೀತಿಯಲ್ಲಿ ಸಮಸ್ಯೆ ಎದುರಿಸುತ್ತಿದ್ದಾರೆ.

ವಿಟ್ಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಸಹಾಯಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಕುಸುಮಾ ಅವರು ಕಳೆದ ನಾಲ್ಕು ತಿಂಗಳಿನಿಂದ ಪ್ರತಿದಿನ ಮನೆಗೆ ಹೋಗದೆ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡು ಕೊರೋನಾ  ವಿರುದ್ಧ ಸೆಣಸಾಟ ನಡೆಸುತ್ತಿದ್ದಾರೆ.

ಕೇರಳದ ಗಡಿ ಪ್ರದೇಶದ ಬಾಯಾರು ನಿವಾಸಿಯಾಗಿರುವ  ಕುಸುಮ ಅವರು ವಿಟ್ಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹಿರಿಯ ಆರೋಗ್ಯ ನಿರೀಕ್ಷಕಿಯಾಗಿದ್ದುಕೊಂಡು, ತಾಲೂಕು  ಆರೋಗ್ಯ ನಿರೀಕ್ಷಕರನ್ನ  ಹುದ್ದೆಯನ್ನೂ  ಪ್ರಭಾರವಾಗಿ   ನಿರ್ವಹಿಸುತ್ತಿದ್ದಾರೆ.  ಪ್ರತಿದಿನ ಬಾಯಾರುವಿನ ತನ್ನ ಮನೆಗೆ ತೆರಳುತ್ತಿದ್ದ ಅವರು ಕೋರೋನಾ ನಿಗ್ರಹದಲ್ಲಿ ಆರೋಗ್ಯ ಇಲಾಖೆ ತೊಡಗಿಕೊಂಡ ಬಳಿಕ ದಿನಂಪ್ರತಿ ತನ್ನ ಮನೆಗೆ ಹೋಗಲಾಗದೆ ಸಂಕಟಪಡುವಂತಾಗಿದೆ.

ಕೊರೋನಾ ನಿಗ್ರಹದಲ್ಲಿ ತೊಡಗಿರುವ  ಆರೋಗ್ಯ ಕಾರ್ಯಕರ್ತರು ಸಾಮಾಜಿಕ ಅಂತರವನ್ನು  ಕಾಯ್ದುಕೊಳ್ಳುವುದು  ಮುಖ್ಯವಾದರೆ, ಮತ್ತೊಂದೆಡೆ ಕೇರಳದ ಗಡಿ ಪ್ರದೇಶದಲ್ಲಿರುವುದು ಮುಖ್ಯ ಕಾರಣ. ಕೇರಳ ಗಡಿಪ್ರದೇಶದಲ್ಲಿ ಬಿಗುವಿನ ಕ್ರಮಗಳನ್ನು ಕೈಗೊಂಡಿದ್ದ ಹಿನ್ನೆಲೆಯಲ್ಲಿ ಮನೆಗೆ ನಿರಂತರವಾಗಿ ಹೋಗಲಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ  ವಿಟ್ಲ ಸಂಬಂಧಿಕರ ಮನೆಯಲ್ಲಿ ಅವರ ಮನವೊಲಿಸಿ ಮನೆಯಲ್ಲಿ ವಾಸ್ತವ್ಯ ವಿದ್ದಾರೆ . ಇವರ ಸಾಮಾಜಿಕ ಕಳಕಳಿಗೆ  ನಿಜಕ್ಕೂ ಹ್ಯಾಟ್ಸಾಪ್  ಎನ್ನಲೇಬೇಕು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು