News Karnataka Kannada
Tuesday, April 23 2024
Cricket
ಕರಾವಳಿ

ಬೆಳ್ತಂಗಡಿಯ ಕೃಷಿಕನಿಂದ ವಿಶೇಷ ವೃಕ್ಷಾ ಬಂಧನ ಆಚರಣೆ

Photo Credit :

ಬೆಳ್ತಂಗಡಿಯ ಕೃಷಿಕನಿಂದ ವಿಶೇಷ ವೃಕ್ಷಾ ಬಂಧನ ಆಚರಣೆ

ಬೆಳ್ತಂಗಡಿ: ನಾವು ಪ್ರಕೃತಿಯ ಜೊತೆ ಹತ್ತಿರ ಆಗಬೇಕು, ಸ್ನೇಹ ಸಂಪರ್ಕ ಬೆಳೆಸಬೇಕು ಎಂಬ ಸದುದ್ದೇಶವನ್ನು ಇಟ್ಟುಕೊಂಡಿರುವ ಬೆಳ್ತಂಗಡಿ ಮುಂಡಾಜೆ ಯ ಕೃಷಿಕ, ಸಾಮಾಜಿಕ ಚಿಂತಕ, ಪರಿಸರ ಪ್ರೇಮಿ ಸಚಿನ್ ಭಿಡೆ ಅವರು ಈ ರಕ್ಷಾ ಬಂಧನ ಉತ್ಸವವನ್ನು ಮರ, ಗಿಡಗಳಿಗೆ ರಕ್ಷೆಯನ್ನು ಕಟ್ಟುವ ಮೂಲಕ ‘ ವೃಕ್ಷಾ ಬಂಧನ ‘ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಿರುವುದು ಪರಿಸರ ಪ್ರೇಮಿಗಳ ಶ್ಲಾಘನೆಗೆ ಪಾತ್ರವಾಗಿದೆ.

ಸಮಾಜಕ್ಕೆ ಮತ್ತು ನಿಸರ್ಗಕ್ಕೆ ಒಳಿತು ಆಗುವ ಹಿತ ದೃಷ್ಟಿಯಿಂದ ಎಲ್ಲರಿಗೂ ಪ್ರೇರಣೆ ಆಗುವಂತೆ ಹೊಸ ಸಂದೇಶವನ್ನು ಸಾರುವ ಪ್ರಯತ್ನ ಮಾಡಿದ್ದಾರೆ.

ಸಚಿನ್ ಅವರು ಇತ್ತೀಚೆಗೆ ತನ್ನ ನಾಲ್ಕೂವರೆ ಎಕರೆ ಕೃಷಿ ಜಾಗವನ್ನು ‘ ಕಾರ್ಗಿಲ್ ವನ ‘ ಎಂಬ ಅಡವಿ ನಿರ್ಮಾಣ ಮಾಡಿ ದೇಶಕ್ಕೆ ಮತ್ತು ಪರಿಸರಕ್ಕೆ ವಿನೂತನ ಕೊಡುಗೆ ನೀಡಿದ್ದಾರೆ. ಇಂದು ಅದೇ ಕಾರ್ಗಿಲ್ ವನದಲ್ಲಿ ಕಾರ್ಗಿಲ್ ಹುತಾತ್ಮರ ನೆನಪಿನ ಸ್ಮರಣಾರ್ಥವಾಗಿ ಅಲ್ಲಿನ ಗಿಡಗಳಿಗೆ ರಕ್ಷೆ ಕಟ್ಟುವ ಮೂಲಕ ರಕ್ಷಾ ಬಂಧನಕ್ಕೆ ವಿಶೇಷ ಮೆರುಗು ನೀಡಿದ್ದಾರೆ. ನಾವು ಗಿಡ, ಮರಗಳ ಜೊತೆಗೂ ಅವುಗಳೂ ನಮ್ಮಂತೆಯೇ ಎಂದು ಸ್ನೇಹ, ಪ್ರೀತಿ, ಕಾಳಜಿ, ರಕ್ಷಣೆ ಇಟ್ಟುಕೊಳ್ಳಬೇಕು ಎಂಬುದು ಇದರ ಮೂಲ ಉದ್ದೇಶವಾಗಿದೆ. ಗಿಡ, ಮರಗಳ ಜೊತೆ ನಾವು ಪ್ರೀತಿ, ಒಡನಾಟ, ಸಂಬಂಧ ಇಟ್ಟು ಕೊಳ್ಳದೆ ಹೋದರೆ ಭವಿಷ್ಯದಲ್ಲಿ ಇನ್ನಷ್ಟು ಪ್ರಾಕೃತಿಕ ದುರಂತಗಳನ್ನು ಅನುಭವಿಸಲೇ ಬೇಕು ಎಂಬ ಸಂದೇಶದ ಜೊತೆ ಎಚ್ಚರಿಕೆಯೂ ಇದರ ಹಿಂದೆ ಇದೆ. ಕಾರ್ಗಿಲ್ ವನದ ಉದ್ಘಾಟನೆಗೆ ನಮ್ಮ ದೇಶದ ಸೈನಿಕರನ್ನು ಕರೆಸಿ ಅವರಿಂದಲೇ ಉದ್ಘಾಟನೆ ಮಾಡಿದ ವಿಶಿಷ್ಟ ರೀತಿಯಲ್ಲೇ ಇಂದು ಈ ‘ ವೃಕ್ಷ ರಕ್ಷಾ ಬಂಧನ ‘ ಕಾರ್ಯಕ್ರಮಕ್ಕೆ ಮುಂಡಾಜೆ ಗ್ರಾಮ ಕೊರೋನ ವಾರಿಯರ್ಸ್ ಆಶಾ ಕಾರ್ಯ ಕರ್ತೆಯರಾದ ಗಾಯತ್ರಿ, ಶಶಿ, ಚಂದ್ರಾವತಿ, ಜಯಂತಿ ಯವರು ತೆಂಗಿನ ಮರದ ಗರಿಯನ್ನು ವಿನ್ಯಾಸ ಗೊಳಿಸಿ ಅದನ್ನೇ ರಕ್ಷಾ ಬಂಧನ ವನ್ನಾಗಿ ಗಿಡಗಳಿಗೆ ಕಟ್ಟಿದ್ದಾರೆ. ಊರಿಡೀ ಆಗಿರುವ ರಕ್ಷಾ ಬಂಧನಕ್ಕಿಂತ ವಿಭಿನ್ನವಾಗಿ ಪ್ರಕೃತಿ ಸಂರಕ್ಷಣಾ ರೀತಿಯಲ್ಲಿ ಮರ, ಗಿಡಗಳು ಈ ಭೂಮಿಯ ಪ್ರತ್ಯಕ್ಷ ದೇವರು ಮತ್ತು ನಮ್ಮಂತೆಯೇ ಜೀವಿಗಳಾಗಿದ್ದು ನಮ್ಮ ಬದುಕಿಗೆ ಚೇತನಾ ಶಕ್ತಿ ನೀಡುವ ಒಡನಾಡಿಗಳು ಅವುಗಳನ್ನು ರಕ್ಷಿಸಬೇಕು ಎಂಬ ಧ್ಯೇಯ ಸಂದೇಶ ದೊಂದಿಗೆ ಈ ಕಾರ್ಯಕ್ರಮ ಸಾರ್ಥಕತೆ ಪಡೆದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು