Categories: ಕಲಬುರಗಿ

ಕಾಂಗ್ರೆಸ್ ಪಕ್ಷಕ್ಕೆ ಸಂಪೂರ್ಣ ಬೆಂಬಲ ಸೂಚಿಸಿದ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ.

ಕಲಬುರಗಿ: ಕಲ್ಬುರ್ಗಿ ಜಿಲ್ಲಾ ಘಟಕದ ಅಧ್ಯಕ್ಷರಾದ ಮಹಾಂತೇಶ್ ಎಸ್ ಕೌಲಗಿ ಇವರ ನೇತೃತ್ವದಲ್ಲಿ. ಕಲ್ಬುರ್ಗಿ ಲೋಕಸಭಾ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಯವರಿಗೆ ಅತಿ ಹೆಚ್ಚು ಮತಗಳಿಂದ ಗೆಲ್ಲಿಸುವಂತೆ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಕಲ್ಬುರ್ಗಿ ಜಿಲ್ಲೆಯ ಹಿಂದುಳಿದ ವರ್ಗಗಳು ಮತ್ತು ಅಲೆಮಾರಿ ಸಮುದಾಯದ ಬಂಧುಗಳು ಒಳಗೊಂಡು. ಒಂದು ಐತಿಹಾಸಿಕ ಚುನಾವಣಾ ಪೂರ್ವ ಪೂರ್ವಭಾವಿ ಸಭೆಯನ್ನು ಮಾಡಲಾಯಿತು.

ಈ ಸಭೆಯಲ್ಲಿ ಕಲ್ಬುರ್ಗಿ ಜಿಲ್ಲೆಯ ಉಸ್ತುವಾರಿ ಸಚಿವರಾದ ಪ್ರಿಯಾಂಕ ಖರ್ಗೆ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣ ಪ್ರಕಾಶ್ ಪಾಟೀಲ್ ರವರು ಸಮಸ್ತ ಯಾದವ್ ಸಮಾಜ್ .ಸವಿತಾ ಸಮಾಜ. ಹೇಳವರು ಸಮಾಜ್. ವಿಶ್ವಕರ್ಮ ಸಮಾಜ. ಉಪ್ಪಾರ್ ಸಮಾಜ್. ಮಡಿವಾಳ ಸಮಾಜ. ಗೊಂದಳಿ ಸಮಾಜ್ .ಗಿಸಾಡಿ ಸಮಾಜ. ಕಟಬು ಸಮಾಜ್. ನೇಕಾರ ಸಮಾಜ. ಮಾಳಿ ಸಮಾಜ್ .ಹಟಗಾರ ಸಮಾಜ್ .ಕಂಬಾರ ಸಮಾಜ .ಕುಂಬಾರ ಸಮಾಜ .ಹೂಗಾರ್ ಸಮಾಜ. ದುರ್ಗಿ ಮುರ್ಗಿ ಸಮಾಜ. ಅಡವಿಗೊಲ್ಲ ಸಮಾಜ್. ಮೇಧಾ ಸಮಾಜ. ಬಂಡಗಾರ ಸಮಾಜ್. ಧರ್ವೇಶ ಸಮಾಜ. ಈ ಎಲ್ಲ ಸಮುದಾಯಗಳ ಮುಖಂಡರುಗಳನ್ನು ಉದ್ದೇಶಿಸಿ ಮಾತನಾಡಿ ಮತಯಾಚನೆ ಮಾಡಿದರು.

ಸಭೆಯನ್ನುದ್ದೆಶಿಸಿ ಮಾತನಾಡಿದ ಒಕ್ಕೂಟದ ಜಿಲ್ಲಾಧ್ಯಕ್ಷ ಮಹಾಂತೇಶ್ ಕೌಲಗಿ ಮಾತನಾಡಿ ಸಮಸ್ತ ಎಲ್ಲಾ ಹಿಂದುಳಿದ ಸಮುದಾಯಗಳಿಗೆ ವಸತಿ. ಸಮುದಾಯ ಭವನ. ಕಲ್ಯಾಣ ಮಂಟಪ ಮತ್ತು ಇತರೆ ಸರಕಾರಿ ಯೋಜನೆಗಳನ್ನು ದೊರಕುವಂತೆ ಮಾಡಿಕೊಡಬೇಕೆಂದು ಮನವಿ ಮಾಡಿಕೊಂಡಾಗ ಮಾನ್ಯ ಸಚಿವರು ಮುಕ್ತ ಮನಸ್ಸಿನಿಂದ ಒಪ್ಪಿಕೊಂಡು ನೆರೆದಿದ್ದ ಸಾವಿರಾರು ಸಂಖ್ಯೆಯ ಸಮುದಾಯದ ಜನರ ಮಧ್ಯೆ ಭರವಸೆಯನ್ನು ನೀಡಿದರು. ಈ ಸಭೆಯಲ್ಲಿ ಹಿಂದುಳಿದ ವರ್ಗದ ಎಲ್ಲ ಸಮುದಾಯದ ಜಿಲ್ಲಾಧ್ಯಕ್ಷರು ಮಾತನಾಡಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಘೋಷಿಸಿದರು. ಸಭೆಯಲ್ಲಿ ಯಾದವ್ ಸಮಾಜದ ಜಿಲ್ಲಾಧ್ಯಕ್ಷರಾದ ಕುಮಾರ್ ಯಾದವ್.

