News Karnataka Kannada
Sunday, April 14 2024
Cricket
ಕರಾವಳಿ

ಜಗಳ ಬಿಡಿಸಲು ಬಂದ ಯುವಕನಿಗೇ ಚೂರಿ ಇರಿದು ಕೊಲೆ

Photo Credit :

ಜಗಳ ಬಿಡಿಸಲು ಬಂದ ಯುವಕನಿಗೇ ಚೂರಿ ಇರಿದು ಕೊಲೆ

ಕಾರವಾರ ; ನಗರದ ಗಾಂಧಿ ನಗರದಲ್ಲಿ ಭಾನುವಾರ ತಡರಾತ್ರಿ, ಮೂವರ ಮಧ್ಯೆ ನಡೆಯುತ್ತಿದ್ದ ಹೊಡೆದಾಟ ಬಿಡಿಸಲು ಹೋದ ಯುವಕನನ್ನೇ ಚೂರಿಯಿಂದ ಇರಿದು ಕೊಲೆ ಮಾಡಲಾಗಿದೆ.
ಸ್ಥಳೀಯ ಯುವಕ ಮನೋಜ್ ಪ್ರಕಾಶ ಪಾಟೀಲ (22) ಕೊಲೆಯಾದವರು. ಸ್ಥಳೀಯರಾದ ಫಾರೂಖ್, ಕಾರ್ತಿಕ್ ಹಾಗೂ ಇನ್ನೊಬ್ಬರು ಹೊಡೆದಾಡಿಕೊಳ್ಳುತ್ತಿದ್ದರು. ಆಗ, ಮನೋಜ್ ತಮ್ಮ ಅಣ್ಣ ಸಂದೀಪ ಪ್ರಕಾಶ ಪಾಟೀಲ‌ಗೆ ಹೊಡೆಯುವುದನ್ನು ತಪ್ಪಿಸಲು ಹೋದರು. ಅಷ್ಟರಲ್ಲಿ ಫಾರೂಖ್ ಚಾಕುವಿನಿಂದ ಎದೆಯ ಭಾಗಕ್ಕೆ ಇರಿದರು. ಮೃತ ಯುವಕ ಗೋವಾದಲ್ಲಿ ಕೆಲಸ ಮಾಡುತ್ತಿದ್ದು, ಊರಿಗೆ ಬಂದಿದ್ದಾಗ ಈ ಕೃತ್ಯ ನಡೆದಿದೆ.
ಘಟನೆ ಸ್ಥಳಕ್ಕೆ ದಾಂಡೇಲಿ ನಗರದ ಡಿ.ವೈ.ಎಸ್ಪಿ ಕೆ.ಎಲ್.ಗಣೇಶ, ಸಿ.ಪಿ.ಐ ಪ್ರಭು ಗಂಗನಹಳ್ಳಿ, ನಗರ ಪೊಲೀಸ್ ಠಾಣೆ ಪಿ.ಎಸ್.ಐ ಯಲ್ಲಪ್ಪ.ಎಸ್, ಅಪರಾಧ ವಿಭಾಗದ ಪಿ.ಎಸ್.ಐ ಮಹಾದೇವ ನಾಯ್ಕವಾಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು