ಯಾದಗಿರಿ: ಸುರಪುರ ಕಾಂಗ್ರೆಸ್ ಶಾಸಕ 67 ವರ್ಷ ವಯಸ್ಸಿನ ರಾಜಾ ವೆಂಕಟಪ್ಪ ನಾಯಕ ಇಂದು ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
4 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ವೆಂಕಟಪ್ಪ ನಾಯಕ ಮೊನ್ನೆಯಷ್ಟೆ ಉಗ್ರಣ ನಿಗಮದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಸಿದ್ದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬಕ್ಕೆ ಆಪ್ತರಾಗಿದ್ದರು. ಕಾಂಗ್ರೆಸ್ ಪಕ್ಷದಿಂದಲೇ ರಾಜಕೀಯ ಜೀವನ ಆರಂಭಿಸಿದ್ದರು.
ಇವರ ಸಾವು ಕಾಂಗ್ರೆಸ್ಗೆ ಆಘಾತ ನೀಡಿದಂತಾಗಿದ್ದು, ಈ ಸುದ್ದಿ ತಿಳಿದಂತೆ ಅನೇಕ ನಾಯಕರು ಬೇಸರ ಹೊರಹಾಕಿದ್ದಾರೆ.