News Karnataka Kannada
Saturday, April 20 2024
Cricket
ಕರಾವಳಿ

ಡಿಜಿ ಲಾಕರ್‍ ಸಹಿತ ಎಸ್.ಡಿ.ಎಂ.ನ ನೂತನ ಶೈಕ್ಷಣಿಕ ತಾಂತ್ರಿಕ ಸೌಲಭ್ಯಗಳಿಗೆ ಚಾಲನೆ

Photo Credit :

ಡಿಜಿ ಲಾಕರ್‍ ಸಹಿತ ಎಸ್.ಡಿ.ಎಂ.ನ ನೂತನ ಶೈಕ್ಷಣಿಕ ತಾಂತ್ರಿಕ ಸೌಲಭ್ಯಗಳಿಗೆ ಚಾಲನೆ

ಉಜಿರೆ: ಶೈಕ್ಷಣಿಕ ಅಗತ್ಯಗಳಿಗೆ ಅನುಗುಣವಾಗಿ ತಂತ್ರಜ್ಞಾನದ ವಿವಿಧ ವೇದಿಕೆಗಳನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ಮುಂಚೂಣಿಯಲ್ಲಿರುವ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಈ ದಿಸೆಯಲ್ಲಿ ಇದೀಗ ಇಟ್ಟಿರುವ ಮಹತ್ವದ ಪ್ರಯೋಗಗಳಾದ ಡಿಜಿ ಲಾಕರ್, ಇ-ಲೆಕ್ಚರ್ ಹಾಗೂ ಡಿಜಿಟಲ್ ಪ್ರಸರಣ ಕಾರ್ಯವಿಧಾನಗಳಿಗೆ ಸಂಸ್ಥೆಯ ಅಧ್ಯಕ್ಷ ಡಾ.ವೀರೇಂದ್ರ ಹೆಗ್ಗಡೆ ಅವರು ಶನಿವಾರ ಚಾಲನೆ ನೀಡಿದರು.

ಶ್ರೀ ಕ್ಷೇತ್ರ ಧರ್ಮಸ್ಥಳದ ಸನ್ನಿಧಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಹೊಸ ಪ್ರಯೋಗಗಳನ್ನು ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳಿಗೆ ತಂತ್ರಜ್ಞಾನದ ಸಂಪೂರ್ಣ ಪ್ರಯೋಜನ ಲಭಿಸುವಂತಾಗಲಿ ಎಂದು ಹಾರೈಸಿದರು.

ಶೈಕ್ಷಣಿಕ ಪಾತ್ರನಿರ್ವಹಣೆ ವೇಳೆ ತಂತ್ರಜ್ಞಾನದ ಬಳಕೆ ತುಂಬಾ ಅನಿವಾರ್ಯವಾಗಿದೆ. ಗುಣಮಟ್ಟದ ಶಿಕ್ಷಣ ಒದಗಿಸುವಲ್ಲಿ ಇದು ಸಹಾಯಕ ಎಂದು ಅಭಿಪ್ರಾಯಪಟ್ಟರು.

ಡಿಜಿ ಲಾಕರ್ ಕಾಲೇಜಿನ ನೂತನ ವಿಶಿಷ್ಟ ಪ್ರಯೋಗಗಳಲ್ಲಿ ಒಂದಾಗಿದ್ದು, ಇದರಲ್ಲಿ ವಿದ್ಯಾರ್ಥಿಗಳ ಪರೀಕ್ಷಾಂಕ ಪಟ್ಟಿ, ಸಾಧನಾ ಪ್ರಮಾಣ ಪತ್ರ ಹಾಗೂ ಇತರೆ ದೃಢೀಕೃತ ದಾಖಲೆಗಳನ್ನು ಅಳವಡಿಸಲಾಗುತ್ತದೆ. ವಿಶ್ವದ ಯಾವುದೇ ಭಾಗದಲ್ಲಿ ಈ ಡಿಜಿ ಲಾಕರ್ ಮೂಲಕ ದಾಖಲೆಗಳನ್ನು ವಿದ್ಯಾರ್ಥಿಗಳು ಪಡೆಯಬಹುದಾಗಿದೆ. ಈ ದಾಖಲೆಗಳ ಮುದ್ರಿತ ಪ್ರತಿಗಳನ್ನೂ ಪಡೆದುಕೊಳ್ಳಬಹುದಾಗಿದೆ.

ಇ-ಲೆಕ್ಚರ್ ಕೂಡಾ ಕಾಲೇಜಿನ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದು. ಇಲ್ಲಿ ಪಠ್ಯಾಧಾರಿತ ವಿಷಯಗಳನ್ನು ಅಧ್ಯಾಪಕರು ವಿಡಿಯೋ ಕ್ಲಾಸ್ ಮಾದರಿಯಲ್ಲಿ ಪ್ರಸ್ತುತಪಡಿಸುತ್ತಾರೆ. ಹತ್ತು ನಿಮಿಷಗಳ ಈ ವಿಡಿಯೋಗಳನ್ನು ಯುಟ್ಯೂಬ್ ಮೂಲಕ ಅಪ್‍ಲೋಡ್ ಮಾಡಲಾಗುತ್ತಿದ್ದು, ಇದನ್ನು ಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಚಿತವಾಗಿ ಬಳಸಬಹುದಾದ ಅವಕಾಶವಿದೆ. ಲಾಕ್‍ಡೌನ್ ನಂತರದ ಅವಧಿಯಲ್ಲಿ ಈಗಾಗಲೇ 1100ಕ್ಕೂ ಅಧಿಕ ವಿಡಿಯೋಗಳು ಚಿತ್ರೀಕರಿಸಲಾಗಿದೆ. ಈಗಾಗಲೇ ಯುಟ್ಯೂಬ್‍ನಲ್ಲಿ 800ಕ್ಕೂ ಅಧಿಕ ವಿವಿಧ ವಿಷಯಗಳ ವಿಡಿಯೋಗಳು ಲಭ್ಯವಿವೆ.

ಡಿಜಿಟಲ್ ತಂತ್ರಜ್ಞಾನ ಅಳವಡಿಸಿ ಕಾಲೇಜಿನ ಭಿತ್ತಿಪತ್ರಿಕೆಗಳು ಹಾಗೂ ವಾರ್ಷಿಕ ಸಂಚಿಕೆಗಳನ್ನು ರೂಪಿಸುವ ದಿಸೆಯಲ್ಲಿ ಆದ್ಯತೆ ನೀಡಲಾಗುತ್ತಿದ್ದು, ಸುಮಾರು 27 ಭಿತ್ತಿಪತ್ರಿಕೆಗಳನ್ನು ಡಿಜಿಟಲ್ ರೂಪದಲ್ಲಿ ಪ್ರಕಟಿಸಲು ವಿದ್ಯಾರ್ಥಿಗಳು ಕಾರ್ಯನಿರತರಾಗಿದ್ದಾರೆ. ಇದರೊಂದಿಗೆ ಅವರಿಗೆ ಡಿಜಿಟಲ್ ಟೈಪಿಂಗ್, ಫೋಟೋ ಶಾಪ್, ಪುಟವಿನ್ಯಾಸ ಕೌಶಲ್ಯ ಸೇರಿದಂತೆ ಆನ್‍ಲೈನ್ ಪ್ರಸರಣದ ಸಮಗ್ರ ಆಯಾಮಗಳಿಗೆ ಸಂಬಂದಿಸಿದಂತೆ ತರಬೇತಿ ನೀಡುವ ಪ್ರಯತ್ನಗಳನ್ನು ನಡೆಸಲಾಗುತ್ತದೆ.

ಹೇಮಾವತಿ ವಿ. ಹೆಗ್ಗಡೆ, ಸಂಸ್ಥೆಯ ಉಪಾಧ್ಯಕ್ಷರಾದ ಡಿ.ಸುರೇಂದ್ರಕುಮಾರ್, ಪ್ರೊ.ಎಸ್.ಪ್ರಭಾಕರ್, ಕಾರ್ಯದರ್ಶಿಗಳಾದ ಡಿ. ಹರ್ಷೇಂದ್ರಕುಮಾರ್ ಹಾಗೂ ಡಾ.ಬಿ.ಯಶೋವರ್ಮ, ಕಾಲೇಜಿನ ಪ್ರಾಂಶುಪಾಲ ಡಾ.ಸತೀಶ್ಚಂದ್ರ ಎಸ್, ಪರೀಕ್ಷಾಂಗ ಕುಲಸಚಿವ ಪ್ರೊ.ಶಾಂತಿಪ್ರಕಾಶ್, ಆಡಳಿತಾತ್ಮಕ ಕುಲಸಚಿವ ಡಾ.ಸಂಪತ್‍ಕುಮಾರ್, ಡಾ.ಕುಮಾರ್ ಹೆಗಡೆ, ಪ್ರೊ.ಎಸ್.ಎನ್.ಕಾಕತ್ಕರ್, ಪ್ರೊ.ಭಾಸ್ಕರ ಹೆಗಡೆ, ಸುನೀಲ್ ಹೆಗ್ಡೆ ಉಪಸ್ಥಿತರಿದ್ದರು.

ಎಸ್ ಡಿ ಎಂ ಡಿ ಜಿ ಲಾಕರ್ ತಂತ್ರಾಂಶವನ್ನು ರೂಪಿಸಿದ ಎಸ್.ಡಿ.ಎಂ.ನ ಸಾಫ್ಟ್‍ವೇರ್ ಸೆಲ್‍ನ ಅಮಿತ್, ಸತೀಶ್, ಇ-ಲೆಕ್ಚರ್ ಸರಣಿಯ ಸಂಯೋಜಕ ವಿ.ಕೃಷ್ಣಪ್ರಶಾಂತ್ ಉಪಸ್ಥಿತರಿದ್ದರು ಎಂದು ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು