News Karnataka Kannada
Thursday, April 18 2024
Cricket
ಕರಾವಳಿ

ಬಾಲಕಿಗೆ ಲೈಂಗಿಕ ಕಿರುಕುಳ: ತೋಟದ ಮಾಲಕನ ಸಹಿತ ಇಬ್ಬರ ಬಂಧನ

Photo Credit :

ಬಾಲಕಿಗೆ ಲೈಂಗಿಕ ಕಿರುಕುಳ: ತೋಟದ ಮಾಲಕನ ಸಹಿತ ಇಬ್ಬರ ಬಂಧನ

ಬೆಳ್ತಂಗಡಿ: ತಾಯಿಯೊಂದಿಗೆ ಕೆಲಸಕ್ಕೆಂದು ತೋಟಕ್ಕೆ ಬಂದ ಬಾಲಕಿಯ ಮೇಲೆ ತೋಟದ ಮಾಲಿಕ ಹಾಗೂ ಆತನ ಸಹಾಯಕ ಲೈಂಗಿಕ ದೌರ್ಜನ್ಯವೆಸಗಿದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು ಆರೋಪಿಗಳಿಬ್ಬರನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳು ತೋಟದ ಮಾಲಿಕ ಕಳೆಂಜ ಗ್ರಾಮದ ನಿವಾಸಿ ರೆಜಿಮೋನು ಹಾಗೂ ಆತನ ಸಹಾಯಕ ಕೃಷ್ಣ ಎಂಬಾತನಾಗಿದ್ದಾನೆ.

ಚಾರ್ಮಾಡಿ ಮೂಲದ ದಲಿತ ಮಹಿಳೆ ತಾಲೂಕಿನ ಕಳಂಜ ಗ್ರಾಮದ ಬಳ್ಕಾಜೆ ರೆಜಿಮೋನು ಎಂಬವರ ತೋಟದ ಕೆಲಸಕ್ಕೆಂದು ಬರುತ್ತಿದ್ದರು.

ಕಳೆದ ಮೇ ತಿಂಗಳಿನಲ್ಲಿ ಈಕೆಯೊಂದಿಗೆ ಆಕೆಯ ಅಪ್ರಾಪ್ತ ವಯಸ್ಸಿನ ಮಗಳೂ ಈ ತೋಟಕ್ಕೆ ಬಂದಿದ್ದಳು. ಇಲ್ಲಿ ತಾಯಿಯೊಂದಿಗೆ ಎರಡು ಮೂರು ದಿನ ತಂಗಿದ್ದಳು. ಈ ಸಮಯದಲ್ಲಿ ರೆಜಿಮೋನು ಮತ್ತು ಆತನ ಸ್ನೇಹಿತ ಕೃಷ್ಣನ ಜೊತೆ ಸೇರಿ ಮಹಿಳೆಯ ಜೊತೆ ಇದ್ದ 14 ವರ್ಷದ ಅಪ್ರಾಪ್ತ ಬಾಲಕಿಗೆ ಲೈಂಗಿಕವಾಗಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಆರೋಪಿ ಕುಡಿದು ಬಂದು ಕೈಯಿಂದ ಹೊಡೆಯುತ್ತಿದ್ದನು. ಅಲ್ಲದೆ ರೆಜಿಮೊನು ಮನೆಯಲ್ಲಿ ಕೆಲಸಕ್ಕಿದ್ದ ಕೃಷ್ಣ ಎಂಬಾತನು ಈ ವಿಷಯವನ್ನು ಬೇರೆಯವರಿಗೆ ಹೇಳಿದರೆ ನಿನ್ನನ್ನು ಸಾಯಿಸುತ್ತೇನೆ ಎಂದು ಬಾಲಕಿಗೆ ಬೆದರಿಕೆ ಹಾಕಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಕೆಲತಿಂಗಳ ಹಿಂದೆಯೇ ದಲಿತ ಮಹಿಳೆ ವಿಷ ಸೇವಿಸಿ ಕೆಲಸ ಮಾಡುವ ತೋಟದಲ್ಲಿಯೇ ಮೃತಪಟ್ಟಿದ್ದು, ನಂತರ ಮಾನಸಿಕವಾಗಿ ನೊಂದಿದ್ದ ಬಾಲಕಿ ಇದನ್ನು ಯಾರಬಳಿಯೂ ಹೇಳಿರಲಿಲ್ಲ. ಇದೀಗ ಆಕೆ ನಡೆದ ಎಲ್ಲ ಘಟನೆಗಳನ್ನು ಅಣ್ಣ ಹಾಗೂ ಚಿಕ್ಕಮ್ಮರವರಿಗೆ ತಿಳಿಸಿದ್ದಾಳೆ. ಬಾಲಕಿಯ ಹೇಳಿಕೆಯ ಅನುಸಾರ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಕಲಂ 354, 323, 504, 506 ಜೊತೆಗೆ 34 ಐಪಿಸಿ ಮತ್ತು ಕಲಂ 8 ಪೊಕ್ಸೊ ಕಾಯ್ದೆ 2012 ಮತ್ತು ಕಲಂ 3(1)(ತಿ)(i), 3(2)(v)(ಚಿ) ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ಕಾಯ್ದೆ 2015 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಇದೀಗ ಮಹಿಳೆಯ ಆತ್ಮಹತ್ಯೆಯ ಬಗ್ಗೆಯೂ ಕುಟುಂಬದ ಸದಸ್ಯರು ಅನುಮಾನ ವ್ಯಕ್ತಪಡಿಸುತ್ತಿದ್ದು ಈ ಬಗ್ಗೆಯೂ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು