News Karnataka Kannada
Tuesday, April 16 2024
Cricket
ಕರಾವಳಿ

ಬೆಳ್ತಂಗಡಿ ತಾಲೂಕು ಸಂಪೂರ್ಣ ಸ್ತಬ್ದ

Photo Credit :

ಬೆಳ್ತಂಗಡಿ ತಾಲೂಕು ಸಂಪೂರ್ಣ ಸ್ತಬ್ದ

ಬೆಳ್ತಂಗಡಿ: ರಾಜ್ಯ ಸರಕಾರದ ಲಾಕ್ ಡೌನ್ ಸೂಚನೆಯಿಂದಾಗಿ ಬೆಳ್ತಂಗಡಿ ತಾಲೂಕು ಗುರುವಾರ ಬೆಳಿಗ್ಗೆ 11 ಗಂಟೆಯಿಂದ ಸ್ತಬ್ಧವಾಗಿತ್ತು.

ಬುಧವಾರ ತಾಲೂಕಿನ ಉಜಿರೆ, ಬೆಳ್ತಂಗಡಿ, ವೇಣೂರು, ಧರ್ಮಸ್ಥಳ,‌ ಮಡಂತ್ಯಾರು ಮೊದಲಾದ ಪ್ರಮುಖ ಪೇಟೆಗಳಲ್ಲಿ ವಿಪರೀತ ಜನಸಂದಣಿ, ವಾಹನ ಸಂಚಾರ ಕಂಡು ಬಂದಿತ್ತು. ಪುಂಜಾಲಕಟ್ಟೆಯಿಂದ ಉಜಿರೆ ತನಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸಲು ಕಷ್ಟವಾಗುತ್ತಿತ್ತು. ಆಗ್ಗಾಗ್ಗೆ ಸಂಚಾರಕ್ಕೆ ತೊಂದರೆಯಾಗುತ್ತಿತ್ತು.

ಆದರೆ ಗುರುವಾರ 11 ಗಂಟೆಯವರೆಗೆ ಜನ ಸಂಚಾರಕ್ಕೆ ಅವಕಾಶವಿದ್ದರೂ ಬೆರಳಣಿಕೆಯಷ್ಟೇ ಜನರಿದ್ದರು. ವಾಹನ ಸಂಚಾರವೂ ಇರಲಿಲ್ಲ. ಹೋಟೆಲ್ ನವರು ಬೆಳಿಗ್ಗೆಯಿಂದಲೇ ಬಂದ್ ಮಾಡಿದ್ದರು. 11 ಗಂಟೆಯ ನಂತರ ಎಲ್ಲಾ ಪೇಟೆಗಳು ನಿರ್ಜನವಾಗಿತ್ತು. ಮಾರ್ಚ್ ಎಪ್ರಿಲ್ ತಿಂಗಳಲ್ಲಿದ್ದ ಸ್ಥಿತಿ ಧರ್ಮಸ್ಥಳದಲ್ಲಿ ಕಂಡು ಬಂತು. ಯಾವುದೇ ಅಹಿತಕರ ಘಟನೆಗಳು ಸಂಭವಿಸಿಲ್ಲ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು