News Karnataka Kannada
Monday, April 15 2024
Cricket
ಕರಾವಳಿ

ಖ್ಯಾತ ಹೃದ್ರೋಗ ತಜ್ಞ ಡಾ ಪದ್ಮನಾಭ ಕಾಮತ್‌ ಅವರಿಗೆ ಪ್ರತಿಷ್ಟಿತ ರೋಟರಿ ವಂದನಾ ಪ್ರಶಸ್ತಿ ಪ್ರಧಾನ

Photo Credit :

   ಖ್ಯಾತ ಹೃದ್ರೋಗ ತಜ್ಞ ಡಾ ಪದ್ಮನಾಭ ಕಾಮತ್‌ ಅವರಿಗೆ ಪ್ರತಿಷ್ಟಿತ ರೋಟರಿ ವಂದನಾ ಪ್ರಶಸ್ತಿ ಪ್ರಧಾನ

ಮಂಗಳೂರು. : ನಗರದ ಖ್ಯಾತ ಹೃದ್ರೋಗ ತಜ್ಞರು ಮತ್ತು ಕೆಎಂಸಿ ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ.ಪದ್ಮನಾಭ ಕಾಮತ್ ಅವರು ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ರೋಟರಿ ಸಂಸ್ಥೆಯು ತನ್ನ ರಾಜ್ಯ ಮಟ್ಟದ ವಾರ್ಷಿಕ ಪ್ರತಿಷ್ಠಿತ ಪ್ರಶಸ್ತಿಯನ್ನು ಅವರಿಗೆ ನೀಡಿ ಗೌರವಿಸಿತು. ಶುಕ್ರವಾರ ನಡೆದ ವರ್ಚುವಲ್ ಸಮಾರಂಭದಲ್ಲಿ ನೀಡಲಾದ ಈ ಪ್ರಶಸ್ತಿ ಗೆ ಸಮುದಾಯ ಹೃದ್ರೋಗ ಕ್ಷೇತ್ರದಲ್ಲಿ ಅವರ ಸಾಧನೆ ಮತ್ತು ಗ್ರಾಮೀಣ ಆರೋಗ್ಯ ರಕ್ಷಣೆಯ ಕಾರ್ಯಕ್ರಮದ ಅಂಗವಾಗಿ ಜಿಲ್ಲೆಯ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ 375 ಇಸಿಜಿ ಉಪಕರಣಗಳನ್ನು ದೇಣಿಗೆ ನೀಡಿರುವುದನ್ನು ಗುರುತಿಸಲಾಗಿದೆ.
ತಮಗೆ ನೀಡಿದ ಸನ್ಮಾನಕ್ಕೆ ಪ್ರತಿಕ್ರಿಯಿಸಿದ ಡಾ. ಕಾಮತ್ ಅವರು ತಾವು ಇಂದು ಏನನ್ನು ಸಾಧಿಸಿದ್ದರೂ ಅದಕ್ಕೆ ತಮ್ಮ ಹೆತ್ತವರ ಆಶೀರ್ವಾದ, ಪ್ರಾಯೋಜಕರ ಉತ್ತಮ ಬೆಂಬಲ ಮತ್ತು ಅವರ ಸ್ನೇಹಿತರು, ಸಂಬಂಧಿಕರ ಸಹಕಾರವೇ ಕಾರಣ ಎಂದರಲ್ಲದೆ ರೋಟರಿ ಅಂತರ್ರಾಷ್ಟ್ರೀಯ ಸಂಸ್ಥೆಗೂ ಕೃತಜ್ಞತೆ ಸಲ್ಲಿಸಿದರು.
ರೋಟರಿ ಇಂಟರ್ನ್ಯಾಷನಲ್ ಡಿಸ್ಟ್ರಿಕ್ಟ್ 3181 ಗವರ್ನರ್ ಆರ್.ಟಿ.ಎನ್ ಎಂ ರಂಗನಾಥ್ ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಪ್ರಶಸ್ತಿಯನ್ನು ಪ್ರದಾನ ಮಾಡಿ ಡಾ ಕಾಮತ್‌ ಅವರನ್ನು ವಿಶಿಷ್ಟ ಸಾಧನೆಗಳಿಗಾಗಿ ಅಭಿನಂದಿಸಿದರು. ನಂತರ ಅವರು ಕ್ಲಬ್‌ನ ಸಾಪ್ತಾಹಿಕ ಸುದ್ದಿ ಬುಲೆಟಿನ್ ಸೆಂಟೊರ್‌ ನ್ನು ಬಿಡುಗಡೆ ಮಾಡಿದರು.
ಪ್ರಶಸ್ತಿ ಸಮಿತಿ ಅಧ್ಯಕ್ಷ ಆರ್.ಟಿ.ಎನ್. ಡಾ. ದೇವದಾಸ್ ರೈ ತಮ್ಮ ಪರಿಚಯ ಭಾಷಣದಲ್ಲಿ ವಾರ್ಷಿಕ ವಂದನಾ ಪ್ರಶಸ್ತಿಯನ್ನು ಸಾಧಕರಿಗೆ ನೀಡಲಾಗುತ್ತದೆ ಮತ್ತು ಆಯಾ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ತೋರಿದವರಿಗೆ ಪ್ರತೀ ವರ್ಷವೂ ನೀಡಲಾಗುತ್ತದೆ. ಇದು ಕ್ಲಬ್‌ಗಳ ವೃತ್ತಿಪರ ಸೇವಾ ಯೋಜನೆಯ ಒಂದು ಭಾಗವಾಗಿದೆ ಎಂದರು. ಸಮುದಾಯ ಹೃದ್ರೋಗ ಕ್ಷೇತ್ರದಲ್ಲಿ ಅನನ್ಯ ಸಾಧನೆ ಮತ್ತು ಗ್ರಾಮೀಣ ಸಮುದಾಯಕ್ಕೆ ನೀಡಿದ ಅಪಾರ ಸೇವೆಗಳಿಗೆ ಡಾ.ಕಾಮತ್ ಅವರನ್ನು ಅಭಿನಂದಿಸಿದರು.
ರೋಟರಿ ಕ್ಲಬ್ ಆಫ್ ಮಂಗಳೂರು ಸೆಂಟ್ರಲ್ ನ ಅದ್ಯಕ್ಷರಾದ ಪ್ರಕಾಶ್ಚಂದ್ರ ಅವರು ಸಮಾರಂಭದ ಅದ್ಯಕ್ಷತೆಯನ್ನು ವಹಿಸಿದ್ದರು. ಈ ಸಂದರ್ಭದಲ್ಲಿ ಮಂಗಳೂರು ನಗರದ ರೋಟರಾಕ್ಟ್ ಕ್ಲಬ್ ಅದ್ಯಕ್ಷ ಡಾರಿಲ್ ಸ್ಟೀವನ್ ಡಿಸೋಜ, ರೋಟರಿ ಸದಸ್ಯರಾದ ಎಂ ವಿ ಮಲ್ಯ, ಗಿರೀಶ್ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು