News Karnataka Kannada
Wednesday, April 24 2024
Cricket
ಕರಾವಳಿ

ಪಶ್ಚಿಮ ಬಂಗಾಲದಲ್ಲಿ ನಡೆಯುತ್ತಿರುವ ಹಿಂಸಾಚಾರದ ವಿರುದ್ಧ ಮೌನ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು

Photo Credit :

ಪಶ್ಚಿಮ ಬಂಗಾಲದಲ್ಲಿ ನಡೆಯುತ್ತಿರುವ ಹಿಂಸಾಚಾರದ ವಿರುದ್ಧ ಮೌನ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು

ಕಾವೂರು : ಪಶ್ಚಿಮ ಬಂಗಾಲದಲ್ಲಿ ವಿಧಾನ ಸಭೆ ಚುನಾವಣೆ ಆದ ಬಳಿಕ ರಾಜ್ಯದಲ್ಲಿ ಅಭೂತಪೂರ್ವ ಸ್ಥಾನ ಗಳಿಸಿ ಸಂಭ್ರಮದಲ್ಲಿದ್ದ ಬಿಜೆಪಿ ಕಾರ್ಯಕರ್ತರ ಮನೆಗೆ ನುಗ್ಗಿ ಹತ್ಯೆಗೈದು ಆಸ್ತಿ ಪಾಸ್ತಿ ಹಾನಿ ಮಾಡಿರುವುದನ್ನು ವಿರೋಧಿಸಿ ಮಂಗಳೂರು ಉತ್ತರ ಮಂಡಲ ಬಿಜೆಪಿ ವತಿಯಿಂದ ಕಾವೂರು ಬಿಜೆಪಿ ಕಚೇರಿ ಮುಂಭಾಗ ಬುಧವಾರ ಕೋವಿಡ್ ನಿಯಮ ಪಾಲಿಸಿ 

ಮೌನ ಪ್ರತಿಭಟನೆ ನಡೆಯಿತು.

 

ಶಾಸಕ ಡಾ.ಭರತ್ ಶೆಟ್ಟಿ ಸಹಿತ ಕಾರ್ಯಕರ್ತರು ಕಪ್ಪು ಪಟ್ಟಿ ಧರಿಸಿ ಕರಾಳ ಕ್ರೌರ್ಯದ ಬಗ್ಗೆ ಪ್ರತಿಭಟಿಸಿದರು.

ಬಳಿಕ ಮಾತನಾಡಿದ ಅವರು ಪ.ಬಂಗಾಳದಲ್ಲಿ ಬಿಜೆಪಿ 2ನೇ ಸ್ಥಾದಲ್ಲಿದ್ದು, 70 ಸ್ಥಾನ ಗಳಿಸಿದೆ.

90 ಕಡೆಗಳಲ್ಲಿ 1000ಸಾವಿರ ಅಂತರದ ವೀರೋಚಿತ ಸೋಲು ಕಂಡಿದೆ,ಇದನ್ನು ಸಹಿಸದೆ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ  ಟಿಎಂಸಿ ಗೂಂಡಾಗಳು ಕ್ರೌರ್ಯ ಮೆರೆದಿದ್ದಾರೆ. ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ್ದಾರೆ. ಹಿಂದೂಗಳ ಮೇಲೆ ದ್ವೇಷದ ಹಲ್ಲೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

 

ಚುನಾವಣೆಯಲ್ಲಿ ಪೈಪೋಟಿ ಸಹಜ.

ಬಳಿಕ ಯಾವುದೇ ದ್ವೇಷ ,ವೈಯುಕ್ತಿಕ ಹೋರಾಟ ,ಹೊಡೆದಾಟದಲ್ಲಿ ಬಿಜೆಪಿ ನಂಬಿಕೆ ಇರಿಸಿಲ್ಲ.

ಇದೀಗ ಟಿಎಂಸಿ ಕಾರ್ಯಕರ್ತರ ಹಿಂಸಾತ್ಮಕ ಪ್ರಚೋದನೆಯಿಂದ ಪಶ್ಚಿಮ ಬಂಗಾಲದ ಹೊರಗೂ ಟಿಎಂಸಿ ಶಾಸಕರು,ಸಂಸದರಿಗೆ ಭದ್ರತೆಯ ಕೊರತೆ ಎದುರಾಗಬಹುದು .ದೇಶಕ್ಕೆ ಹಿಂಸೆಯ ಸಂದೇಶ ನೀಡಿ ಪ್ರಚೋದಿಸಿದ ಆ ಪಕ್ಷದ ವಿರುದ್ದ ದೇಶದಾದ್ಯಂತ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.

ಈ ಪ್ರತಿಭಟನೆಯಲ್ಲಿ ಶಾಸಕರಾದ ಡಾಕ್ಟರ್ ಭರತ್ ಶೆಟ್ಟಿ, ಮಂಡಲದ ಅಧ್ಯಕ್ಷರಾದ ತಿಲಕ್ ರಾಜ್ ಕೃಷ್ಣಾಪುರ, ಉಪ ಮಹಾಪೌರರಾದ ಸುಮಂಗಲ ರಾವ್, ಮಂಡಲದ ಪದಾಧಿಕಾರಿಗಳು, ಮಹಾನಗರ ಪಾಲಿಕೆಯ ಸದಸ್ಯರು ಭಾಗವಹಿಸಿದ್ದರು.

 

ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಫಲಿತಾಂಶದ ಬಳಿಕ ಟಿಎಂಸಿ ಕಾರ್ಯಕರ್ತರು ನಡೆಸುತ್ತಿರುವ ಭೀಕರ ಹಿಂಸಾಚಾರವನ್ನು ಖಂಡಿಸಿ ಬಿಜೆಪಿ ಜಿಲ್ಲಾ ಸಮಿತಿ ಸೂಚನೆಯ ಮೇರೆಗೆ ಬಿಜೆಪಿ ಮಂಗಳೂರು ದಕ್ಷಿಣ ಮಂಡಲದ ವತಿಯಿಂದ ಮೌನ ಪ್ರತಿಭಟನೆ ಇಂದು (05-05-2021) ನಡೆಯಿತು.

 

 ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ಶ್ರೀ ಸುಧರ್ಶನ್ ಎಂ . ಮಂಗಳೂರು ನಗರ ದಕ್ಷಿಣ ಮಂಡಲ ಅಧ್ಯಕ್ಷರಾದ ವಿಜಯ ಕುಮಾರ್ ಶೆಟ್ಟಿ,ಪ್ರಧಾನ ಕಾರ್ಯದರ್ಶಿ ಸುರೇಂದ್ರ ಜೆ , ಉಪಾದ್ಯಕ್ಶರಾದ ರಮೇಶ್ ಕಂಡೆಟ್ಟು, ಮಹಾ ಶಕ್ತಿ ಕೇಂದ್ರ ಅಧ್ಯಕ್ಷರುಗಳಾದ ದೀಪಕ್ ಪೈ , ರಮೇಶ್ ಹೆಗ್ಡೆ , ಅಜಯ್ ಕುಲಶೇಕರ್ ಮಂಡಲ್ ಕಾರ್ಯದರ್ಶಿಗಳಾದ ಲಲ್ಲೇಶ್ ಕುಮಾರ್ , ವಿನೋದ್ ಮೆಂಡನ್ , ಮ ನ ಪಾ ಲೆಕ್ಕ ಪತ್ರ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀಮತಿ ಲೀಲಾವತಿ ಪ್ರಕಾಶ್ , ಮ ನ ಪಾ ಸದಸ್ಯರಾದ ಭಾಸ್ಕರ್ ಚಂದ್ರ ಶೆಟ್ಟಿ, ಜಗದೀಶ್ ಶೆಟ್ಟಿ, ಪೂರ್ಣಿಮಾ ಎಂ , ಶ್ರೀಮತಿ ಜಯಶ್ರೀ ಕುಡ್ವ, ಎಸ್ ಸಿ ಮೋರ್ಚಾದ ರಘುವೀರ್ ಸೂಟರ್ ಪೇಟೆ ಮಂಡಲ ಸಾಮಾಜಿಕ ಜಾಲ ತಾಣ ಪ್ರಕೋಷ್ಠದ ಪ್ರಮುಖರಾದ ಅಶ್ವಿತ್ ಕೊಟ್ಟಾರಿ ,ಅಲ್ಪ ಸಂಖ್ಯಾತ ಮೋರ್ಚಾ ಅಧ್ಯಕ್ಷರಾದ ಫೆಡ್ರಿಕ್ , ಯುವ ಮೋರ್ಚಾದ ಸಚಿನ್ ಶೆಟ್ಟಿ, ಶುಷಾಂತ್, ಜೀವನ್ ,ಕಾರ್ಯಾಲಯ ಪ್ರಮುಖ್ ಗುರುಚರಣ್ ಮುಂತಾದವರು ಉಪಸ್ಥಿತರಿದ್ದರು .

 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು