News Karnataka Kannada
Sunday, April 21 2024
Cricket
ಕರಾವಳಿ

ಕೋವಿಡ್ ಆಸ್ಪತ್ರೆಯ ನವೀಕೃತ ತೀವ್ರನಿಗಾ ಘಟಕಕ್ಕೆ ಜಿಲ್ಲಾಧಿಕಾರಿ ಭೇಟಿ

Photo Credit :

ಕೋವಿಡ್ ಆಸ್ಪತ್ರೆಯ ನವೀಕೃತ ತೀವ್ರನಿಗಾ ಘಟಕಕ್ಕೆ ಜಿಲ್ಲಾಧಿಕಾರಿ ಭೇಟಿ

ಕಾರವಾರ: ಇಲ್ಲಿನ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕೋವಿಡ್ ಆಸ್ಪತ್ರೆಯ ನವೀಕೃತ ತೀವ್ರನಿಗಾ ಘಟಕ ವಾರ್ಡ್ ಗೆ ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ ಕೆ. ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ಹಾಗೂ ಜಿಲ್ಲಾ ಶಸ್ತ್ರ ಚಿಕಿತ್ಸಕರಾಗಿರುವ ಡಾ. ಶಿವಾನಂದ ಕುಡ್ತರಕರ್‍ ಹೊಸತಾಗಿ ನವೀಕರಿಸಿದ ತೀವ್ರನಿಗಾ ಘಟಕದ ಕುರಿತು ಜಿಲ್ಲಾಧಿಕಾರಿಗೆ ಮಾಹಿತಿ ನೀಡಿ, ಪ್ರಸ್ತುತ ತೀವ್ರನಿಗಾ ಘಟಕದಲ್ಲಿ 35 ಐ.ಸಿ.ಯು. ಹಾಸಿಗೆಗಳ ವ್ಯವಸ್ಥೆ ಇದೆ ಎಂದರು.

33 ವೆಂಟಿಲೇಟರ್‍ ಗಳ ಸೌಲಭ್ಯ ಹಾಗೂ 9 ಹೈ-ಫ್ಲೋ ಆಕ್ಸಿಜನ್ ಮಶೀನ್‍ಗಳನ್ನು ಹೊಸತಾಗಿ ಅಳವಡಿಸಲಾಗಿದೆ. ಇದಕ್ಕೆ ಬೇಕಾದ ಹೆಚ್ಚಿನ ಆಕ್ಸಿಜನ್‍ಗಳನ್ನು ಪಡೆಯಲು ಲಿಕ್ವಿಡ್ ಆಕ್ಸಿಜನ್ ಪ್ಲ್ಯಾಂಟ್‍ನ್ನು ಅತೀ ಶೀಘ್ರದಲ್ಲಿ ಸರ್ಕಾರದಿಂದ ಪಡೆಯಲಾಗುವುದು ಎಂದು ವಿವರಿಸಿದರು. 

ಪ್ರಧಾನಮಂತ್ರಿ ಯೋಜನೆಯಿಂದ ಬಂದ ಅತ್ಯಾಧುನಿಕ ವೆಂಟಿಲೇಟರ್‍ ಗಳು, ವೆಂಟಿಲೇಟರ್ ಹಾಗೂ ಹೈ-ಫ್ಲೋ ಆಕ್ಸಿಜೆನ್ ಡೆಲಿವರಿಯನ್ನು ನೀಡುವ ಸಾಮರ್ಥ್ಯವನ್ನು ಹೊಂದಿದೆ. ಅದರಂತೆ ತೀವ್ರನಿಗಾ ಘಟಕದಲ್ಲಿ ಒಂದು ಡಯಾಲಿಸಿಸ್ ಯಂತ್ರವನ್ನು ಅಳವಡಿಸಲಾಗುತ್ತಿದ್ದು, ಇದರಿಂದ ಕೋವಿಡ್ ಪಾಸಿಟಿವ್ ಇರುವ ಕಿಡ್ನಿ ತೊಂದರೆಯಿಂದ ಬಳಲುತ್ತಿರುವ ರೋಗಿಗಳು ತುರ್ತಾಗಿ ಚಿಕಿತ್ಸೆ ಪಡೆಯಲು ಅನುಕೂಲಕರವಾಗಿರುತ್ತದೆ ಎಂದು ಅರವಳಿಕೆ ವಿಭಾಗದ ಮುಖ್ಯಸ್ಥರಾದ ಡಾ. ಮಂಜುನಾಥ ಭಟ್ ಅವರು ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದರು.

ರೋಗ ಲಕ್ಷಣ ರಹಿತ ಸೋಂಕಿತರ 70 ಹಾಸಿಗೆಗಳ ಕೋವಿಡ್ ವಾರ್ಡನ್ನು ಸಹ ಪರಿಶೀಲಿಸಿದ ಜಿಲ್ಲಾಧಿಕಾರಿ ಅಲ್ಲಿಯ ರೋಗಿಗಳ ಆರೈಕೆಯ ಕುರಿತು ಮೇಲ್ವಿಚಾರಣೆ ನಡೆಸಿದರು. ಅಲ್ಲದೇ ರೋಗಿಗಳ ಮನರಂಜನೆಗಾಗಿ ಒಂದು ಟಿ.ವಿ. ಅಳವಡಿಸುವ ವ್ಯವಸ್ಥೆಯನ್ನು ಮಾಡುವಂತೆ  ವೈಧ್ಯಾಧಿಕಾರಿಗಳಿಗೆ ಸೂಚಿಸಿದರು.

ಇದುವರೆಗೂ 458 ಸೋಂಕಿತ ರೋಗಿಗಗಳು ದಾಖಲಾಗಿದ್ದು, 356 ಸೋಂಕಿತರು ಬಿಡುಗಡೆ ಹೊಂದಿರುತ್ತಾರೆ. ಇದರಲ್ಲಿ ಕೋವಿಡ್ ಐ.ಸಿ.ಯು. ನಲ್ಲಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಸುಮಾರು 110 ಕೋವಿಡ್ ಸೋಂಕಿತರು ಗುಣಮುಖರಾಗಿ ಬಿಡುಗಡೆ ಹೊಂದಿರುತ್ತಾರೆ ಹಾಗೂ ಪ್ರತಿಶತದ ಮರಣದ ಪ್ರಮಾಣವು ತೀರಾ ಕಡಿಮೆ ಅಂಕಿಅಂಶಗಳನ್ನು ಹೊಂದಿದೆ ಎಂಬ ಮಾಹಿತಿಯನ್ನು ಕ್ರಿಮ್ಸ್ ನಿರ್ದೇಶಕರಾದ ಡಾ. ಗಜಾನನ ನಾಯಕ ಜಿಲ್ಲಾಧಿಕಾರಿಗೆ ನೀಡಿದರು.

ಕೋವಿಡ್-19 ಸನ್ನಿವೇಶದಲ್ಲಿ ಸೈನಿಕರಂತೆ ಸೇವೆ ಸಲ್ಲಿಸಿತ್ತಿರುವ  ವೈದ್ಯಾಧಿಕಾರಿಗಳು,  ದಾದಿಯರು, ಡಿ ವರ್ಗದ ಸಿಬ್ಬಂದಿಗಳೆಲ್ಲರ ಕಾರ್ಯ ಶ್ಲಾಘನೀಯವಾಗಿದೆ ಎಂದು ಜಿಲ್ಲಾಧಿಕಾರಿ  ಎಲ್ಲರನ್ನು ಅಭಿನಂದಿಸಿದರು. ಈ ಸಂದರ್ಭದಲ್ಲಿ ಆರ್.ಎಂ.ಓ.,  ಡಾ. ವೆಂಕಟೇಶ,  ಪಿಜಿಸಿಯನ್ ಡಾ. ಅಮಿತ್ ಕಾಮತ್, ಡಾ.  ಭರತಕುಮಾರ ಹೆಗ್ಡೆ, ಡಾ.  ಮಹೀಧರ ಎಸ್.ಎನ್., ಡಾ. ಆರವಿಂದ, ಶುಶ್ರೂಷಕಿಯರಾದ ಎಮಿಲಿಯಾ ಹಾಗೂ ಸುಷ್ಮಾ ನಾಯ್ಕ ಸೇರಿದಂತೆ ಇತರರು ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು