News Karnataka Kannada
Monday, April 22 2024
Cricket
ಕರಾವಳಿ

ಉಜಿರೆ ಗ್ರಾ.ಪ. ನಲ್ಲಿ ಆತ್ಮನಿರ್ಭರ ಭಾರತ ಯೋಜನೆ ಅಕ್ಷರಶಃ ಕಾರ್ಯಗತ: ಶಾಸಕ ಪೂಂಜ

Photo Credit :

ಉಜಿರೆ ಗ್ರಾ.ಪ. ನಲ್ಲಿ ಆತ್ಮನಿರ್ಭರ ಭಾರತ ಯೋಜನೆ ಅಕ್ಷರಶಃ ಕಾರ್ಯಗತ: ಶಾಸಕ ಪೂಂಜ

ಬೆಳ್ತಂಗಡಿ: ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲೇ ಉಜಿರೆ ಗ್ರಾಮ ಪಂಚಾಯತ್ ಪ.ಜಾತಿ ಮತ್ತು ಪ.ಪಂಗಡದ 50 ಅರ್ಹ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ವಿತರಿಸಿ ಅಭೂತಪೂರ್ವ ಕೆಲಸ ಮಾಡಿದೆ. ಮಹಿಳೆಯರು ಸ್ವಉದ್ಯೋಗದಿಂದ ಸ್ವಾಭಿಮಾನಿಯಾಗಿ ಬದುಕಲು ಪ್ರಧಾನಿ ಮೋದಿಯವರು ಪ್ರೇರಣೆಯಾಗಿದ್ದಾರೆ. ಉಜಿರೆಯ ಸಮಸ್ಯೆಗಳಿಗೆ ಆದ್ಯತೆ ಮೇಲೆ ಪರಿಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಶಾಸಕ ಹರೀಶ್ ಪೂಂಜ ನುಡಿದರು.

ಅವರು ಅ . 9ರಂದು ಉಜಿರೆಯ ಗ್ರಾಮ ಪಂಚಾಯತ್ ಸುವರ್ಣ ಸೌಧದಲ್ಲಿ ದ .ಕ .ಜಿಲ್ಲಾ ಪಂಚಾಯತ್,ಬೆಳ್ತಂಗಡಿ ತಾ.ಪ. ಹಾಗು ಉಜಿರೆ ಗ್ರಾಮ ಪಂಚಾಯತ್ ಸಹಯೋಗದೊಂದಿಗೆ 2020-21 ನೇ ಸಾಲಿನ ಶೆ. 25 ಅನುದಾನದಡಿ ಪ.ಜಾತಿ ಮತ್ತು ಪ.ಪಂಗಡದ 50 ಅರ್ಹ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ವಿತರಿಸಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಉಜಿರೆಯ ಸಾರ್ವಜನಿಕರ ಬೇಡಿಕೆಯ ಕಾಲೇಜು ರಸ್ತೆಗೆ ಫುಟ್ಪಾತ್, ಅವೈಜ್ಞಾನಿಕ ಸರ್ಕಲ್ ತೆಗೆದು ಹೊಸ ಸರ್ಕಲ್ ನಿರ್ಮಾಣ, ರಿಕ್ಷಾ ಪಾರ್ಕಿಂಗ್ ವ್ಯವಸ್ಥೆ, ಇಜ್ಜಲ ಡಂಪಿಂಗ್ ಯಾರ್ಡ್ ಸಮಸ್ಯೆಗೆ ತಿರುಪತಿ ಮಾದರಿಯಲ್ಲಿ ಸ್ವಚ್ಛ ಭಾ ರತ್ ಮಿಷನ್ ಯೋಜನೆಯಡಿ ಹಸಿ ಮತ್ತು ಒಣ ತ್ಯಾಜ್ಯ ಪ್ರತ್ಯೇಕಿಸಿ ಸುಂದರ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಕಾರ್ಯ ಯೋಜನೆ ರೂಪಿಸಲಾಗುವುದು. ಕುಡಿಯುವ ನೀರು ಪೂರೈಸಲು ಪಜಿರಡ್ಕದಲ್ಲಿ 4 ಕೋ.ರು ವೆಚ್ಚದಲ್ಲಿ ವೆಂಟೆಡ್ ಡ್ಯಾಮ್ ನಿರ್ಮಿಸಲಾಗುವುದು ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು