ಹೊಸಪೇಟೆ: ವಿರೂಪಾಕ್ಷ ದೇವಸ್ಥಾನಕ್ಕೆ ವಿಜಯನಗರ ಜಿಲ್ಲಾಡಳಿತ ಶುಕ್ರವಾರದಿಂದ ವಸ್ತ್ರ ಸಂಹಿತೆ ಜಾರಿಗೊಳಿಸಿದೆ. ದೇವಾಲಯಕ್ಕೆ ಭೇಟಿ ನೀಡುವ ಭಕ್ತರು ಜೀನ್ಸ್, ಬರ್ಮುಡಾ ಶಾರ್ಟ್ಸ್/ನಿಕ್ಕರ್ಗಳನ್ನು ಧರಿಸುವುದನ್ನು ‘ಅಸಭ್ಯ’ ಎಂದು ಪರಿಗಣಿಸಲಾಗುತ್ತದೆ.
ಇನ್ನು ಮುಂದೆ ದೇವಾಲಯಕ್ಕೆ ಜೀನ್ಸ್ ಮತ್ತು ಬರ್ಮುಡಾ ಶಾರ್ಟ್ಸ್ ಧರಿಸಿ ಬರುವವರನ್ನು ಪ್ರವೇಶದ್ವಾರದಲ್ಲಿ ನಿಲ್ಲಿಸಲಾಗುತ್ತದೆ. ಸಾಂಪ್ರದಾಯಿಕ ಪಂಚೆ ಅಥವಾ ಧೋತಿ ಧರಿಸಿದ ನಂತರ ಅವರನ್ನು ಒಳಗೆ ಬಿಡಲಾಗುತ್ತದೆ. ಚೆಡ್ಡಿ ಧರಿಸಿದ ಮಹಿಳೆಯರಿಗೂ ಪಂಚೆ ಧರಿಸುವಂತೆ ಮಾಡಲಾಗುವುದು.
ಸದ್ಯಕ್ಕೆ ದೇವಸ್ಥಾನದಿಂದ ಉಚಿತವಾಗಿ ಪಂಚೆ (ಧೋತಿ) ನೀಡಲಾಗುತ್ತಿದೆ. ಭಕ್ತರು ದೇವರ ದರ್ಶನ ಪಡೆದ ನಂತರ ಅವುಗಳನ್ನು ಹಿಂತಿರುಗಿಸಬೇಕು. ಕೆಲವು ಸಂದರ್ಶಕರು, ಹೆಚ್ಚಾಗಿ ವಿದೇಶಿಗರು, ಅಸಭ್ಯ ಉಡುಗೆ ಧರಿಸಿ ದೇವಸ್ಥಾನಕ್ಕೆ ಪ್ರವೇಶಿಸುತ್ತಿದ್ದಾರೆ ಎಂಬ ಭಕ್ತರ ದೂರಿನ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.