ಹೆಳವರ ಸಮಾಜದ ಜಿಲ್ಲಾಧ್ಯಕ್ಷರಾದ ಸಾಯಬಣ್ಣ ಹೇಳವರ್. ಮಡಿವಾಳ ಸಮಾಜದ ಜಿಲ್ಲಾಧ್ಯಕ್ಷರಾದ ವಿಠ್ಠಲ್ ಮಡಿವಾಳ. ಸವಿತಾ ಸಮಾಜದ ಅಧ್ಯಕ್ಷರಾದ ಶರಣು ಸೂರ್ಯವಂಶಿ. ನೇಕಾರ ಸಮಾಜದ ಜಿಲ್ಲಾಧ್ಯಕ್ಷರಾದ ಜಗನ್ನಾಥ್ ಸೊನ್ನದ್. ಮಾಳಿ ಸಮಾಜದ ಅಧ್ಯಕ್ಷರಾದ ಉಪೇಂದ್ರ ದೂಳೆ. ಉಪ್ಪಾರ್ ಸಮಾಜದ ಅಧ್ಯಕ್ಷರಾದ ಶ್ರೀನಿವಾಸ್ ಸಾಗರ್ ಕರ್. ಕಟಬು ಸಮಾಜದ ಜಿಲ್ಲಾಧ್ಯಕ್ಷರಾದ ಅರುಣ್ ಕುಮಾರ್ ಕಟ್ಟಿಮನಿ .ಗಿಸಾಡಿ ಸಮಾಜದ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ್ ಪವಾರ್.

ಅಡವಿಗೊಲ್ಲ ಸಮಾಜದ ಅಧ್ಯಕ್ಷರಾದ ಹರೀಶ್ ವಿ ಶಾಸ್ತ್ರಿ. ಹಡಪದ ಸಮಾಜದ ಅಧ್ಯಕ್ಷರಾದ ಮಲ್ಲು ಸಾವಳಗಿ. ಕುಂಬರ ಸಮಾಜದ ಅಧ್ಯಕ್ಷರಾದ ಈರಣ್ಣ ಕುಂಬಾರ್. ಮಹಿಳಾ ಘಟಕದ ಅಧ್ಯಕ್ಷರಾದ ಜ್ಯೋತಿ. ಗೊಂದಳಿ ಸಮಾಜದ ಅಧ್ಯಕ್ಷರಾದ ಚಂದ್ರಶೇಖರ ಗೊಂದಳಿ. ದುರ್ಗಿ ಮುರ್ಗಿ ಸಮಾಜದ ಅಧ್ಯಕ್ಷರಾದ ಸ್ವಾಮಿ ದುರ್ಗ ಮುರ್ಗಿ. ಬಂಡಗಾರ ಸಮಾಜದ ಅಧ್ಯಕ್ಷರಾದ ರಾಜೇಂದ್ರ ಬಂಡಗ. ಧರ್ವೆ ಸಿ ಸಮಾಜದ ಜಿಲ್ಲಾಧ್ಯಕ್ಷರಾದ ಮದ್ದುಮ್ ಶಹ. ಹೀಗೆ ಸುಮಾರು 21 ಹಿಂದುಳಿದ ವರ್ಗಗಳ. ಅಲೆಮಾರಿ ಸಮುದಾಯಗಳ ಮುಖಂಡಗಳು ಭಾಗವಹಿಸಿ ಚುನಾವಣಾ ಪೂರ್ವ ಭಾವಿ ಸಭೆಯನ್ನು ಯಶಸ್ವಿಗೊಳಿಸಿದರು.

ಕಲ್ಬುರ್ಗಿ ಜಿಲ್ಲೆಯ ಹಿಂದುಳಿದ ವರ್ಗಗಳ ಅಗ್ರಗಣ್ಯ ನಾಯಕರು ಜಿಲ್ಲೆಯ .ರಾಜ್ಯಮಟ್ಟದ ಹೋರಾಟಗಾರರು ಮತ್ತು ಎಲ್ಲ ಸಮಾಜದ ಪ್ರೀತಿಗೆ ಪಾತ್ರರಾಗಿರುವ ಯಾವತ್ತೂ ಸಮಾಜ ಮುಖಿಯಾಗಿ ಕಾರ್ಯನಿರ್ವಹಿಸುವ ಮಾಂತೇಶ್ ಕೌಲಗಿ ಅಣ್ಣನವರ ಮನವಿಯ ಮೇರೆಗೆ ಕೇವಲ ಒಂದೇ ದಿವಸದಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಎಲ್ಲ ಸಮುದಾಯದ ಬಂಧುಗಳು ಆಗಮಿಸಿ ಸಭೆ ಯಶಸ್ವಿಗೊಳಿಸಿದ್ದಕ್ಕೆ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ವತಿಯಿಂದ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸುತ್ತೇವೆ. ಇಂತಿ ತಮ್ಮ ವಿಶ್ವಾಸಿಕರು ಸೈಬಣ್ಣ ಹೇಳವರ್. ಚಂದ್ರಕಾಂತ್ ಪವರ್. ಮಲ್ಲೇಶಿ ಯಾದವ್.ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Nisarga K

Recent Posts

ಹಾಡಹಗಲೇ ಚಾಕುವಿನಿಂದ ಇರಿದು ಯುವಕನ ಭೀಕರ ಹತ್ಯೆ

ಚಾಕುವಿನಿಂದ ಇರಿದು ಹಾಡಹಗಲೇ ಯುವಕನ ಭೀಕರ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಅಫಜಲಪುರ ತಾಲೂಕಿನ ‌ಮಣ್ಣೂರು ಗ್ರಾಮದಲ್ಲಿ ನಡೆದಿದೆ. ಪ್ರೀತಿ…

1 min ago

ಮೊಬೈಲ್‌ ಕಳ್ಳತನಕ್ಕೆ ಯತ್ನಿಸಿದ ಕಳ್ಳಿಗೆ ಬಿತ್ತು ಧರ್ಮದೇಟು

ಮೊಬೈಲ್‌ ಕಳ್ಳತನಕ್ಕೆ ಯತ್ನಿಸಿದ ಕಳ್ಳಿಗೆ ಸಾರ್ವಜನಿಕರೇ ಧರ್ಮದೇಟು ನೀಡಿದ ಘಟನೆ ಉಡುಪಿ ಸಿಟಿ ಬಸ್‌ ನಿಲ್ದಾಣದಲ್ಲಿ ಇಂದು ಸಂಭವಿಸಿದೆ

13 mins ago

ಪೆನ್‌ಡ್ರೈವ್‌ ಕೇಸ್‌ : ವಕೀಲ ದೇವರಾಜೇಗೌಡಗೆ 14 ದಿನ ನ್ಯಾಯಾಂಗ ಬಂಧನ

ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಕೇಸ್‌, ಮಹಿಳೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿತರಾಗಿರುವ ಬಿಜೆಪಿ ಮುಖಂಡ, ವಕೀಲರೂ ಆಗಿರುವ ದೇವರಾಜೇಗೌಡರನ್ನು 14…

24 mins ago

ರೈತನ ಆರು ತಿಂಗಳ ಶ್ರಮ ಅರ್ಧಗಂಟೆಯಲ್ಲೇ ಹೋಮ

ಇಂದು ಸಂಜೆ ಸುರಿದ ಬಾರಿ ಮಳೆಗೆ ರೈತ ಬೆಳೆದಿದ್ದ ಬಾಳೆ ಫಸಲು ಸಂಪೂರ್ಣವಾಗಿ ನಾಶವಾಗಿರುವ ಘಟನೆ ಚಾಮರಾಜನಗರ ತಾಲೂಕಿನ ಉತ್ತುವಳ್ಳಿಯಲ್ಲಿ…

57 mins ago

ಬಾರ್ ಗೆ ನುಗ್ಗಿದ ಕಳ್ಳರು: 60 ಲೀಟರ್ ಮದ್ಯ ಕಳ್ಳತನ

ಜಿಲ್ಲೆಯ ಹನೂರು ಪಟ್ಟಣದ ಬಂಡಳ್ಳಿ ಮುಖ್ಯ ರಸ್ತೆಯಲ್ಲಿರುವ ಅಮೃತ್ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ತಡ ರಾತ್ರಿ ಕಳ್ಳರ ತಂಡ…

1 hour ago

ಬಾಳೆ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಕೋರಿ ರಾಷ್ಟ್ರೀಯ ಹೆದ್ದಾರಿ ಬಂದ್ ಚಳುವಳಿ

ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ನೇತೃತ್ವದಲ್ಲಿ ಚಾಮರಾಜನಗರದ ಸತ್ಯಮಂಗಲಂ ಮುಖ್ಯ ರಸ್ತೆಯಲ್ಲಿ ಜಮಾಯಿಸಿದ ಸಂಘದ ಪದಾಧಿಕಾರಿಗಳು…

1 hour ago