News Karnataka Kannada
Thursday, April 18 2024
Cricket
ಕರಾವಳಿ

ಬಂಟ್ವಾಳ: ಪಿಎಸ್ ಐ ಹೆಸರಿನಲ್ಲಿ ನಕಲಿ ಪೇಸ್ ಬುಕ್ ತೆರೆದು ಹಣಕ್ಕೆ ಬೇಡಿಕೆ

Photo Credit :

ಬಂಟ್ವಾಳ: ಪಿಎಸ್ ಐ ಹೆಸರಿನಲ್ಲಿ ನಕಲಿ ಪೇಸ್ ಬುಕ್ ತೆರೆದು ಹಣಕ್ಕೆ ಬೇಡಿಕೆ

ಬಂಟ್ವಾಳ: ಬಂಟ್ವಾಳ ಗ್ರಾಮಾಂತರ ಠಾಣಾ ಪಿಎಸ್ಐ ಪ್ರಸನ್ನ ಅವರ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದು, ಅದರ ಮೂಲಕ ಚಾಟ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿರುವುದು ಬೆಳಕಿಗೆ ಬಂದಿದೆ. ಘಟನೆಯ ಕುರಿತು ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಲಾಗಿದೆ.

ಈ ಕುರಿತು ಸ್ವತಃ ಪಿಎಸ್ಐ ಪ್ರಸನ್ನ ಅವರೇ ತಮ್ಮ ಫೇಸ್ ಬುಕ್ ಅಕೌಂಟ್ ನಲ್ಲಿ ಬರೆದುಕೊಂಡಿದ್ದು, ಸ್ನೆಹಿತರೇ ನನ್ನ ಹೆಸರಿನಲ್ಲಿ ಯಾರೋ ಫೇಕ್ ಅಕೌಂಟ್ ತೆರೆದು ಫ್ರೆಂಡ್ ರಿಕ್ವೆಸ್ಟ್ ಕಳುಹಿಸುತ್ತಿದ್ದಾರೆ. ದಯವಿಟ್ಟು ಅದನ್ನ ಅಕ್ಸೆಪ್ಟ್ ಮಾಡಬೇಡಿ ಮತ್ತು ಅವರಿಂದ ಮೊಸಕ್ಕೆ ಒಳಗಾಗಬೇಡಿ ನಿಮಗೆ ಯಾವುದಾದರು ಮೆಸೇಜ್ ಕಳುಹಿಸಿದರೆ ನನ್ನ ಗಮನಕ್ಕೆ ತನ್ನಿ ಎಂದು ಪೋಸ್ಟ್ ಮೂಲಕ ಮನವಿ ಮಾಡಿದ್ದಾರೆ.

ನಕಲಿ ಪೇಸ್ ಬುಕ್ ಖಾತೆಯ ಮೂಲಕ ಮೆಸೆಂಜರ್ ನಲ್ಲಿ ಪ್ರಸನ್ನ ಅವರ ಸ್ನೇಹಿತರಿಗೆ ಮೆಸೇಜ್ ಹಾಕಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಕುರಿತು ಅನುಮಾನಗೊಂಡ ಸ್ನೇಹಿತರು ಪ್ರಸನ್ನ ಅವರಿಗೆ ವಿಷಯ ತಿಳಿಸಿದ್ದು, ಕೂಡಲೇ ಅವರು ಫೇಸ್ ಬುಕ್ ನ ನಕಲಿ ಖಾತೆಯನ್ನು ಬ್ಲಾಕ್ ಮಾಡಿಸಿದ್ದಾರೆ. ಪೊಲೀಸರ ಪ್ರಾಥಮಿಕ ತನಿಖೆಯಿಂದ ಉತ್ತರ ಭಾರತ ಮೂಲದ ವ್ಯಕ್ತಿ ನಕಲಿ ಖಾತೆ ತೆರೆದಿರುವ ಮಾಹಿತಿ ತಿಳಿದು ಬಂದಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು