News Karnataka Kannada
Friday, April 19 2024
Cricket
ಕರಾವಳಿ

ಇದುವರೆಗೆ ರಾಜ್ಯದಲ್ಲಿ 1500 ಪೊಲೀಸರಿಗೆ ಕೊರೊನಾ, 73 ಮಂದಿ ಸಾವು: ಡಿಜಿಪಿ ಪ್ರವೀಣ್ ಸೂದ್

Photo Credit :

ಇದುವರೆಗೆ ರಾಜ್ಯದಲ್ಲಿ 1500 ಪೊಲೀಸರಿಗೆ ಕೊರೊನಾ, 73 ಮಂದಿ ಸಾವು: ಡಿಜಿಪಿ ಪ್ರವೀಣ್ ಸೂದ್

ಕೊಡಗು: ಕನಾ೯ಟಕದಲ್ಲಿ ಮಾದಕ ದ್ರವ್ಯ ಮಾರಾಟ ಮತ್ತು ಸೇವನೆಗೆ ಸಂಬಂಧಿಸಿದಂತೆ ಪೊಲೀಸರ ತನಿಖೆ ಚುರುಕಿನಿಂದ ಸಾಗಿದ್ದು ಚಿತ್ರಕಲಾವಿದರೂ ಸೇರಿದಂತೆ ಡ್ರಗ್ ಜಾಲದಲ್ಲಿ ತೊಡಗಿಸಿಕೊಂಡಿರುವವರ ವಿರುದ್ದ ಕಠಿಣ ಕಾನೂನು ಕ್ರಮ ಖಂಡಿತಾ ಎಂದು ರಾಜ್ಯ ಪೊಲೀಸ್ ಮಹಾನಿದೇ೯ಶಕ ಪ್ರವೀಣ್ ಸೂದ್ ಹೇಳಿದ್ದಾರೆ.

ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರವೀಣ್ ಸೂದ್, ಕೋಲಾರ, ರಾಯಚೂರುಗಳಲ್ಲಿಯೂ ಬೆಂಗಳೂರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಾದಕ ವ್ಯಸನಿಗಳಿದ್ದಾರೆ. ರಾಜ್ಯದ ಎಲ್ಲಾ ಭಾಗಗಳಲ್ಲಿಯೂ ಡ್ಗಗ್ಸ್‌ ದಂಧೆಕೋರರ ಸದೆಬಡೆಯುವಿಕೆಗೆ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದೆ ಎಂದು ಹೇಳಿದರಲ್ಲದೇ ಕೊಡಗು ಜಿಲ್ಲೆಯ ಹೋಂಸ್ಟೇ,,ರೆಸಾಟ್೯ಗಳಲ್ಲಿ ಮಾದಕ ದ್ರವ್ಯ ಬಳಸಲಾದ ಪಾಟಿ೯ಗಳು ನಡೆದಿದೆಯೇ ಎಂಬ ಬಗ್ಗೆಯೂ ತನಿಖೆ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ರಾಜ್ಯ ಪೊಲೀಸ್ ಇಲಾಖೆಯಲ್ಲಿನ 1,500 ಪೊಲೀಸರಿಗೆ ಈವರೆಗೂ ಕೋರೋನಾ ಸೋಂಕು ತಗುಲಿದ್ದು ಈ ಪೈಕಿ 73 ಮಂದಿ ಸಾವಿಗೀಡಾಗಿದ್ದಾರೆ ಎಂದು ಪ್ರವೀಣ್ ಸೂದ್ ಮಾಹಿತಿ ನೀಡಿದರು. ಕೋರೋನಾ ಸೋಂಕಿತ ಪೊಲೀಸರಿಗೆ ಮಾನಸಿಕ ಸ್ತೈಯ೯ ನೀಡಲು ತಾನು ರಾಜ್ಯವ್ಯಾಪಿ ಎಲ್ಲಾ ಜಿಲ್ಲಾ ಕೇಂದ್ರಗಳಿಗೆ ಭೇಟಿ ನೀಡುತ್ತಿದ್ದೇನೆ ಎಂದೂ ಅವರು ತಿಳಿಸಿದರು.

ಕೊಡಗು ಜಿಲ್ಲೆಯಲ್ಲಿ ಪ್ರಾಕೖತ್ತಿಕ ವಿಕೋಪ ನಿವ೯ಹಣೆಯಲ್ಲಿ ಪೊಲೀಸರು ಜಿಲ್ಲಾಡಳಿತದೊಂದಿಗೆ ಸಮನ್ವಯ ಸಾಧಿಸಿ ಉತ್ತಮ ರೀತಿಯಲ್ಲಿ ಕಾಯ೯ನಿವ೯ಹಿಸಿದ್ದಾರೆ. ಕೋರೋನಾ ನಿಯಂತ್ರಣದಲ್ಲಿಯೂ ಕೊಡಗು ಪೊಲೀಸರ ಕಾಯ೯ನಿವ೯ಹಣೆ ಗಮನಾಹ೯ವಾಗಿದೆ ಎಂದೂ ರಾಜ್ಯ ಪೊಲೀಸ್ ಮಹಾನಿದೇ೯ಶಕರು ಶ್ಲಾಘಿಸಿದರು. ಕೊಡಗು ಜಿಲ್ಲೆಯ ಪೊಲೀಸರಿಗೆ ವಸತಿ ದುರಸ್ಥಿ ಮತ್ತು ವಾಹನ ದುರಸ್ಥಿ ಸಂಬಂದಿತ ಅಗತ್ಯ ಸಹಕಾರ ನೀಡಲಾಗುತ್ತದೆ ಎಂದೂ ಅವರು ಭರವಸೆ ನೀಡಿದರು.

ಸುದ್ದಿಗೋಷ್ಟಿಯಲ್ಲಿ ಕೊಡಗು ಪೊಲೀಸ್ ವರಿಷ್ಟಾಧಿಕಾರಿ ಕ್ಷಮಾಮಿಶ್ರ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು