News Karnataka Kannada
Saturday, April 20 2024
Cricket
ಕರಾವಳಿ

ನವಮಂಗಳೂರು ಬಂದರಿಗೆ ಕುವೈತ್ ನಿಂದ ಬಂತು, ಆಕ್ಸಿಜನ್ ಹೊತ್ತ ಹಡಗು!

Photo Credit :

ನವಮಂಗಳೂರು ಬಂದರಿಗೆ ಕುವೈತ್ ನಿಂದ ಬಂತು, ಆಕ್ಸಿಜನ್ ಹೊತ್ತ ಹಡಗು!

ಪಣಂಬೂರು: ಭಾರತದೊಂದಿಗಿನ ಸಧೃಡ ಅಂತರಾಷ್ಟ್ರೀಯ ಭಾಂದವ್ಯದ ದ್ಯೋತಕವಾಗಿ ಕುವೈತ್ ಸರಕಾರ ಎರಡು ಕಂಟೈನರ್ ಗಳಲ್ಲಿ ಮೆಡಿಕಲ್, ಆಕ್ಸಿಜನ್, ಟ್ಯಾಂಕ್ಸ್, ಆಕ್ಸಿಜನ್ ಕಾನ್ಸೆನ್ಟ್ರೇಟರ್ ಪೂರೈಕೆಗೆ ನಿರ್ಧರಿಸಿದ್ದು, ಒಂದು ಹಡಗು ಸೋಮವಾರ ನವಮಂಗಳೂರು ಬಂದರಿಗೆ ಆಗಮಿಸಿತು.

ಮಂಗಳೂರು ನಗರ ಉತ್ತರ ಶಾಸಕರಾದ ಡಾ.ವೈ ಭರತ್ ಶೆಟ್ಟಿ, ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆವಿ ಹಾಗೂ ಪ್ರಮುಖರು ಹಡಗನ್ನು ಬರಮಾಡಿಕೊಂಡರು. ಮಂಗಳವಾರ ಇನ್ನೆರಡು ಹಡಗುಗಳ ಮೂಲಕ ನಾಲ್ಕು ಕಂಟೈನರ್ ಗಳಲ್ಲಿ ವೈದ್ಯಕೀಯ ಆಮ್ಲಜನಕದ ಪೂರೈಕೆಗೆ ಕುವೈತ್ ಮುಂದಾಗಿದೆ.

ಕುವೈತ್ ಸರಕಾರ ಮತ್ತು ಪ್ರಧಾನಿ ನರೇಂದ್ರ ಮೋದಿಜಿಯವರಿಗೆ ಶಾಸಕ ಡಾ.ವೈ ಭರತ್ ಶೆಟ್ಟಿಯವರು ಧನ್ಯವಾದ ಅರ್ಪಿಸಿದ್ದಾರೆ.

ಈ ವೇಳೆ ಕೆ.ವಿ,ಎನ್ ಎಂಪಿಟಿ ಚೇಯರ್ ಮನ್ ಎ.ವಿ ರಮಣ್, ಕೋಸ್ಟ್ ಗಾರ್ಡ್ ಡಿಐಜಿ ವೆಂಕಟೇಶ್, ಮಾಜಿ ಸಚಿವ ನಾಗರಾಜ ಶೆಟ್ಟಿ, ರೆಡ್ ಕ್ರಾಸ್ ಸಂಸ್ಥೆಯ ಪದಾಧಿಕಾರಿಗಳು , ಉಮಾನಾಥ ಕೋಟ್ಯಾನ್, ಸಹಾಯಕ ಆಯುಕ್ತ ಮದನ್ ಮೋಹನ್, ನೌಕಾಪಡೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು