News Karnataka Kannada
Tuesday, April 16 2024
Cricket
ಕರಾವಳಿ

ಕಾಸರಗೋಡಿನಲ್ಲಿ ಮಂಗಳವಾರ 38 ಮಂದಿಗೆ ಕೊರೋನಾ ಪಾಸಿಟಿವ್

Photo Credit :

ಕಾಸರಗೋಡಿನಲ್ಲಿ ಮಂಗಳವಾರ 38 ಮಂದಿಗೆ ಕೊರೋನಾ ಪಾಸಿಟಿವ್

ಕಾಸರಗೋಡು: ಜಿಲ್ಲೆಯಲ್ಲಿ ಮಂಗಳವಾರ 38 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಈ ಪೈಕಿ 37 ಮಂದಿಗೆ ಪ್ರಾಥಮಿಕ ಸಂಪರ್ಕದಿಂದ ಸೋಂಕು ತಗಲಿದೆ. ಓರ್ವ ಹೊರ ರಾಜ್ಯದಿಂದ ಬಂದವರು. 36 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. 

ಜಿಲ್ಲೆಯಲ್ಲಿ ಇದುವರೆಗೆ ಸೋಂಕಿತ ಸಂಖ್ಯೆ 1514 ಕ್ಕೇರಿದೆ. ಈ ಪೈಕಿ 886 ಮಂದಿಗೆ ಸಂಪರ್ಕದಿಂದ ಸೋಂಕು ತಗಲಿದೆ. ವಿದೇಶದಿಂದ ಬಂದ 382 ಮಂದಿ ಹಾಗೂ 264 ಮಂದಿ ಹೊರ ರಾಜ್ಯದಿಂದ ಬಂದವರಾಗಿದ್ದಾರೆ.

ಮಂಗಳವಾರ ತ್ರಿಕ್ಕರಿಪುರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 7, ಚೆಮ್ನಾಡ್, ಅಜನೂರು , ಮೀಂಜ, ಪಡನ್ನ ತಲಾ 4, ಮಂಗಲ್ಪಾಡಿ 3, ಮಧೂರು, ಕುಂಬಳೆ, ಮಂಜೇಶ್ವರ ,ಕುಂಬ್ಡಾಜೆ , ಕಾಸರಗೋಡು, ಪೈವಳಿಕೆ, ಬದಿಯಡ್ಕ, ಚೆಂಗಳ , ಕಳ್ಳಾರ್, ಚೆರ್ವತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತಲಾ ಒಬ್ಬರಿಗೆ ಸೋಂಕು ಪತ್ತೆಯಾಗಿದೆ.

ಓರ್ವ ಪೊಲೀಸ್ ಹಾಗೂ ಓರ್ವ ಆರೋಗ್ಯ ಸಿಬ್ಬಂದಿಗೆ ಸೋಂಕು ಪತ್ತೆಯಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು