News Karnataka Kannada
Tuesday, April 23 2024
Cricket
ಕರಾವಳಿ

ತ್ಯಾಜ್ಯ ವಿಲೇವಾರಿ ಎ.ಸಿ. ನೇತೃತ್ವದಲ್ಲಿ ನ.ಪಂ. ಅಧಿಕಾರಿಗಳ ಸಭೆ

Photo Credit :

ತ್ಯಾಜ್ಯ ವಿಲೇವಾರಿ ಎ.ಸಿ. ನೇತೃತ್ವದಲ್ಲಿ ನ.ಪಂ. ಅಧಿಕಾರಿಗಳ ಸಭೆ

ಸುಳ್ಯ: ನಗರ ಪಂಚಾಯಿತಿ ಆವರಣ ಸೇರಿದಂತೆ ನಗರದ ಕೆಲವು ಕಡೆ ಕಸ ತುಂಬಿ ದುರ್ನಾತ ಬೀರುತ್ತಿದ್ದು, ಈ ತ್ಯಾಜ್ಯಗಳನ್ನು ಆಧುನಿಕ ಯಂತ್ರಗಳನ್ನು ಬಳಸಿ ಕಲ್ಚೆರ್ಪೆಯಲ್ಲಿ ವಿಲೇವಾರಿ ಮಾಡಲು ಪುತ್ತೂರು ಸಹಾಯಕ ಕಮಿಷನರ್ ಡಾ.ಯತೀಶ್ ಉಳ್ಳಾಲ್ ನೇತೃತ್ವದಲ್ಲಿ  ಸುಳ್ಯ ತಾಲೂಕು ಕಚೇರಿಯಲ್ಲಿ ನಡೆದ ನ.ಪಂ. ಅಧಿಕಾರಿಗಳ ಸಭೆಯಲ್ಲಿ ನಿರ್ಣಯಿಸಲಾಗಿದೆ.

ನ.ಪಂ. ಆಡಳಿತಾಧಿಕಾರಿ ಹಾಗು ತಹಶೀಲ್ದಾರ್ ಅನಂತಶಂಕರ್, ನ.ಪಂ. ಮುಖ್ಯಾಧಿಕಾರಿ ಎನ್.ಮತ್ತಡಿ ಹಾಗೂ ಇತರ ಅಧಿಕಾರಿಗಳ ಜೊತೆಯಲ್ಲಿ ಚರ್ಚೆ ನಡೆಸಲಾಯಿತು. ಕಲ್ಚೆರ್ಪೆಯಲ್ಲಿರುವ ನಗರ ಪಂಚಾಯಿತಿಯ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಆಧುನಿಕ ಯಂತ್ರಗಗಳನ್ನು ಅಳವಡಿಸಿ ತ್ಯಾಜ್ಯವನ್ನು ವಿಲೇವಾರಿ ಮಾಡುವುದು. ಅಲ್ಲದೆ ಈ ಕುರಿತು ಸ್ಥಳೀಯರೊಂದಿಗೆ ಸಮಾಲೋಚನೆ ನಡೆಸಲು ಎ.ಸಿ.ಯವರು ಸೂಚನೆ ನೀಡಿದರು. ಸಹಾಯಕ ಕಮೀಷನರ್ ಉಪಸ್ಥಿತಿಯಲ್ಲಿ ಕಲ್ಚೆರ್ಪೆಯಲ್ಲಿ ಸಭೆ ನಡೆಸಿ ಊರ ಪ್ರಮುಖರೊಂದಿಗೆ ಚರ್ಚಿಸಲು ಮತ್ತು ಆಧುನಿಕ ಯಂತ್ರಗಳ ಮತ್ತು ತಂತ್ರಜ್ಞಾನದ ಕುರಿತು ಊರವರಿಗೆ ಮನವರಿಕೆ ಮಾಡಿಕೊಡಲು ನಿರ್ಧರಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
180

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು