News Karnataka Kannada
Monday, April 22 2024
Cricket
ಕರಾವಳಿ

ನಶಾ ಮುಕ್ತ ಭಾರತಕ್ಕಾಗಿ ಎಬಿವಿಪಿ ಸಂಕಲ್ಪ ಕಾರ್ಯಕ್ರಮಕ್ಕೆ ಚಾಲನೆ

Photo Credit :

ನಶಾ ಮುಕ್ತ ಭಾರತಕ್ಕಾಗಿ ಎಬಿವಿಪಿ ಸಂಕಲ್ಪ ಕಾರ್ಯಕ್ರಮಕ್ಕೆ ಚಾಲನೆ

ಬೆಳ್ತಂಗಡಿ: ವಿದ್ಯಾರ್ಥಿಗಳಿಗೆ ಡ್ರಗ್ಸ್ ಪೆಡ್ಲರ್‌ಗಳ ಕುರಿತು ಮಾಹಿತಿ ಸಿಕ್ಕಲ್ಲಿ ತಕ್ಷಣ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು. ಒಬ್ಬ ವಿದ್ಯಾರ್ಥಿಯ ಮಾಹಿತಿಯಿಂದ ಅನೇಕ ವಿದ್ಯಾರ್ಥಿಗಳನ್ನು ಜಾಲದಿಂದ ರಕ್ಷಿಸಬಹುದಾಗಿದೆ ಎಂದು ಶಾಸಕ ಹರೀಶ ಪೂಂಜ ವಿನಂತಿಸಿದರು.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ) ವತಿಯಿಂದ ನಶಾ ಮುಕ್ತ ಭಾರತಕ್ಕಾಗಿ ಎಬಿವಿಪಿ ಸಂಕಲ್ಪ ಸಹಿ ಸಂಗ್ರಹ ಅಭಿಯಾನ ಕಾರ್ಯಕ್ರಮಕ್ಕೆ ಸೆ.17ರಂದು ಬೆಳ್ತಂಗಡಿ ಬಸ್ ನಿಲ್ದಾಣದ ಬಳಿ ಚಾಲನೆ ನೀಡಿ ಅವರು ಮಾತನಾಡಿದರು.

ಮಾದಕ ವಸ್ತುಗಳ ಜಾಲ ದೇಶವ್ಯಾಪಿ ಹಬ್ಬುತ್ತಿರುವ ನಡುವೆಯೇ ಇದರ ನಿರ್ಮೂಲನೆಗೆ ಜಾಗೃತಿ ಮೂಡಿಸುವ ಜತೆಗೆ ಹೋರಾಟಗಳನ್ನು ಸಂಘಟಿಸಿ ಮಾದಕ ವ್ಯಸನ ಮುಕ್ತ ಕಾಲೇಜು ಕ್ಯಾಂಪಸ್‌ಗಳನ್ನ ಮಾಡಿದ ಕೀರ್ತಿ ವಿದ್ಯಾರ್ಥಿ ಪರಿಷತ್‌ಗೆ ಸಲ್ಲಬೇಕು. ರಾಷ್ಟ್ರೀಯ ಐಕ್ಯತೆಗೆ ಧಕ್ಕೆಬಂದಲ್ಲಿ ರಾಜಿ ಇಲ್ಲದ ಹೋರಾಟ ನಡೆಸಿದೆ.

ಸಿನಿಮಾದ ಹೆಸರಲ್ಲಿ ತಾರೆಯರು ನಡೆಸುತ್ತಿರುವ ಡ್ರಗ್ಸ್ ಜಾಲದ ತನಿಖೆಗೆ ಈ ಹಿಂದೆ ಯಾವುದೇ ಸರಕಾರ ಮುಂದಾಗಿರಲಿಲ್ಲ. ಆದರೆ ಬಿ.ಎಸ್. ಯಡಿಯೂರಪ್ಪ ನೇತೃತ್ವದ ರಾಜ್ಯ ಸರಕಾರ ಸಿನಿಮಾರಂಗದಲ್ಲಿರುವವರನ್ನು ತನಿಖೆಗೊಳಪಡಿಸಿ ಇತಿಹಾಸ ಸೃಷ್ಟಿಸಿದೆ. ಪ್ರಭಾವಿಗಳು ಸಿನಿತಾರೆಯರನ್ನು ಮುಂದಿಟ್ಟು ಯುವಶಕ್ತಿಯ ಮನಸ್ಸನ್ನು ಕದಡುವ ಕೆಲಸವಾಗುತ್ತಿದೆ. ಇದೊಂದು ಡ್ರಗ್ಸ್ ಭಯೋತ್ಪಾದನೆಯಾಗಿದ್ದು, ರಾಜ್ಯ ಸರಕಾರ ಹಾಗೂ ಗೃಹಸಚಿವರು ಸೂಕ್ತ ತನಿಖೆ ನಡೆಸಿ ಆರೋಪಿಗಳಿಗೆ ತಕ್ಕ ಶಿಕ್ಷೆ ವಿಧಿಸುವ ಕೆಲಸಮಾಡಲಿದೆ ಎಂಬ ವಿಶ್ವಾಸವಿದೆ.

ಮುಂದಿನ ದಿನಗಳಲ್ಲಿ ವಿದ್ಯಾರ್ಥಿ ಸಮುದಾಯದಲ್ಲಿ ವಿನಂತಿಸುವುದೇನೆಂದರೆ ಡ್ರಗ್ಸ್ ಜಾಲದ ಕುರಿತು ತಕ್ಷಣ ಕ್ರಮಕೈಗೊಳ್ಳುವಂತೆ ಕ್ಷೇತ್ರದ ಎಲ್ಲಾ ಠಾಣೆಗಳು ಸೂಚನೆ ನೀಡುವುದಾಗಿ ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಮಾತನಾಡಿ, ಸಮಾಜದಲ್ಲಿ ಬದಲಾವಣೆ ತರಬೇಕೆಂಬ ವಾತಾವರಣ ನಿರ್ಮಾಣವಾದಾಗ ವಿದ್ಯಾರ್ಥಿ ಸಮುದಾಯ ಆಯಾ ಕಾಲದಲ್ಲಿ ದನಿ ಎತ್ತಿದೆ. ಎಬಿವಿಪಿ ಧ್ಯೇಯವೇ ಜ್ಞಾನ ಶೀಲ ಏಕತೆ, ಈ ಹಿನ್ನೆಲೆಯಲ್ಲಿ ಸಮಾಜಕ್ಕೆ ದೇಶಕ್ಕೆ ಕಂಟಕವಾಗಿರುವ ಡ್ರಗ್ಸ್ ಜಾಲದ ನಿರ್ಮೂಲನೆಗೆ ಸಂಘಟಿತ ಹೋರಾಟದ ಅವಶ್ಯಕತೆ ಇದೆ ಎಂದು ಹೇಳಿದರು.

ಎಬಿವಿಪಿ ರಾಜ್ಯ ಉಪಾಧ್ಯಕ್ಷ ಕೇಶವ ಬಂಗೇರ, ಧರ್ಮಸ್ಥಳ ಠಾಣಾ ಉಪನಿರೀಕ್ಷಕ ಪವನ್ ನಾಯಕ್, ಬಿಜೆಪಿ ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿ, ವಕೀಲ ಯತೀಶ್ ಶೆಟ್ಟಿ, ಎಬಿವಿಪಿ ವಿಭಾಗ ಸಂಚಾಲಕ ಆಶೀಶ್ ಅಜ್ಜಿಬೆಟ್ಟು, ಎಬಿವಿಪಿ ಬೆಳ್ತಂಗಡಿ ನಗರ ಕಾರ್ಯದರ್ಶಿ ಸುಮಂತ್, ಎಬಿವಿಪಿ ಪ್ರಮುಖರಾದ ಪ್ರಥ್ವಿಶ್, ಶರತ್ ಎಬಿವಿಪಿ ಹಿರಿಯ ಕಾರ್ಯಕರ್ತರಾದ ಪ್ರಜ್ವಲ್, ಜಗದೀಶ್, ವಿನೋದ್ ರಾಜ್, ತೀಕ್ಷಿತ್ ಉಪಸ್ಥಿತರಿದ್ದರು.

ತಾಲೂಕಿನ ವಿವಿಧ ಕ್ಷೇತ್ರದ ಗಣ್ಯರು ಹಾಗೂ ಸಾರ್ವಜನಿಕರು ಸಹಿ ಹಾಕುವ ಮೂಲಕ ಎಬಿವಿಪಿ ಅಭಿಯಾನಕ್ಕೆ ಬೆಂಬಲ ಸೂಚಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು