News Karnataka Kannada
Thursday, May 02 2024
ವಿಜಯನಗರ

ಆಫ್ರಿಕಾದಿಂದ ರಾಜ್ಯಕ್ಕೆ ಬಂದಿದ್ದ ಇಬ್ಬರ ಕೊರೋನಾ ವರದಿ ನೆಗೆಟಿವ್

Corona Main Newsk 5059978686
Photo Credit :

ವಿಜಯನಗರ:  ಒಮಿಕ್ರಾನ್ ವೈರಸ್ ಕಾಣಿಸಿಕೊಂಡಿರುವಂತ 18 ದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ಹದ್ದಿನ ಕಣ್ಣಿಟ್ಟಿದೆ. ಹೀಗೆ ಹೈರಿಸ್ಕ್ ದೇಶವಾದಂತ ಆಫ್ರಿಕಾದಿಂದ ಕರ್ನಾಟಕದ ಹೊಸಪೇಟೆಗೆ ಇಬ್ಬರು ವಾಪಾಸ್ ಆಗಿದ್ದರು.

ವಿಜಯನಗರ ಜಿಲ್ಲೆಯ ಹೊಸಪೇಟೆಗೆ ಆಫ್ರಿಕಾದಿಂದ ಇಬ್ಬರು ವಾಪಾಸ್ ಆಗಿದ್ದರು. ಆಫ್ರಿಕಾದಲ್ಲಿ ಈಗಾಗಲೇ ಒಮಿಕ್ರಾನ್ ವೈರಸ್ ಕಾಣಿಸಿಕೊಂಡ ಕಾರಣ, ರಾಜ್ಯಕ್ಕೂ ಒಮಿಕ್ರಾನ್ ವೈರಸ್ ಕಾಲಿಡುತ್ತಾ ಎನ್ನುವ ಭೀತಿ, ಇದರಿಂದ ಉಂಟಾಗಿತ್ತು. ಆದ್ರೇ.. ಆಫ್ರಿಕಾದಿಂದ ರಾಜ್ಯಕ್ಕೆ ಮರಳಿದ್ದಂತ ಇಬ್ಬರ ಕೊರೋನಾ ಪರೀಕ್ಷೆಯ ವರದಿ ನೆಗೆಟಿವ್ ಎಂಬುದಾಗಿ ತಿಳಿದು ಬಂದಿದೆ.

ಇವರ ಆರ್ ಟಿ ಪಿಸಿಆರ್ ವರದಿಯು ನೆಗೆಟಿವ್ ಎಂಬುದಾಗಿ ಪರೀಕ್ಷೆಯಿಂದ ತಿಳಿದು ಬಂದಿದ್ದು, ರಾಜ್ಯದ ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಆಗಿದೆ.

ಈ ಸಂಬಂಧ ವಿಜಯನಗರ ಡಿಹೆಚ್‌ಓ ಡಾ.ಜನಾರ್ಧನರೆಡ್ಡಿ ಮಾಹಿತಿ ನೀಡಿದ್ದು, ಆಫ್ರಿಕಾದಿಂದ ಹೊಸಪೇಟೆಗೆ ನವೆಂಬರ್ 25ರಂದು ವಾಪಾಸ್ ಆಗಿದ್ದಂತ ಇಬ್ಬರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗಾಗಿ ಕಳುಹಿಸಿ ಕೊಡಲಾಗಿತ್ತು. ಈ ಪರೀಕ್ಷೆಯಲ್ಲಿ ಅವರಿಗೆ ಕೊರೋನಾ ನೆಗೆಟಿವ್ ಎಂಬುದಾಗಿ ದೃಢಪಟ್ಟಿರೋದಾಗಿ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು