News Karnataka Kannada
Wednesday, April 24 2024
Cricket
ಕರಾವಳಿ

ದ್ವಿತೀಯ ಪಿಯುಸಿಯಲ್ಲಿ ಆಳ್ವಾಸ್ ಶೇ 99.06%: ರಾಜ್ಯದ ಟಾಪ್‍ಟೆನ್‍ನಲ್ಲಿ 21 ವಿದ್ಯಾರ್ಥಿಗಳು

Photo Credit :

ದ್ವಿತೀಯ ಪಿಯುಸಿಯಲ್ಲಿ ಆಳ್ವಾಸ್ ಶೇ 99.06%: ರಾಜ್ಯದ ಟಾಪ್‍ಟೆನ್‍ನಲ್ಲಿ 21 ವಿದ್ಯಾರ್ಥಿಗಳು

ಮೂಡುಬಿದಿರೆ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜು ಶೇ.99.06 ಫಲಿತಾಂಶ ದಾಖಲಿಸಿದೆ.  ರಾಜ್ಯದ ಟಾಪ್ 10 ಪಟ್ಟಿಯಲ್ಲಿ ಕಾಲೇಜಿನ 21 ವಿದ್ಯಾರ್ಥಿಗಳು ಸ್ಥಾನ ಪಡೆದಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ  ತಿಳಿಸಿದ್ದಾರೆ.

ಕಾಲೇಜಿನಲ್ಲಿ ಪ್ರಸಕ್ತ ವರ್ಷ 2779 ಮಂದಿ ಪರೀಕ್ಷೆ ಬರೆದಿದ್ದು, 2753ಮಂದಿ ಉತ್ತೀರ್ಣರಾಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ 2229 ವಿದ್ಯಾರ್ಥಿಗಳು ಹಾಜರಾಗಿ 2209 ಮಂದಿ ಉತ್ತೀರ್ಣರಾಗಿದ್ದು, ಶೇ.99.10 ಪಲಿತಾಂಶ ದಾಖಲಾಗಿದೆ. ವಾಣಿಜ್ಯ ವಿಭಾಗದಲ್ಲಿ 502 ವಿದ್ಯಾರ್ಥಿಗಳು ಪರೀಕ್ಷೆ ಬರೆದು, 496 ಮಂದಿ ಉತ್ತೀರ್ಣರಾಗಿ ಶೇ. 98.80 ಫಲಿತಾಂಶ ಲಭಿಸಿದೆ. ಕಲಾವಿಭಾಗದಲ್ಲಿ ಪರೀಕ್ಷೆ ಬರೆದ ಎಲ್ಲ 48 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.100 ಫಲಿತಾಂಶ ದಾಖಲಾಗಿದೆ.

ಟಾಪ್ 10ನಲ್ಲಿ 21 ವಿದ್ಯಾರ್ಥಿಗಳು: ಪಿಯುಸಿಯ ಮೂರೂ ವಿಭಾಗಗಳಲ್ಲಿ ಒಟ್ಟು 21 ಮಂದಿ ವಿದ್ಯಾರ್ಥಿಗಳು ರಾಜ್ಯದ ಟಾಪ್ ಟೆನ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. 

ವಿಜ್ಣಾನ ವಿಭಾಗದಲ್ಲಿ ಅನಘ್ರ್ಯ ಕೆ.(592), ರಘುವೀರ್ ಮಠದ(592)ಲಿಶನ್ ಎಎ(592),ಅನಿಲ್ ಬಣ್ಣಿ ಶೆಟ್ಟಿ (589) ಭಗೇಶ್ ಎನ್. ಕೊಡಗನೂರು ,ವಿನಾಯಕ ಜಿ.ಗಡ್ಡಿ , ಸುವೀಕ್ಷ್ ವಿ. ಹೆಗ್ಡೆ, ಮಹೇಶ್ವರಿ ಹೆಚ್,ಸಿ ( ಎಲ್ಲರೂ 588) ಸ್ವಾತಿ ಬಿ ಮಳೆಮಠ್, ಪಿ.ಎಸ್.ರವೀಂದ್ರ, ಧನ್ಯ ಕೆ.ಎನ್,(ಎಲ್ಲರೂ 587)ಅಂಕ ಪಡೆದಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಹರ್ಷ ಜೆ.ಆಚಾರ್ಯ (593) ಈಶ್ವರ್ ವಿಜಯಸ್ವಾಮಿ ಎಲಗಾರ್ (591) ಶ್ರೇಯಾ ಕೆ.ಬಿ (591) ಪ್ರತೀತಾ (590) ರಿಹಾಲ್ ಅಯ್ಯಪ್ಪ ಎಂ.ಎಸ್. (590)

ಶ್ರೀಸಮರ್ಥ, ಭಾರ್ಗವಿ ಬಿ, ಚಂದನ ಡಿ ಹೆಗ್ಡೆ,ಪ್ರಿಯಾಂಕಾ ಜಿ. ಧನ್ಯ ಐಶ್ವರ್ಯಎಂ.(ಎಲ್ಲರೂ 589) ಪಡೆದಿದ್ದಾರೆ.

ವಿಷಯವಾರು ಒಟ್ಟು 747 ಪೇಪರ್‍ಗಳಲ್ಲಿ ಶೇ ನೂರು ಫಲಿತಾಂಶ ದಾಖಲಾಗಿದೆ. ಈ ಪೈಕಿ ಗಣಿತ ವಿಷಯದಲ್ಲಿ 298 ಪೇಪರ್‍ಗಳಲ್ಲಿ ಶೇ ನೂರು ಫಲಿತಾಂಶ ಬಂದಿದೆ. 1767 ಡಿಸ್ಟಿಂಕ್ಷನ್ ಸಹಿತ 2658 ಮಂದಿ ಪ್ರಥಮ ದರ್ಜೆ, 74 ಮಂದಿ ದ್ವಿತೀಯ ಶ್ರೇಣಿ, 21 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಉತೀರ್ಣರಾಗಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ರಮೇಶ್ ಶೆಟ್ಟಿ, ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಂ.ಡಿ, ಕಲಾ ವಿಭಾಗದ ಡೀನ್ ವೇಣುಗೋಪಾಲ ಶೆಟ್ಟಿ, ಪಿ.ಆರ್.ಒ, ಡಾ. ಪದ್ಮನಾಭ ಶೆಣೈ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
193
Deevith S K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು