News Karnataka Kannada
Wednesday, April 24 2024
Cricket
ಕರಾವಳಿ

ಅಕ್ರಮ ಗೋ ಸಾಗಾಟ:ಪ್ರಕರಣ ದಾಖಲು. ಆರೋಪಿ ಪರಾರಿ

Photo Credit :

ಅಕ್ರಮ ಗೋ ಸಾಗಾಟ:ಪ್ರಕರಣ ದಾಖಲು. ಆರೋಪಿ ಪರಾರಿ

ಬೆಳ್ತಂಗಡಿ: ಗೋವುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದುದನ್ನು ಬೆಳ್ತಂಗಡಿ ಪೊಲೀಸರು ಪತ್ತೆ ಹಚ್ಚಿದ್ದು ಪಿಕ್ ಅಪ್ ವಾಹನ ಸಹಿತ 5 ಜಾನುವಾರುಗಳನ್ನು ವಶಪಡಿಸಿಕೊಂಡಿದ್ದಾರೆ.

ವಶಪಡಿಸಿಕೊಂಡ ಸೊತ್ತುಗಳ ಮೌಲ್ಯ ರೂ. 3.70 ಲಕ್ಷ ಎಂದು ಅಂದಾಜಿಸಲಾಗಿದೆ. ಸಾಗಾಟ ಮಾಡುತ್ತಿದ್ದ ವ್ಯಕ್ತಿ ಪೋಲಿಸರಿಗೆ ಸಿಗದೆ ಪರಾರಿಯಾಗಿದ್ದಾನೆ.

ಬೆಳ್ತಂಗಡಿ ಠಾಣಾ ಪಿಎಸ್ಐ ನಂದಕುಮಾರ್ ಅವರು ಸಿಬ್ಬಂದಿಗಳೊಂದಿಗೆ ಸೋಮವಾರ ವಿಶೇಷ ರೌಂಡ್ಸ್ ಕರ್ತವ್ಯದಲ್ಲಿ ಕೆಲ್ತಾಜೆ ಎಂಬಲ್ಲಿ ಇದ್ದ ಸಮಯ ಬೆಳಗ್ಗೆ 3-30 ಗಂಟೆಗೆ ಬಂಗಾಡಿ ಕಡೆಯಿಂದ ಕೆಎ-19-ಎಸಿ 6496 ನೇ ಪಿಕ್ ಅಪ್ ವಾಹನವನ್ನು ಅದರ ಚಾಲಕ ಅತೀ ವೇಗವಾಗಿ ಚಲಾಯಿಸಿಕೊಂಡು ಬರುತ್ತಿದ್ದುದ್ದನ್ನು ಕಂಡು ನಿಲ್ಲಿಸುವಂತೆ ಸೂಚನೆ ನೀಡಿದಾಗ ನಿಲ್ಲಿಸದೇ ವೇಗವಾಗಿ ಚಲಾಯಿಸಿಕೊಂಡು ಹೋದಾಗ ವಾಹನವನ್ನು ಪೊಲೀಸರು ಬೆನ್ನಟ್ಟಿದಾಗ ಅದರ ಚಾಲಕನು ಲಾಯಿಲ ಮಸೀದಿಯ ಮುಂಭಾಗದ ರಸ್ತೆಯಲ್ಲಿ ಪಿಕ್ ಅಪ್ ನ್ನು ನಿಲ್ಲಿಸಿ ಓಡಿ ಹೋಗಿದ್ದಾನೆ.

ಪಿಕ್ ಅಪ್ ನ್ನು ಪರಿಶೀಲಿಸಿದಾಗ ಅದರಲ್ಲಿ 5 ಜಾನುವಾರುಗಳನ್ನು ಒಂದರ ಮೋಲೊಂದರಂತೆ ಹಿಂಸಾತ್ಮಕವಾಗಿ ಕಟ್ಟಿ ಯಾವುದೇ ಪರವಾನಿಗೆ ಇಲ್ಲದೇ ವಧೆ ಮಾಡುವ ಸಲುವಾಗಿ ಸಾಗಾಟ ಮಾಡುತ್ತಿದ್ದುದ್ದನ್ನು ಪತ್ತೆ ಹಚ್ಚಿ ಸೊತ್ತುಗಳನ್ನು ಸ್ವಾಧೀನ ಪಡಿಸಿಕೊಂಡು ಕರ್ನಾಟಕ ಗೋ ವಧೆ ಅಧಿನಿಯಮದಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು