ರಾಯಚೂರು: ತರಗತಿ ನಡೆಯುತ್ತಿದ್ದಾಲೇ ಬಿರುಕು ಬಿಟ್ಟಿದ್ದಂತ ಶಾಲೆಯ ಮೇಲ್ಛಾವಣಿ ಕುಸಿದು ಬಿದ್ದ ಪರಿಣಾಮ ಓರ್ವ ವಿದ್ಯಾರ್ಥಿನಿಯ ಕಾಲಿನ ಬೆರಳು ತುಂಡಗಿರುವ ಘಟನೆ ರಾಯಚೂರಿನ ದೇವದುರ್ಗದಲ್ಲಿ ನಡೆದಿದೆ.
ರಾಯಚೂರು ಜಿಲ್ಲೆಯ ದೇವದುರ್ಗದ ಸರ್ಕಾರಿ ಶಾಲೆಯಲ್ಲಿ ಇಂದು ಘೋರ ಅವಘಡ ಸಂಭವಿಸಿದೆ. 7ನೇ ತರಗತಿಯ ಶಾಲೆ ನಡೆಯುತ್ತಿದಾಗಲೇ ಶಾಲಾ ಕೊಠಡಿಯ ಮೇಲ್ಛಾವಣಿಯ ಸಿಲಿಂಗ್ ಕುಸಿದು ಬಿದ್ದಿದೆ. ಈ ಪರಿಣಾಮ 7ನೇ ತರಗತಿಯ ಶ್ರೀದೇವಿಯ ಬಲಗಾಲಿನ ಬೆರಳು ತುಂಡಗಿರುವುದಾಗಿ ತಿಳಿದು ಬಂದಿದೆ. ಸದ್ಯ ಚಿಕಿತ್ಸೆಗಾಗಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಸಂಬಂಧ ದೇವದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಶಾಲೆಯ ಮೇಲ್ಛಾವಣಿ ಕುಸಿಯೋ ಹಂತದಲ್ಲಿದ್ದರೂ ಮಕ್ಕಳನ್ನು ಕೂರಿಸಿ ತರಗತಿ ನಡೆಸಲಾಗಿದ್ದು, ಶಿಕ್ಷಕರ ನಿರ್ಲಕ್ಷ್ಯಕ್ಕೆ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.