News Karnataka Kannada
Wednesday, April 24 2024
Cricket
ಕರಾವಳಿ

ಕೊರೊನಾ ಸೋಂಕಿತರ ಐಸೋಲೇಷನ್ ಕೇಂದ್ರ ಸ್ಥಾಪನೆಗೆ ಸ್ಥಳ ಪರಿಶೀಲನೆ ನಡೆಸಿದ ಶಾಸಕ ಡಾ.ಭರತ್ ಶೆಟ್ಟಿ ವೈ

Photo Credit :

ಕೊರೊನಾ ಸೋಂಕಿತರ ಐಸೋಲೇಷನ್ ಕೇಂದ್ರ ಸ್ಥಾಪನೆಗೆ  ಸ್ಥಳ ಪರಿಶೀಲನೆ ನಡೆಸಿದ ಶಾಸಕ ಡಾ.ಭರತ್ ಶೆಟ್ಟಿ ವೈ

ಸುರತ್ಕಲ್: ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದಲ್ಲಿ ಕೊರೊನಾ ಸೋಂಕಿತರ ಮೇಲೆ ನಿಗಾ ,ಬೇರ್ಪಡಿಸುವಿಕೆ ಹಾಗೂ ಚಿಕಿತ್ಸೆ ನೀಡುವ ವ್ಯವಸ್ಥೆ ಕುರಿತಂತೆ ಕೋವಿಡ್ ಸೆಂಟರ್ ಸ್ಥಾಪಿಸಲು ಶಾಸಕ ಡಾ.ಭರತ್ ಶೆಟ್ಟಿ ವೈ ಅವರು ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆಯನ್ನು ನಡೆಸಿದರು.

 

ಸುರತ್ಕಲ್ ಪೊಲೀಸ್ ಠಾಣೆಯ ಹಿಂಭಾಗದಲ್ಲಿರುವ 

ಸಮಾಜಕಲ್ಯಾಣ ಇಲಾಖೆಗೆ ಒಳಪಟ್ಟ ಹಾಸ್ಟೆಲ್, ಎನ್ಐಟಿಕೆ ಹಾಸ್ಟೆಲ್ ಹಾಗೂ ಹೊಸಬೆಟ್ಟುವಿನಲ್ಲಿರುವ ಪ್ರಾಕೃತಿಕ ವಿಕೋಪ ನಿರ್ವಹಣಾ ಭವನವನ್ನು ಪರಿಶೀಲಿಸಲಾಯಿತು.

 

ಎನ್ಐಟಿಕೆಯಲ್ಲಿ ಹಾಸ್ಟೆಲ್ನ ಮೂರು ಕಟ್ಟಡಗಳನ್ನು ಪರಿಶೀಲಿಸಲಾಗಿದ್ದು,ಇನ್ನೂರು ಬೆಡ್ಗಳ ಸಾಮರ್ಥ್ಯವುಳ್ಳ ಕೇಂದ್ರವನ್ನು ಸಿದ್ದಗೊಳಿಸಲಾಗಿದೆ. ಅವಶ್ಯಕತೆ ಬಿದ್ದರೆ ಮತ್ತೆ ಮುನ್ನೂರು ಬೆಡ್ಗಳ ಐಸೋಲೇಷನ್ ಕೇಂದ್ರ ಇಲ್ಲಿ ನಿರ್ಮಾನಮಾದಲು ಮಾಡಲು ವ್ಯವಸ್ಥೆ ಕೈಗೊಳ್ಳಲಾಗಿದೆ.ಒಟ್ಟು ಸಾವಿರಕ್ಕೂ ಮಿಕ್ಕಿ ಜನರ ನಿಗಾ ಕೇಂದ್ರಕ್ಕೆ ಇಲ್ಲಿ ಅವಕಾಶವಿದೆ.

 

ಹೊಸಬೆಟ್ಟುವಿನಲ್ಲಿರುವ ಪ್ರಕೃತಿ ವಿಕೋಪ ನಿರ್ವಹಣಾ ಭವನವನ್ನು ಕೂಡ ಪರಿಶೀಲಿಸಲಾಗಿದ್ದು ಸ್ಥಳೀಯರಿಗೆ ಅಗತ್ಯವಿದ್ದರೆ ಬಳಕೆಗೆ ಸಿಗಲು ಸೂಕ್ತ ವ್ಯವಸ್ಥೆ ಕೈಗೊಳ್ಳಲು ನಿರ್ಧರಿಸಲಾಯಿತು.

 

ಪರಿಶೀಲನೆಯ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಶಾಸಕ ಡಾ,ಭರತ್ ಶೆಟ್ಟಿ ವೈ ಅವರು ಕೊರೊನಾ ಪಾಸಿಟವ್ ಬಂದರೂ ಮನೆಯಲ್ಲಿ ಕೆಲವು ಕುಳಿತುಕೊಳ್ಳದೆ ಮತ್ತಷ್ಟು ಕೊರೊನಾ ಹರಡಲು ಕಾರಣವಾಗುತ್ತಿರುವ ವರದಿಗಳು ಬರುತ್ತಿದೆ. ಇದನ್ನು ತಡೆಯಲು ಹಾಗೂ ಪಾಸಿಟವ್ ಆದವರ ಸಂಪರ್ಕಕ್ಕೆ ಬಂದವರನ್ನು ಪ್ರತ್ಯೇಕವಾಗಿರಿಸಲು ಐಸೋಲೇಷನ್ ಸೆಂಟರ್ ಅಗತ್ಯವಾಗಿದೆ. ಆಸ್ಪತ್ರೆಗಳಲ್ಲಿ ಕೊರೊನಾ ಸೊಂಕಿತರ ಚಿಕಿತ್ಸೆಗೆ ಐಸಿಯು ಹೊರತು ಪಡಿಸಿ ಬೆಡ್ಗಳ ಕೊರತೆಯಿಲ್ಲ. ಐಸೋಲೇಷನ್ ಕೇಂದ್ರವನ್ನು ಸೋಂಕಿನ ಸರಪಳಿ ನಿಲ್ಲಿಸಲು ಮಾತ್ರ ಬಳಸಲಾಗುತ್ತದೆ. ಇಲ್ಲಿ ಸಧಾರಣ ಚಿಕಿತ್ಸೆ, ಕೌಟುಂಬಿಕವಾಗಿ ಯಾರಿಗಾದರೂ ಪ್ರತ್ಯೇಕವಾಗಿ ಇರಲು ಬೇಕಾದ ವ್ಯವಸ್ಥೆ ಇದಾಗಿದೆ. ಊಟ,ಮೂರು ಹೊತ್ತು ನಿಗಾ ಮತ್ತಿತರ ವ್ಯವಸ್ಥೆ ಇಲ್ಲಿರಲಿದೆ. ಮಾತ್ರವಲ್ಲದೆ ಮನೆಯಿಂದಲೂ ಊಟೋಪಚಾರಗಳನ್ನು ತರಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.  

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು