News Karnataka Kannada
Tuesday, April 23 2024
Cricket
ಕರಾವಳಿ

ಚಾತುರ್ಮಾಸ ಅಂಗವಾಗಿ ಯಕ್ಷಗಾನ ಬಯಲಾಟ

Photo Credit :

ಚಾತುರ್ಮಾಸ ಅಂಗವಾಗಿ ಯಕ್ಷಗಾನ ಬಯಲಾಟ

ಬೆಳ್ತಂಗಡಿ: ಶ್ರೀ ರಾಮ ಕಾರುಣ್ಯ ಕಲಾ ಸಂಘ ಕನ್ಯಾಡಿ ಶ್ರೀ ರಾಮ ಕ್ಷೇತ್ರದ ಮಠಾಧೀಪತಿ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಚಾತುರ್ಮಾಸ ಅಂಗವಾಗಿ ಯಕ್ಷಗಾನ ಸೇವೆಯಾಟ ಹಾಗೂ ಯಕ್ಷಗಾನ ಕಾರ್ಯಕ್ರಮ ದೇವರಗುಡ್ಡೆ ಶ್ರೀ ಗುರುದೇವ ಮಠದಲ್ಲಿ ನಡೆಯಿತು.

ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿ, ಬಾಹ್ಯ ಹಾಗೂ ಅಂತರಂಗದ ಕಲ್ಮಶಗಳನ್ನು ದೂರವಿರಿಸಿ, ನಿಷ್ಕಲ್ಮಶ ಮನಸ್ಸು ಹೊಂದಿರಬೇಕು ಎಂದ ಅವರು, ಯಕ್ಷಗಾನ ಜೀವನ ಪಾಠ ಕಲಿಸುತ್ತದೆ. ನಾವೆಲ್ಲ ಒಂದೇ ಕುಟುಂಬದವರು ಎಂಬ ಭಾವನೆಯಿಂದ ವ್ಯವಹರಿಸಿದಾಗ ದೈವತ್ವ ನಿರ್ಮಾಣವಾಗುತ್ತದೆ. ಕೊರೊನಾದಿಂದಾಗಿ ಯಕ್ಷಗಾನ ಕಲಾವಿದರು ಕಷ್ಟವನ್ನು ಅನುಭವಿಸಿದ್ದಾರೆ. ರಾಮ ಮಂದಿರ ನಿರ್ಮಾಣಕ್ಕೆ ಅಡಿ ಇಟ್ಟಾಗ ಕೊರೋನಾ ಕಡಿಮೆಯಾಗುತ್ತಿದೆ. ಕಲಾವಿದರು ಎದೆಕುಂದುವ ಅವಶ್ಯಕತೆ ಇಲ್ಲ. ಜನ ಜೀವನ ಸಹಜ ಸ್ಥಿತಿಯತ್ತ ಬರುತ್ತಿದ್ದು ಶ್ರೀರಾಮನ ಅನುಗ್ರಹ ಎಲ್ಲರಿಗೂ ಸಿಗಲಿದೆ. ಶ್ರೀ ಕಾರುಣ್ಯ ಕಲಾ ಸಂಘದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮ ಮಹಾ ಪೋಷಕರಾದ ಶಾಸಕ ಹರೀಶ್ ಪೂಂಜ ಮಾತನಾಡಿ, ಕರಾವಳಿಯ ಗಂಡುಕಲೆ ಯಕ್ಷಗಾನವಾಗಿದ್ದು, ಕೊರೋನಾದಿಂದಾಗಿ ಯಕ್ಷ ರಂಗಕ್ಕೂ ದೊಡ್ಡ ಹೊಡೆತ ಬಿದ್ದಿದೆ. ಸಂಘವು ಕಲಾವಿದರ ಸ್ಥಿತಿಗತಿಯನ್ನು ನೋಡಿಕೊಂಡು ನೀಡುತ್ತಿರುವ ಸಹಾಯಧನ ಎಂಬ ಶ್ರದ್ಧೆಯ ಮೂಲ ಪ್ರಸಾದ ಎಲ್ಲಾ ಕಲಾವಿದರಿಗೆ ಶಕ್ತಿ ನೀಡಲಿ. ಕಲಿಯುಗದಲ್ಲಿ ನಾರಾಯಣ ಗುರುಗಳ ಅವತಾರವಾಗಿರುವ ಕನ್ಯಾಡಿ ಶ್ರೀಗಳ ಅನುಗ್ರಹ ನಮ್ಮೆಲ್ಲರ ಮೇಲಿರಲಿ. ಕಾರುಣ್ಯ ಕಲಾ ಸಂಘದ ಕಾರ್ಯ ಶ್ಲಾಘನೀಯ ಎಂದು ಶುಭ ಹಾರೈಸಿದರು.

ಹಿರಿಯ ಯಕ್ಷಗಾನ ಕಲಾವಿದ, ಪುತ್ತೂರು ಜಿಲ್ಲಾ ಗೋರಕ್ಷಾ ಪ್ರಮುಖ್ ಸರಪಾಡಿ ಅಶೋಕ ಶೆಟ್ಟಿ, ಕೊರೋನಾದಿಂದಾಗಿ ಯಕ್ಷಗಾನ ಕಲಾವಿದರಿಗೆ ಸಮಸ್ಯೆಯಾಗಿದ್ದು ಶಾಸಕ ಹರೀಶ್ ಪೂಂಜ ಅವರು ಲಾಕ್ ಡೌನ್ ಸಂದರ್ಭ ಸ್ಪಂದನೆ ನೀಡಿದ್ದಾರೆ. ಸರಕಾರ ಕಲಾವಿದರನ್ನು ಗುರುತಿಸುವ ಕೆಲಸ ಮಾಡಬೇಕು. ಕಲಾವಿದರಿಗೆ ಕೆಲಸವಿಲ್ಲದೆ ಬೀದಿಗೆ ಬರದಂತೆ ತಡೆಯುವಲ್ಲಿ ಶಾಸಕ ಪೂಂಜ ಅವರು ಯಕ್ಷಗಾನ ಕಲಾವಿದರ ಧ್ವನಿಯಾಗಬೇಕು ಎಂದು ಮನವಿ ಮಾಡಿದರು. ಉಭಯ ಜಿಲ್ಲೆಗಳ ಜನಪ್ರತಿನಿಧಿಗಳು ಕೂಡ ಧ್ವನಿಯಾಗಿ ನಿಲ್ಲಬೇಕು ಎಂದರು.

ಕುದ್ರೋಳಿ ನಾರಾಯಣಗುರು ಕಾಲೇಜಿನ ಉಪನ್ಯಾಸಕ ಕೇಶವ ಬಂಗೇರ ಮಾತನಾಡಿ, ಯಾವುದೇ ದುರುದ್ದೇಶವಿಲ್ಲದೆ ಕಾರುಣ್ಯ ಕಲಾ ಸಂಘ ಸಮುದಾಯದ ಕಲಾವಿದರ ಏಳಿಗೆಗಾಗಿ ಹಗಲಿರುಳು ಶ್ರಮಿಸುವ ಸಂಘವಾಗಿದೆ. ಬೆಳಕಿಗೆ ಬಾರದ, ಕಷ್ಟದಲ್ಲಿರುವ ಕಲಾವಿದರ ಆಶಾಕಿರಣವಾಗಿದೆ. ಸಮಾಜದ ಎಲ್ಲ ಬಂಧುಗಳು ಕೂಡಾ ಸಹಕಾರ ನೀಡಿರುವುದು ಶ್ಲಾಘನೀಯ ಎಂದರು.

ವಾಣಿಜ್ಯ ಇಲಾಖೆಯಉಪ ಆಯುಕ್ತ ರಾಜು ನಾಯ್ಕ್, ಬಿರುವೆರ್ ಕುಡ್ಲ ಬೆಳ್ತಂಗಡಿ ತಾಲೂಕು ಘಟಕ ಅಧ್ಯಕ್ಷ ರಾಜೇಶ್ ಕೋಟ್ಯಾನ್ ಬೆಳ್ತಂಗಡಿ, ಕ್ಷೇತ್ರದ ಟ್ರಸ್ಟಿ ತುಕರಾಮ ಸಾಲಿಯಾನ್, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಶಶಿಧರ್ ಕಲ್ಮಂಜ, ಭಾಗವತ ರವಿಚಂದ್ರ ಕನ್ನಡಿಕಟ್ಟೆ ಉಪಸ್ಥಿತರಿದ್ದರು. ಸಂಘದ ಸಂಚಾಲಕ ದಯಾನಂದ ಬೆಳಾಲು ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಸಮುದಾಯದ ಸುಮಾರು ಐವತ್ತು ಮಂದಿ ಕಲಾವಿದರಿಗೆ ಸಹಾಯಧನ ನೀಡಲಾಯಿತು. ಸಂಘದ ಸ್ಥಾಪಕಾಧ್ಯಕ್ಷ ಜನಾರ್ದನ ಅಮ್ಮುಂಜೆ ಸ್ವಾಗತಿಸಿದರು. ರಾಜೇಂದ್ರ ಎಕ್ಕಾರು ಕಾರ್ಯಕ್ರಮ ನಿರ್ವಹಿಸಿದರು. ಉಪನ್ಯಾಸಕ ದೇವದಾಸ ಅರ್ಕುಳ ವಂದಿಸಿದರು.

ಬಳಿಕ ಸಮುದಾಯದ ಕಲಾವಿದರಿಂದ ಸೀತಾ ಪರಿತ್ಯಾಗ, ಕುಶ-ಲವ ಕಾಳಗ ಯಕ್ಷಗಾನ ಸೇವಾ ಬಯಲಾಟ ನಡೆಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು